ನ್ಯೂಸ್ ನಾಟೌಟ್: ಹಮಾಸ್ ಬಂಡುಕೋರ ಸಂಘಟನೆಯು ಶನಿವಾರ(ಫೆ.22) ಮತ್ತೆ 6 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಇಸ್ರೆಲ್ ಗೆ ಕಳುಹಿಸಿದೆ.
5 ಮಂದಿಯನ್ನು ಸಾರ್ವಜನಿಕ ವೇದಿಕೆಯಲ್ಲಿ ಬಿಡುಗಡೆ ಮಾಡಿದ್ದರೆ, ಓರ್ವನನ್ನು ಸ್ವಲ್ಪ ಸಮಯದ ಬಳಿಕ ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೊಂಡ ಬಳಿಕ ಓರ್ವ ಒತ್ತೆಯಾಳು ಹಮಾಸ್ ನ ಉಗ್ರ ಸದಸ್ಯರಿಬ್ಬರ ಹಣೆಗೆ ಮುತ್ತು ಕೊಟ್ಟಿದ್ದು, ಈ ಫೋಟೋ ವೈರಲ್ ಆಗಿದೆ.
🔴 BREAKING:
One video destroys billions spent on US/Zionist propaganda against Hamas!An Israeli POW kisses the foreheads of Hamas fighters before his release.
A brutal slap to Western media—let’s see how they spin this truth!
Hamas shows humanity and mercy even to its… pic.twitter.com/CvAqABgy9k
— SilencedSirs◼️ (@SilentlySirs) February 22, 2025
ಬಿಡುಗಡೆಗೊಂಡ ಒತ್ತೆಯಾಳುಗಳು ರೆಡ್ ಕ್ರಾಸ್ ಆ್ಯಂಬುಲೆನ್ಸ್ ಗಳಲ್ಲಿ ಇಸ್ರೇಲ್ ತಲುಪಿದ್ದಾರೆ. ಕದನ ವಿರಾಮ ಘೋಷಣೆಯಾದಾಗಿನಿಂದ ಈವರೆಗೆ ಒಟ್ಟು 25 ಮಂದಿಯನ್ನು ಹಮಾಸ್ ಬಿಡುಗಡೆ ಮಾಡಿದೆ ಎಂದು ವರದಿ ತಿಳಿಸಿದೆ.