ರಾಜಕೀಯವೈರಲ್ ನ್ಯೂಸ್

ಇಸ್ರೇಲ್‌ನಲ್ಲಿ ಸಿಲುಕಿದ 5000ಕ್ಕೂ ಅಧಿಕ ಕರಾವಳಿಗರ ರಕ್ಷಣೆ ಹೇಗೆ? ನಳಿನ್ ಕುಮಾರ್ ಕಟೀಲ್ ವಿದೇಶಾಂಗ ಸಚಿವರಿಗೆ ಬರೆದ ಪತ್ರದಲ್ಲೇನಿದೆ?

263

ನ್ಯೂಸ್ ನಾಟೌಟ್: ಇಸ್ರೇಲ್‌ನಲ್ಲಿ (Israel) ಕರಾವಳಿಯ (Karavali) ಐದು ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ಈಗಾಗಲೇ ವಿದೇಶಾಂಗ ಇಲಾಖೆ ಸಚಿವರಿಗೆ (Minister of External Affairs) ಪತ್ರ (Letter) ಬರೆದು ಯಾರಿಗೂ ಅಪಾಯ ಆಗದಂತೆ ರಕ್ಷಣೆ ಒದಗಿಸಲು ವಿನಂತಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿಕೆ ಹೇಳಿದ್ದಾರೆ.ರಷ್ಯಾ-ಉಕ್ರೇನ್ ಯುದ್ಧ ಆದಾಗಲೂ ಇದೇ ಪರಿಸ್ಥಿತಿ ಇತ್ತು.

ಆಗಲೂ ಎಲ್ಲರ ಮನೆಗೆ ತೆರಳಿ ಸಮಾಧಾನ ಹೇಳಿದ್ದೇವೆ. ಮೋದಿ ಸರ್ಕಾರ ಆಗಲೂ ಅಲ್ಲಿದ್ದವರ ರಕ್ಷಣೆ ಮಾಡಿತ್ತು. ಈಗಲೂ ನಾನು ರಾಯಭಾರಿ ಕಚೇರಿ ಜೊತೆಗೆ ಸಂಪರ್ಕದಲ್ಲಿದ್ದೇನೆ. ಯಾರೂ ಭಯ ಪಡುವ ಅಗತ್ಯ ಇಲ್ಲ. ಏನೇ ಆತಂಕ ಇದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದು ನಳಿನ್ ಕುಮಾರ್ ಕಟೀಲ್ ವಿನಂತಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ (Mangaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೇಲ್‌ನಲ್ಲಿರುವ ಎಲ್ಲರನ್ನೂ ಸುರಕ್ಷಿತವಾಗಿ ಕರೆ ತರುವ ಕೆಲಸ ನಮ್ಮ ಕೇಂದ್ರ ಸರ್ಕಾರ ಮಾಡಲಿದೆ. ಈಗಾಗಲೇ ಸಚಿವ ಮುರಳೀಧರನ್ ಅವರೊಂದಿಗೂ ಮಾತನಾಡಿದ್ದೇನೆ. ಯುದ್ಧದ ಪರಿಸ್ಥಿತಿ ಇರುವಾಗ ಅವರ ಮನೆಯವರಿಗೆ ಭಯದ ವಾತಾವರಣ ಇರುತ್ತದೆ. ಈಗಲೂ ಇಸ್ರೇಲ್‌ನಲ್ಲಿ ಸುರಕ್ಷಿತವಾಗಿ ಇದ್ದರೂ ಭಯದ ವಾತಾವರಣ ಇದೆ ಎಂದು ಹೇಳಿದ್ದಾರೆ.

See also  ಬೆಳ್ತಂಗಡಿ: ಚಾರ್ಮಾಡಿಯಲ್ಲಿ ವೃದ್ಧ ದಂಪತಿಯ ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ..! ಮೂಗನಂತೆ ನಟಿಸಿ ದಾರಿ ಕೇಳುವ ನೆಪದಲ್ಲಿ ದಾಳಿ ಮಾಡಿ ದರೋಡೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget