ಕರಾವಳಿಸುಳ್ಯ

ನಾಳೆ ಸೌಜನ್ಯ ಪರ ಐವರ್ನಾಡಿನಲ್ಲಿ ನ್ಯಾಯಕ್ಕಾಗಿ ಆಗ್ರಹ, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವಾರು ನಾಯಕರು ಭಾಗಿ, ನ್ಯೂಸ್ ನಾಟೌಟ್ ನಲ್ಲಿ ನೇರ ಪ್ರಸಾರ

ನ್ಯೂಸ್ ನಾಟೌಟ್: ಸೌಜನ್ಯ ಪರ ಹೋರಾಟ ಸಮಿತಿ ಐವರ್ನಾಡು ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಭಾನುವಾರ ಐವರ್ನಾಡಿನ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಮಧ್ಯಾಹ್ನ ೩ ಗಂಟೆಗೆ ಆರಂಭವಾಗಲಿದೆ. ಈ ಕಾರ್ಯಕ್ರಮಕ್ಕೆ ಹಿಂದೂ ಹುಲಿ ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ತುಳು ಜಾನಪದ ವಾಗ್ಮಿ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ, ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟನವರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿಯ ಸುಳ್ಯ ತಾಲೂಕು ಸಮಿತಿಯ ಮುಖಂಡರಾದ ಆದ ಎನ್. ಟಿ. ವಸಂತ, ಸರಸ್ವತಿ ಕಾಮತ್, ಪ್ರಶಾಂತ್ ಮುರುಳ್ಯ, ಹರೀಶ್ ಕುಮಾರ್ ಹುದೇರಿ, ರಾಜೇಶ್ ನಿಂತಿಕಲ್ಲು, ಚಂದ್ರಶೇಖರ ಕೊಡ್ಲೆ, ಉದಯಕುಮಾರ್ ಕಾರ್ಯತಡ್ಕ, ಸತೀಶ್ ರೈ ಪೋಗ್ಗೋಳಿ, ಕಿಶೋರ್ ರೈ ಮಾಲ ಸೇರಿದಂತೆ ಹಲವಾರು ಮಂದಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ. ನ್ಯೂಸ್ ನಾಟೌಟ್ ನಲ್ಲಿ ಇದರ ನೇರ ಪ್ರಸಾರವನ್ನು ವೀಕ್ಷಿಸುವ ಅವಕಾಶವನ್ನು ಮಾಡಲಾಗುತ್ತಿದೆ.

Related posts

ಎನ್ಎಮ್ ಸಿ ವಿದ್ಯಾರ್ಥಿ ಪ್ರೋ ಕಬಡ್ಡಿ 2022ರ ಚಾಂಪಿಯನ್ ತಂಡದ ಆಟಗಾರ ಅಭಿಷೇಕ್ ಎಸ್ ಗೆ ಅದ್ದೂರಿ ಸ್ವಾಗತ

ಸೌಜನ್ಯ ಪ್ರಕರಣದ ಮರು ತನಿಖೆಗೆ ತೀವ್ರಗೊಂಡ ಒತ್ತಾಯ, ಸುಳ್ಯದಲ್ಲಿ ಗೌಡರ ಯುವ ಸೇವಾ ಸಂಘದಿಂದ ವಾಹನ ಜಾಥಾ, ತಹಶೀಲ್ದಾರ್‌ಗೆ ಮನವಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆ, ಸುಳ್ಯ-ಕಡಬ ತಾಲೂಕಿನ ಆಯ್ದ ಶಾಲೆಗಳಿಗೆ ರಜೆ ಘೋಷಣೆ