ನ್ಯೂಸ್ ನಾಟೌಟ್: ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ಗಾಗಿ ಬೇಹುಗಾರಿಕೆ ನಡೆಸಿದ 3 ಮಂದಿಯನ್ನು ಇರಾನ್ ಗಲ್ಲಿಗೇರಿಸಿದೆ ಎಂದು ವರದಿಯಾಗಿದೆ.
ಇರಾನ್ ದೇಶದ ವಾಯುವ್ಯ ಗಡಿ ಪ್ರದೇಶದಲ್ಲಿರುವ ಉರ್ಮಿಯಾ ಜೈಲಿನಲ್ಲಿ ಬುಧವಾರ(ಜೂ.25) ಬೆಳಿಗ್ಗೆ ಮೂವರು ಶಂಕಿತರನ್ನು ಗಲ್ಲಿಗೇರಿಸಲಾಗಿದೆ ಎನ್ನಲಾಗಿದೆ.
ಜೂನ್ 13ರಂದು ಇಸ್ರೇಲ್ ಇರಾನ್ ನಡುವೆ ಸಂಘರ್ಷ ಯುದ್ಧಕ್ಕೆ ತಿರುಗಿತ್ತು. ಆ ಬಳಿಕ ಇಸ್ರೇಲ್ ಗಾಗಿ ಬೇಹುಗಾರಿಕೆ ನಡೆಸಿದ ಮತ್ತು ಗುಪ್ತಚರ ಸಂಸ್ಥೆ ಮೊಸಾದ್ ಜೊತೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಲು ಯತ್ನಿಸಿದ ಆರೋಪದಲ್ಲಿ ಮಜೀದ್ ಮೊಸೇಬಿ ಸೇರಿದಂತೆ ಮೂವರನ್ನು ಇರಾನ್ ಗಲ್ಲಿಗೇರಿಸಿತ್ತು. ಇದೀಗ ಮತ್ತೆ ಮೂವರನ್ನು ಇರಾನ್ ಗಲ್ಲಿಗೇರಿಸಿದೆ ಎಂದು ವರದಿಯಾಗಿದೆ.
ಆರೋಪಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕುಟುಂಬಸ್ಥರು..! ಗುತ್ತಿಗೆದಾರನ ಹತ್ಯೆಗೆ ಕೆರಳಿದ ಜನ..!