ಕ್ರೀಡೆ/ಸಿನಿಮಾಕ್ರೈಂಬೆಂಗಳೂರುವೈರಲ್ ನ್ಯೂಸ್

ವರ್ತೂರು ಸಂತೋಷ್ ‘ಕಿತ್ತೋದ್ ನನ್ ಮಗ’ ಎಂದ ನಟ ಜಗ್ಗೇಶ್ ವಿರುದ್ಧ ಜನಾಕ್ರೋಶ..! ಕ್ಷಮೆ ಕೇಳದಿದ್ರೆ ಜಗ್ಗೇಶ್​ ಮನೆಗೆ ಮುತ್ತಿಗೆ..?

249

ನ್ಯೂಸ್ ನಾಟೌಟ್: ನಟ ಜಗ್ಗೇಶ್​ (Actor Jaggesh) ತಮ್ಮ ಸೇಟ್ಮೆಂಟ್​​ನಿಂದಲೇ ಆಗಾಗ ಸುದ್ದಿ ಆಗುತ್ತಾರೆ. ಹುಲಿ ಉಗುರು ಲಾಕೆಟ್​​ ಕೇಸ್​ಗೆ ಸಂಬಂಧಿಸಿದಂತೆ ವರ್ತೂರ್ ಸಂತೋಷ್ ಬಗ್ಗೆ ನಟ ಜಗೇಶ್​ ಮಾತಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಿರಿಯ ನಟರಾಗಿ ಜಗ್ಗೇಶ್ ಈ ರೀತಿ ಮಾತಾಡಿದ್ದು ಸರಿಯಲ್ಲ ಎಂದು ಹಲವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಹಲವರು ತಿರುಗಿಬಿದ್ದಿದ್ದಾರೆ.

ವರ್ತೂರು ಸಂತೋಷ್ (Varthuru Santhosh) ಕೂಡ ಸೈಲೆಂಟ್ ಆಗಿಯೇ ತಿರುಗೇಟು ಕೊಟ್ಟಿದ್ದಾರೆ. ಇದೀಗ ವಹ್ನಿಕುಲ ಕ್ಷತ್ರಿಯ ಸಮುದಾಯದ ಕೆಲವು ಮುಖಂಡರು ಜಗ್ಗೇಶ್​ ಹೇಳಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ವಹ್ಮಿಕುಲ ಕ್ಷತ್ರಿಯ ಸಮುದಾಯದ ಮುಖಂಡರು ಜಗ್ಗೇಶ್ ವಿರುದ್ಧ ತಿರುಗಿಬಿದ್ದಿದ್ದಾರೆ. ತಮ್ಮ ಸಮುದಾಯದ ಯುವಕನ ಬಗ್ಗೆ ಜಗ್ಗೇಶ್ ಕೀಳಾಗಿ ಮಾತಾಡಿದ್ದು ಸರಿಯಲ್ಲ ಎನ್ನಲಾಗಿದೆ.

ವರ್ತೂರು ಸಂತೋಷ್ ಬಳಿ ನಟ ಜಗ್ಗೇಶ್ ಕ್ಷಮೆ ಕೇಳಲೇಬೇಕು ಇಲ್ಲವಾದ್ರೆ. ಅವರ ಮನೆಯ ಮುಂದೆ ಪ್ರತಿಭಟನೆ ಮಾಡಿ ಬಳಿಕ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಂತೋಷ್ ಒಳ್ಳೆಯ ಮನುಷ್ಯ. ಸಣ್ಣ ಹುಡುಗನನ್ನು ಕೂಡ ಅಣ್ಣ ಎಂದು ಕರೀತಾರೆ. ಅಂತಹವರ ಬಗ್ಗೆ ಕೆಟ್ಟ ಪದಗಳನ್ನು ಬಳಸಿದ್ದು ಸರಿಯಲ್ಲ. ಇದರಲ್ಲೇ ನೀನು ಎಲ್ಲರಿಗೂ ಯಾವ ರೀತಿ ಮರ್ಯಾದೆ ಕೊಡುತ್ತೀಯ ಎನ್ನುವುದು ಗೊತ್ತಾಗುತ್ತಿದೆ. ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಮುತ್ತಿಗೆ ಹಾಕುವುದಾಗಿ ನಾರಾಯಣ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಸಿನಿಮಾದ ಕಾರ್ಯಕ್ರಮದಲ್ಲಿ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್, ನಾನು ಹುಲಿ ತರ ಧೈರ್ಯವಾಗಿ ಬದುಕಬೇಕು ಅಂತ ನಾನು 20ನೇ ವಯಸ್ಸಿನವನಿದ್ದಾಗಲೇ ನನ್ನ ತಾಯಿ ನನಗೆ ಹುಲಿ ಉಗುರಿನ ಪೆಂಡೆಂಟ್​ ನೀಡಿದ್ರು. ಆದರೆ ಯಾವನೋ ಕಿತ್ತೋದ್ ನನ್ ಮಗ ನಿಜವಾದ ಹುಲಿ ಉಗುರು ಹಾಕ್ಕೊಂಡು ಟಿವಿಗೆ ಹೋಗಿ ಅಲ್ಲಿ ತಗಲಾಕ್ಕೊಂಡ ಎಂದು ಹೇಳಿದ್ರು ಎಂಬ ಕಾರಣಕ್ಕೆ ಈ ವಿವಾದ ಜೋರಾಗಿದೆ.

See also  10 ಸಾವಿರ ಫಲಾನುಭವಿಗಳ ಬಿಎಪಿಎಲ್ ಕಾರ್ಡ್ ರದ್ದು, 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂಬ ವಿಚಾರಕ್ಕೆ ಆಹಾರ ನಾಗರಿಕ ಸರಬರಾಜು ಇಲಾಖೆ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget