ನ್ಯೂಸ್ ನಾಟೌಟ್:ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಪ್ರತೀಕಾರದ ದಾಳಿಗಳು ಮುಂದುವರಿದಿವೆ. ಎರಡೂ ದೇಶಗಳು ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಪರಸ್ಪರ ದಾಳಿ ನಡೆಸುತ್ತಿವೆ.
ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಭಾರತದ ಮೇಲೂ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತ ಇರಾನ್ ಮತ್ತು ಇಸ್ರೇಲ್ ನೊಂದಿಗೆ ಬಲವಾದ ವ್ಯಾಪಾರ ಸಂಬಂಧವನ್ನು ಹೊಂದಿರುವುದರಿಂದ, ಈ ಪರಿಣಾಮ ದೇಶಿಯ ಮಾರುಕಟ್ಟೆ ಮೇಲೂ ಪ್ರಭಾವ ಬೀರಲಿದೆ. ಭಾರತ ಎರಡೂ ದೇಶಗಳಿಗೆ ಅನೇಕ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಅದೇ ರೀತಿ, ಆ ದೇಶಗಳಿಂದಲೂ ಅನೇಕ ಸರಕುಗಳು ಭಾರತಕ್ಕೆ ಆಮದಾಗುತ್ತವೆ. ಸದ್ಯ ಎರಡೂ ದೇಶಗಳು ಯುದ್ಧದತ್ತ ಮುಖ ಮಾಡಿರುವ ಕಾರಣ, ಕೆಲವು ವಸ್ತುಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇಸ್ರೇಲ್ ಇರಾನ್ ನ ಬೃಹತ್ ತೈಲ ಘಟಕವನ್ನೇ ಗುರಿಯಾಗಿಸಿ ದಾಳಿ ನಡೆಸಿರುವುದು ಸದ್ಯ ತೈಲ ಬೆಲೆ ಮೇಲೆ ದೊಡ್ಡ ಹೊಡೆತ ನೀಡಿದೆ. ಭಾರತವು ತನ್ನ ಕಚ್ಚಾ ತೈಲದ ಶೇ.80ಕ್ಕಿಂತ ಹೆಚ್ಚು ಭಾಗವನ್ನು ಜಾಗತಿಕವಾಗಿ ಆಮದು ಮಾಡಿಕೊಳ್ಳುತ್ತದೆ. ಆದಾಗ್ಯೂ, ಭಾರತಕ್ಕೆ ಇರಾನ್ ನ ನೇರ ತೈಲ ಆಮದು ಚಿಕ್ಕದಾಗಿದ್ದರೂ, ಇರಾನ್ ಜಾಗತಿಕ ತೈಲ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಘರ್ಷ ಉಲ್ಬಣಿಸಿದ ಹಿನ್ನೆಲೆ ಕಚ್ಚಾ ತೈಲ ಬೆಲೆಗಳು ಇದೀಗ ಗಗನಕ್ಕೇರಿವೆ.
60 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಗುಂಡೇಟು..! ಗಾಯಗೊಂಡ ಪಿಎಸ್ ಐ..!