ಬೆಂಗಳೂರುವೈರಲ್ ನ್ಯೂಸ್

‘ಜಗ್ಗೇಶ್ ಚಪ್ಪಲಿಗೂ ನಾವು ಸಮ ಇಲ್ಲ’ಎಂದದ್ದೇಕೆ ಡ್ರೋನ್ ಪ್ರತಾಪ್ ತಂದೆ..? ತಂದೆ – ತಾಯಿಯ ನಂಬರ್ ಬ್ಲಾಕ್ ಮಾಡಿದ ಬಗ್ಗೆ ಪ್ರತಾಪ್ ತಂದೆ ಹೇಳಿದ್ದೇನು?

271

ನ್ಯೂಸ್ ನಾಟೌಟ್: ಡ್ರೋನ್’ ಪ್ರತಾಪ್ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಸ್ಪರ್ಧಿಯಾಗಿ ಭಾರಿ ಸುದ್ದಿಯಾಗುತ್ತಿದ್ದು, ಈ ಮಧ್ಯೆ ತನ್ನ ತಂದೆ-ತಾಯಿ ಜೊತೆಗೆ ಪ್ರತಾಪ್ ಮಾತನಾಡೋದನ್ನು ಬಿಟ್ಟಿದ್ದಾರಂತೆ ಎನ್ನಲಾಗಿದೆ. ನನ್ನ ಪಾಲಕರ ಜೊತೆ ಮಾತಾಡಬೇಕು ಅಂತ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ತಾರಮ್ಮನ ಮುಂದೆ ಹೇಳಿಕೊಂಡು ಅತ್ತಿದ್ದರು. ಈಗ ಮಗನ ಬಗ್ಗೆ ಪ್ರತಾಪ್ ತಂದೆ ಮರಿಮಾದಯ್ಯ ಯುಟ್ಯೂಬ್‌ ಚಾನೆಲ್‌ವೊಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.

“ನನ್ನ ಮಗ ಪ್ರತಾಪ್ ಬಿಗ್ ಬಾಸ್ ಶೋಗೆ ಹೋಗಿರೋದು ತುಂಬ ಖುಷಿ. ನನ್ನ ಮಗ ಹೆಣ್ಣು ಮಕ್ಕಳನ್ನು ಗೌರವಿಸುತ್ತಾನೆ. ಅವನು ಕೆಟ್ಟ ರೀತಿಯಲ್ಲಿ ನೋಡಿದ್ರೆ ಅವನು ಯಾವುದೋ ಮಟ್ಟಕ್ಕೆ ಹೋಗುತ್ತಿದ್ದ. ಹೆಣ್ಣು ಮಕ್ಕಳನ್ನು ತನ್ನ ಅಕ್ಕ -ತಂಗಿಯರು ಅಂತಲೇ ಭಾವಿಸುತ್ತಾನೆ” ಎಂದು ಪ್ರತಾಪ್ ತಂದೆ ಹೇಳಿದ್ದಾರೆ.

“ನನ್ನ ಮಗ ನಮ್ಮ ನಂಬರ್‌ನ್ನು ಬ್ಲಾಕ್ ಮಾಡಿದ್ದಾನೆ. ಅವನು ಬೇಸರದಲ್ಲಿ ಇರೋದಿಕ್ಕೆ ನಮ್ಮ ಫೋನ್ ನಂಬರ್‌ನ್ನು ಬ್ಲ್ಯಾಕ್ ಮಾಡಿದ್ದಾನೆ. ಇಡೀ ಕರ್ನಾಟಕ, ಭಾರತದ ಜನರು ನಮ್ಮ ಮಗನನ್ನು ಗೆಲ್ಲಿಸಬೇಕು” ಎಂದು ಪ್ರತಾಪ್ ತಂದೆ ಮರಿಮಾದಯ್ಯ ಹೇಳಿದ್ದಾರೆ.

ನನ್ನ ತಂದೆ-ತಾಯಿ ಜೊತೆ ಮಾತಾಡದೆ ಮೂರು ವರ್ಷ ಆಯ್ತು. ಎಲ್ಲರನ್ನು ದೂರ ಇಟ್ಟಿದ್ದೀನಿ ಅಂತ ಪ್ರತಾಪ್ ಹೇಳಿಕೊಂಡು ಕಣ್ಣೀರು ಹಾಕಿದ್ದರು ಎನ್ನಲಾಗಿದೆ.
“ನಟ ಜಗ್ಗೇಶ್ ಕಾಲ ಚಪ್ಪಲಿಗೂ ನಾವು ಸಮಾನರಲ್ಲ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಪ್ರತಾಪ್‌ಗೆ ಎಷ್ಟೇ ಅವಮಾನ ಮಾಡಿದರೂ ನಾನು ಬೇಸರ ಮಾಡಿಕೊಳ್ಳೋದಿಲ್ಲ. ಅದೊಂದು ಆಟ ಅಷ್ಟೇ. ಉಳಿದ ಸ್ಪರ್ಧಿಗಳು ಕೂಡ ನಮ್ಮ ಮಕ್ಕಳಿದ್ದ ಹಾಗೆ..ಒಂದು ಸಮಯದಲ್ಲಿ ಆ ಮಕ್ಕಳು ಕೂಡ ತಾವು ತಪ್ಪು ಮಾಡಿದ್ದೇವೆ ಅಂತ ಬೇಸರ ಮಾಡಿಕೊಳ್ತಾರೆ” ಎಂದು ಪ್ರತಾಪ್ ತಂದೆ ಮರಿಮಾದಯ್ಯ ಹೇಳಿದ್ದಾರೆ.

ಪ್ರತಾಪ್ ಅವರು ತಾನು ‘ಡ್ರೋನ್’ ಅನ್ವೇಷಣೆ ಮಾಡಿದ್ದೇನೆ ಎಂದು ಹೇಳಿಕೊಂಡು ಓಡಾಡಿದ್ದರು. ಆರಂಭದಲ್ಲಿ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನಲ್ಲಿ ಪ್ರತಾಪ್ ಸಾಧನೆ ಬಗ್ಗೆ ಜಗ್ಗೇಶ್ ಹೊಗಳಿದ್ದರು. ಆನಂತರದಲ್ಲಿ ಪ್ರತಾಪ್ ಮಾಡಿರೋದು ಮೋಸ ಅಂತ ಗೊತ್ತಾಗಿದೆ. ಆ ಮೇಲೆ ಜಗ್ಗೇಶ್ ಪ್ರತಾಪ್‌ರನ್ನು ನಂಬಲು ರೆಡಿ ಇಲ್ಲ ಎಂಬಂತೆ ಹೇಳಿಕೊಂಡಿದ್ದರು ಎನ್ನಲಾಗಿದೆ.

See also  ಅಕ್ರಮ ಚಿನ್ನ ಸಾಗಾಟದಲ್ಲಿ ಅರೆಸ್ಟ್ ಆದ ನಟಿಯ ಕಂಪನಿಗೆ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರು..! ಪ್ರಭಾವಿಗಳ ಕೈವಾಡದ ಶಂಕೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget