ಕರಾವಳಿ

ಐವರ್ನಾಡು : ಬೆಂಕಿ ತಗುಲಿ ಕಣ್ಣೆದುರೇ ಸುಟ್ಟು ಕರಕಲಾದ ಮನೆ

ಐವರ್ನಾಡು: ಇಲ್ಲಿನ ಕೊಯಿಲದಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಡೆದಿದೆ.

ಕೊಯಿಲ ಕರಿಯಪ್ಪ ಎಂಬುವವರು ದುರ್ಘಟನೆಯಲ್ಲಿ ಮನೆ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಸಹಕರಿಸಿದ್ದಾರೆ.

ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದು ಕರಿಯಪ್ಪರವರು ಸಂಜೆ ಹೊತ್ತಿಗೆ ಐವರ್ನಾಡು ಪೇಟೆ ಕಡೆಗೆ ಹೋಗಿದ್ದರೆನ್ನಲಾಗಿದೆ. ಮನೆಗೆ ಬೆಂಕಿ ಹತ್ತಿ ಉರಿಯುತ್ತಿದ್ದುದನ್ನು ಹತ್ತಿರದ ಮನೆಯವರು ನೋಡಿ ಕರಿಯಪ್ಪರವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳೀಯರು ಸೇರಿ ಬೆಂಕಿ ನಂದಿಸಲು ಪ್ರಾರಂಭ ಮಾಡಿದ್ದು ಬಳಿಕ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ.

Related posts

ಅಮರ ಸಂಘಟನಾ ಸಮಿತಿ (ರಿ) ಸುಳ್ಯ ವತಿಯಿಂದ ಚೊಕ್ಕಾಡಿ ಪ್ರೌಢಶಾಲೆಗೆ ಫ್ಯಾನ್ ಹಸ್ತಾಂತರ

ಬೆಳ್ತಂಗಡಿ:ಯುವಕನೋರ್ವ ಶಂಕಿತ ರೇಬಿಸ್ ಗೆ ಬಲಿ,೩ ತಿಂಗಳ ಹಿಂದೆ ಮನೆ ನಾಯಿ ಕಡಿದಿದ್ದು,ಮೃತಪಟ್ಟಿತ್ತು

ಮುಸ್ಲಿಂ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ..! 3 ವರ್ಷದ ಮಗನ ಆಸೆ ಈಡೇರಿಸಿ ಭಾವೈಕ್ಯತೆ ಮೆರೆದ ತಂದೆ-ತಾಯಿ