Latestದೇಶ-ವಿದೇಶವೈರಲ್ ನ್ಯೂಸ್ಶಿಕ್ಷಣ

ಜೂ.10ರಂದು ಭಾರತದಿಂದ 4 ಗಗನಯಾತ್ರಿಗಳ ಸಹಿತ ಬಾಹ್ಯಾಕಾಶ ಯಾನ..! ಎಲಾನ್‌ ಮಸ್ಕ್‌ ನೇತೃತ್ವದ ಸ್ಪೇಸ್‌-ಎಕ್ಸ್‌ ಸಂಸ್ಥೆಯಿಂದ ನೆರವು

604

ನ್ಯೂಸ್ ನಾಟೌಟ್: ಭಾರತವು ಗಗನಯಾತ್ರಿ ಅಥವಾ ನಿಯೋಜಿತ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಜೂನ್‌ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ. ಶುಕ್ಲಾ ಅವರೊಂದಿಗೆ ಮೂವರು ಗಗನಯಾನಿಗಳು ಸಹ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಪ್ರಯಾಣ ಬೆಳೆಸಲಿದ್ದಾರೆ.

ಇದಕ್ಕಾಗಿ ಎಲಾನ್‌ ಮಸ್ಕ್‌ ನೇತೃತ್ವದ ಸ್ಪೇಸ್‌-ಎಕ್ಸ್‌ ಸಂಸ್ಥೆಯು ʻಡ್ರ್ಯಾಗನ್ʼ (Dragon) ಎಂಬ ಬಾಹ್ಯಾಕಾಶ ನೌಕೆಯನ್ನೂ ಸಿದ್ಧಪಡಿಸಿದ್ದು, ಉಡಾವಣೆಗೆ ಸಜ್ಜುಗೊಳಿಸಲಾಗಿದೆ. ಈ ಡ್ರ್ಯಾಗನ್‌ ನೌಕೆಯನ್ನು ಸ್ಪೆಸ್‌-ಎಕ್ಸ್‌ ಮರುಬಳಕೆ ಮಾಡಬಹುದಾದ ಫಾಲ್ಕನ್‌-9 ಎಂಬ ರಾಕೆಟ್‌ ನಲ್ಲಿ ಸಂಯೋಜಿಸಿದೆ ಎನ್ನಲಾಗಿದೆ.

ʻಆ್ಯಕ್ಸಿಯಂ-4ʼ ಕಾರ್ಯಕ್ರಮದ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುತ್ತಿರುವ ಶುಕ್ಲಾ ಅವರೊಂದಿಗೆ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು ಹಾಗೂ ಪೋಲಂಡ್‌ ನ ಸ್ಲಾವೋಸ್ ಯು.ವಿವ್‌ ಕಿ ಕೂಡ ಪಯಣಿಸಲಿದ್ದಾರೆ. ಒಟ್ಟು 14 ದಿನಗಳ ಕಾರ್ಯಾಚರಣೆ ಇದಾಗಿದೆ. ಅಂದಾಜು 28 ಗಂಟೆ ಪ್ರಯಾಣದ ಬಳಿಕ, ಜೂನ್ 11ರಂದು ಭಾರತೀಯ ಕಾಲಮಾನ ರಾತ್ರಿ 10.30ರ ವೇಳೆಗೆ ನಾಲ್ವರು ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲಿದ್ದಾರೆ.

ಜೂನ್ 11ರಂದು ತಡರಾತ್ರಿ 12.30ಕ್ಕೆ (ಭಾರತೀಯ ಕಾಲಮಾನ ರಾತ್ರಿ 10.30) ಡ್ರಾಗನ್ ಗಗನನೌಕೆಯನ್ನು ಐಎಸ್‌ ಎಸ್‌ ನೊಂದಿಗೆ ಜೋಡಣೆ (ಡಾಕಿಂಗ್) ಮಾಡಲಾಗುವುದು ಎಂದು ನಾಸಾ (NASA) ತಿಳಿಸಿದೆ. ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಕಳೆದ ವಾರ ಅಮೆರಿಕಕ್ಕೆ ಭೇಟಿ ನೀಡಿ, ʻಆ್ಯಕ್ಸಿಯಂ-4ʼ ಬಾಹ್ಯಾಕಾಶ ಕಾರ್ಯಕ್ರಮದ ಸಿದ್ಧತೆಯ ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ.
1984ರಲ್ಲಿ ಭಾರತದ ರಾಕೇಶ್ ಶರ್ಮಾ ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. ಅದಾದ ಮೇಲೆ 41 ವರ್ಷಗಳ ಬಳಿಕ, ಭಾರತ ಸರ್ಕಾರ ಮತ್ತೊಬ್ಬ ಗಗನಯಾನಿಯನ್ನ ಅಂತರಿಕ್ಷಕ್ಕೆ ಕಳುಹಿಸುತ್ತಿರುವುದು ವಿಶೇಷ.

ಈ ಎತ್ತು ದಾಖಲೆಯ ಮೊತ್ತಕ್ಕೆ ಮಾರಾಟ..! ಆರತಿ ಬೆಳಗಿ, ಪೂಜೆ ಸಲ್ಲಿಸಿ ಬೀಳ್ಕೊಟ್ಟ ಮನೆಯವರು

See also  ಬಾಲಕನನ್ನು ಅಡಿಕೆ ಮರಕ್ಕೆ ಕಟ್ಟಿ ಗುಪ್ತಾಂಗಕ್ಕೆ ಇರುವೆ ಬಿಟ್ಟು ಹಲ್ಲೆ..! ಹಕ್ಕಿ- ಪಿಕ್ಕಿ ಜನಾಂಗದ ಬಾಲಕನಿಗೆ ಚಿತ್ರಹಿಂಸೆ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget