ಕರಾವಳಿಸುಳ್ಯ

Chandrayaan3:ಚಂದ್ರಯಾನ-3 ರ ಕ್ಲೈಮ್ಯಾಕ್ಸ್ ಇಂದು!,ಸುಳ್ಯ ಕಲ್ಕುಡ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ನ್ಯೂಸ್ ನಾಟೌಟ್ : ಕೋಟ್ಯಂತರ ಸಂಖ್ಯೆಯ ಭಾರತೀಯರ ಚಿತ್ತ ಈಗ ಅಪರೂಪದ ಕ್ಷಣದತ್ತ ನೆಟ್ಟಿದೆ.ಕೋಟ್ಯಂತರ ಭಾರತೀಯರ ಎದೆಯಲ್ಲಿ ಡವ ಡವ ಆರಂಭವಾಗಿದೆ.2019ರ ಸೆಪ್ಟೆಂಬರ್ 6ರಂದು ಉಂಟಾಗಿದ್ದ ಆಘಾತ, ಸೋಲಿನ ನೋವು, ಹತಾಶೆಯ ನೆನಪು ಮರುಕಳಿಸುತ್ತಿದೆ. ಆ ನೋವು ಮತ್ತೆ ಎದುರಾಗದಿರಲಿ ಎನ್ನುವುದು ಜನರ ಪ್ರಾರ್ಥನೆ. ಅದಕ್ಕಾಗಿ ವಿಜ್ಞಾನಿಗಳು ಮಾತ್ರವಲ್ಲ, ಜನಸಾಮಾನ್ಯರೂ ದೇವರ ಮೊರೆ ಹೋಗುತ್ತಿದ್ದಾರೆ.ಇದೀಗ ಸುಳ್ಯದ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಲ್ಕುಡ ದೈವಸ್ಥಾನದಲ್ಲಿಯೂ ಚಂದ್ರಯಾನ –3 ರ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಇಂದು (ಆ 23) ಆ 20 ನಿಮಿಷಗಳು ಬಹುಶಃ ಪ್ರತಿಯೊಬ್ಬರ ಎದೆಬಡಿತ ಜೋರಾಗಿರುತ್ತದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಈ ಮಹತ್ವದ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರರಾಗಿರುವ ಜನರು ಒಂದೆಡೆಯಾದರೆ, 140 ಕೋಟಿ ಜನಸಂಖ್ಯೆಯ ನಿರೀಕ್ಷೆಯ ಭಾರವನ್ನು ಹೊತ್ತ ಇಸ್ರೋ ವಿಜ್ಞಾನಿಗಳ ಮೇಲೆ ಇರುವ ಅಸಾಧಾರಣ ಒತ್ತಡ ಇನ್ನೊಂದೆಡೆ.

ಸುಳ್ಯದ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಲ್ಕುಡ ದೈವಸ್ಥಾನದಲ್ಲಿಯೂ ಚಂದ್ರಯಾನ –3 ರ ಯಶಸ್ಸಿಗಾಗಿ ಸ್ಥಳೀಯ ಭಕ್ತಾದಿಗಳು ಹಾಗೂ ಆಡಳಿತ ಮಂಡಳಿಯವರು ಪ್ರಾರ್ಥನೆಯನ್ನು ಸಲ್ಲಿಸಿದರು. ಈ ವೇಳೆ ದೈವಸ್ಥಾನದ ಆಡಳಿತ ಧರ್ಮದರ್ಶಿ ಮಂಡಳಿಯ ಸದಸ್ಯ ಸೋಮನಾಥ ಪೂಜಾರಿ,ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ರವರು ಪ್ರಾರ್ಥನೆ ಸಲ್ಲಿಸಿದರು.

ಇನ್ನು ಉಡುಪಿ, ಬೆಂಗಳೂರು, ಕಲಬುರ್ಗಿ ರಾಮನಗರ, ಸಾಗರ ಸೇರಿದಂತೆ ರಾಜ್ಯದ ನಾನಾಕಡೆಗಳಲ್ಲಿ ಚಂದ್ರಯಾನ-3ರ ಯಶಸ್ವಿಯಾಗಲಿ ಎಂದು ದೇವಸ್ಥಾನ, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ರಾಮನಗರ ಹಾಗೂ ಸಾಗರದಲ್ಲಿ ಮುಸ್ಲಿಂ ಶಾಸಕರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

Related posts

ಕಂಬಳ ಮತ್ತು ಜಲ್ಲಿಕಟ್ಟುಗೆ ಸುಪ್ರೀಂ ಕೋರ್ಟ್​ ಹಸಿರು ನಿಶಾನೆ

ಸುಳ್ಯ: ಆತ್ಮಹತ್ಯೆ ಮಾಡಿಕೊಂಡ ಮಗಳ ಕಣ್ಣುಗಳನ್ನು ದಾನ ಮಾಡಿದ ಪೋಷಕರು,ಸಾ* ವಿ*ನ ನೋವಿನಲ್ಲೂ ಸಾರ್ಥಕತೆ..!

ಬೆಳ್ಳಾರೆ ಜ್ಞಾನದೀಪದಲ್ಲಿ ಜೇಸಿಐ ಆಶ್ರಯದಲ್ಲಿ ನಾಯಕತ್ವ ತರಬೇತಿ , ಶಿಕ್ಷಕರಿಂದ ಮಾತ್ರ ಉತ್ತಮ ನಾಯಕನ ಸೃಷ್ಟಿ ಸಾಧ್ಯ ಎಂದ ತರಬೇತುದಾರ ಸವಿತಾರ ಮುಡೂರು