ಕ್ರೈಂವೈರಲ್ ನ್ಯೂಸ್

ಇಸ್ಲಾಂನಲ್ಲಿ ಮದುವೆಗೆ ಮುನ್ನ ಲೈಂಗಿಕತೆ, ಕಾಮಪ್ರಚೋದಕ ಕೃತ್ಯಗಳು ನಿಷೇಧ! ಅಂತರ್ ಧರ್ಮೀಯ ಪ್ರಕರಣದಲ್ಲಿ ಕೋರ್ಟ್ ನೀಡಿದ ಅಚ್ಚರಿಯ ತೀರ್ಪೇನು ?

ನ್ಯೂಸ್ ನಾಟೌಟ್ : ಮದುವೆಗೆ ಮುನ್ನ ಯಾವುದೇ ಲೈಂಗಿಕ, ಕಾಮಪ್ರಚೋದಕ, ಪ್ರೀತಿಯಿಂದ ಮುತ್ತಿಡುವುದು, ಸ್ಪರ್ಶಿಸುವುದು, ನೋಡುವುದು ಇತ್ಯಾದಿಗಳನ್ನು ಇಸ್ಲಾಂ ಧರ್ಮದಲ್ಲಿ ನಿಷೇಧಿಸಲಾಗಿದೆ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ತೀರ್ಪೊಂದರಲ್ಲಿ ಹೇಳಿದೆ. ಪೊಲೀಸರ ಕಿರುಕುಳದಿಂದ ರಕ್ಷಣೆ ಕೋರಿ ಅಂತರ್ ಧರ್ಮೀಯ ಲಿವ್-ಇನ್ ದಂಪತಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಈ ಕಾರಣಕ್ಕಾಗಿ ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ.

ನ್ಯಾಯಮೂರ್ತಿ ಸಂಗೀತಾ ಚಂದ್ರ ಮತ್ತು ನ್ಯಾಯಮೂರ್ತಿ ನರೇಂದ್ರ ಕುಮಾರ್ ಜೊಹಾರಿ ಅವರಿದ್ದ ಪೀಠವು, ಮುಸ್ಲಿಂ ಕಾನೂನಿನಲ್ಲಿ, ಮದುವೆಯ ಹೊರಗಿನ ಲೈಂಗಿಕತೆಗೆ ಯಾವುದೇ ಮಾನ್ಯತೆ ನೀಡಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಗಂಡ ಮತ್ತು ಹೆಂಡತಿಯ ನಡುವಿನ ಲೈಂಗಿಕ ಸಂಭೋಗವನ್ನು ಹೊರತುಪಡಿಸಿ ಯಾವುದೇ ಲೈಂಗಿಕ ಸಂಭೋಗ ಎಂದು ವ್ಯಾಖ್ಯಾನಿಸಲಾದ ಝಿನಾ, ವಿವಾಹೇತರ ಲೈಂಗಿಕತೆ ಮತ್ತು ವಿವಾಹಪೂರ್ವ ಲೈಂಗಿಕತೆ ಎರಡನ್ನೂ ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಆ ರೀತಿ ವರ್ತಿಸಿದರೆ ಇಸ್ಲಾಂ ನಲ್ಲಿ ಅದನ್ನು ವ್ಯಭಿಚಾರ ಎಂದು ತಿಳಿಸಿಲಾಗಿದೆ. ಇಸ್ಲಾಂನಲ್ಲಿ ಇಂತಹ ವಿವಾಹಪೂರ್ವ ಲೈಂಗಿಕತೆಯನ್ನು ಅನುಮತಿಸಲಾಗುವುದಿಲ್ಲ. ವಾಸ್ತವವಾಗಿ, ಯಾವುದೇ ಲೈಂಗಿಕ, ಕಾಮಪ್ರಚೋದಕ, ಪ್ರೀತಿಯ ಕ್ರಿಯೆಗಳಾದ ಚುಂಬನ, ಸ್ಪರ್ಶಿಸುವುದು, ದಿಟ್ಟಿಸುವಿಕೆ ಇತ್ಯಾದಿಗಳು ಇಸ್ಲಾಂನಲ್ಲಿ ಮದುವೆಗೆ ಮೊದಲು ‘ಹರಾಮ್’ ಎಂದು ಪೀಠವು ತಿಳಿಸಿದೆ.

ಯುವತಿಯ ತಾಯಿಯು ತಮ್ಮ ಲಿವ್-ಇನ್ ಸಂಬಂಧದಿಂದ ಅತೃಪ್ತರಾಗಿದ್ದಾರೆ ಮತ್ತು ತಮ್ಮ ವಿರುದ್ಧ ಎಫ್‌ ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿ ಅಂತರ್‌ ಧರ್ಮೀಯ ದಂಪತಿ ಸಲ್ಲಿಸಿದ ರಕ್ಷಣೆ ಅರ್ಜಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಿ ವಜಾ ಮಾಡಿತು.
ಪೊಲೀಸರಿಂದ ಆಪಾದಿತ ಕಿರುಕುಳದ ವಿರುದ್ಧ ರಕ್ಷಣೆ ಪಡೆಯಲು ಲಿವ್-ಇನ್ ಸಂಬಂಧಗಳ ಕುರಿತು ಸುಪ್ರೀಂ ಕೋರ್ಟ್‌ ನ ತೀರ್ಪನ್ನು ದಂಪತಿ ಉಲ್ಲೇಖಿಸಿದ್ದಾರೆ. ಆದರೆ, ಅಂತಹ ಸಂಬಂಧಗಳನ್ನು ಉತ್ತೇಜಿಸಲು ಪರಿಗಣಿಸಲಾಗುವುದಿಲ್ಲ ಎಂದು ಪೀಠವು ಹೇಳಿದೆ.

Related posts

ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು..! 10 ಲಕ್ಷಕ್ಕೆ ‘ಸೆಟಲ್ ಮೆಂಟ್’ ಆರೋಪ..!

ವಿದೇಶದಲ್ಲಿ ಓದಿ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದವ ಈಗ ಬೆಂಗಳೂರಿನಲ್ಲಿ ಬಿಕ್ಷುಕ..! ಇಲ್ಲಿದೆ ಮನಕಲಕುವ ವೈರಲ್ ವಿಡಿಯೋ

ಟಿಕೆಟ್ ಮಿಸ್ ಮಾಡಿಸಿತು ಆ ಒಂದು ಕರೆ!, ಮೊಯ್ದಿನ್ ಬಾವಾ ಅವರಿಗೆ ಕೊನೆ ಕ್ಷಣದಲ್ಲಿ ಆಗಿದ್ದೇನು?