ಕ್ರೈಂವೈರಲ್ ನ್ಯೂಸ್

ಮಾರಕಾಸ್ತ್ರ ತೋರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ಯಾರು..? 14, 16 ವರ್ಷದ ಬಾಲಕರ ಬಗ್ಗೆ ಪೊಲೀಸರು ಹೇಳಿದ್ದೇನು?

ನ್ಯೂಸ್ ನಾಟೌಟ್ : ಚಾಕು ತೋರಿಸಿ ಬೇದರಿಕೆ ಹಾಕಿ ಅಪ್ರಾಪ್ತೆ ಮೇಲೆ ಇಬ್ಬರು ಬಾಲಕರು ಅತ್ಯಾಚಾರ ಎಸಗಿರುವ ಘಟನೆ ಕಲಬುರ್ಗಿಯ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ.

ಬಾಲಕಿ ಕುಟುಂಬಸ್ಥರು ದುಡಿಯಲು ಮುಂಬೈಗೆ ತೆರಳಿದ್ದು, ವಿದ್ಯಾಭ್ಯಾಸಕ್ಕಾಗಿ ಹತ್ತು ವರ್ಷದ ಬಾಲಕಿ ಸಂಬಂಧಿ‌ಕರ ಮನೆಯಲ್ಲಿದ್ದಳು ಎಂದು ವರದಿ ತಿಳಿಸಿದೆ.

ಹೀಗಿರುವಾಗ 14 ಮತ್ತು 16 ವರ್ಷದ ಇಬ್ಬರು ಬಾಲಕರು ಸೇರಿ ಬಾಲಕಿಗೆ ಮಾರಕಾಸ್ತ್ರ ತೋರಿಸಿ ಹೆದರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಅತ್ಯಾಚಾರ ಮಾಡಿರುವ ದೃಶ್ಯ ತಮ್ಮ‌ ಮೊಬೈಲ್​​​ನಲ್ಲಿ ವಿಡಿಯೋ ಕೂಡಾ ಮಾಡಿದ್ದರು.

ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Related posts

ಗುದದ್ವಾರದೊಳಗೆ ಚಿನ್ನ ಬಚ್ಚಿಟ್ಟು ಸಾಗಾಟಕ್ಕೆ ಯತ್ನ

97 ಸಾವಿರ ಭಾರತೀಯರನ್ನು ಬಂಧಿಸಿದ್ದೇಕೆ ಅಮೆರಿಕ..? 730 ಮಂದಿ ಅನಾಥ ಮಕ್ಕಳನ್ನೂ ಸೆರೆ ಹಿಡಿದಿದ್ಯಾಕೆ ದೊಡ್ಡಣ್ಣ? ಏನಿದು ಪ್ರಕರಣ?

ಮೋದಿ ಮತ್ತು ಯೋಗಿಗೆ 16ರ ಬಾಲಕನಿಂದ ಕೊಲೆ ಬೆದರಿಕೆ! ಇಬ್ಬರನ್ನೂ ಮುಗಿಸುವುದಾಗಿ ಮೇಲ್!