ಕ್ರೈಂರಾಜ್ಯ

ಐಸಿಸ್ ಮಾದರಿಯಲ್ಲಿ ನೇಹಾ ಕುತ್ತಿಗೆಗೆ ಚಾಕು ಹಾಕಿ ಕೊಲೆ, ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತ್ತಾಲಿಕ್ ಗಂಭೀರ ಆರೋಪ

209

ನ್ಯೂಸ್ ನಾಟೌಟ್: ಕಾಲೇಜು ಕ್ಯಾಂಪಸ್ ನಲ್ಲಿ ಯುವತಿಯೊಬ್ಬಳನ್ನು ಪ್ರೀತಿಸಲು ನಿರಾಕರಣೆ ಮಾಡಿದಳು ಎಂಬ ಕಾರಣಕ್ಕೆ ಮಾಡಿದ ಹತ್ಯೆ ಪ್ರಕರಣ ಖಂಡನೀಯ. ಕೊಲೆ ಎನ್ನುವುದು ಇಸ್ಲಾಂನಲ್ಲಿ ಸಹಜ ಪ್ರಕ್ರಿಯೆಯಾಗಿದೆ. ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲ ಎನ್ನುವಂತಾಗಿದೆ. ಆತ ಐಸಿಸ್ ಮಾದರಿಯಲ್ಲಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಆರೋಪಿ ಫಯಾಜ್‌ ಲವ್ ಮಾಡಿ ಮತಾಂತರ ಮಾಡಲು ಮುಂದಾಗಿದ್ದ. ಲವ್ ಜಿಹಾದ್ ಯಶಸ್ವಿಯಾಗಲಿಲ್ಲವೆಂದು ಈಗ ಕೊಲೆ ಮಾಡಿದ್ದಾನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.


ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್‌ ಮುತಾಲಿಕ್, ಫಯಾಜ್‌ ಐಸಿಸ್ ಮಾದರಿಯಲ್ಲಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಚಾಕು ಹಾಕಲು ಆತ ಎಲ್ಲಿ ತರಬೇತಿ ಪಡೆದಿದ್ದಾನೆ? ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದು ಕಾಂಗ್ರೆಸ್ ಬೆಳೆಸಿದ ವಿಷಬೀಜ. ಕಾಂಗ್ರೆಸ್ ಹುಟ್ಟಿದಾಗ ಆ ಪಕ್ಷದ ನಾಯಕರು ಬ್ರಿಟಿಷರ ಪರವಿದ್ದರು. ಈಗ ಮುಸ್ಲಿಮರು, ಕೊಲೆಗಡುಕರ ಪರ‌ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾಗಿ ಕಳಕಳಿ ಇದ್ದರೆ ಕೊಲೆಗಡುಕನನ್ನು ಎನ್ಕೌಂಟರ್ ಮಾಡಿಸಬೇಕು. ಕೊಲೆಗಡುಕನ ಮನೆಗೆ ಬುಲ್ಡೋಜರ್ ಹಚ್ಚಿಸಿ ಕಿತ್ತು ಬಿಸಾಕಬೇಕು. ಜಮಾತೆ ಇಸ್ಲಾಮಿನವರು ಕೂಡಲೇ ಫತ್ವಾ ಹೊರಡಿಸಿ ಅವರ ಮನೆಯನ್ನು ಬಹಿಷ್ಕರಿಸಬೇಕು. ವಕೀಲರು ಅವನ ಪರ ವಾದ ಮಾಡಲು ನಿಲ್ಲಬಾರದು. ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತೆದೆಯೋ ಅಲ್ಲಿಯವರೆಗೆ ಈ ರೀತಿ ಕೊಲೆಗಳು ಆಗುತ್ತಲೇ ಇರುತ್ತವೆ ಎಂದು ಪ್ರಮೋದ್‌ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

See also  ಅಡ್ಕಾರ್ ನಲ್ಲಿ ಬಳಿ ರಿಕ್ಷಾ- ಬೈಕ್ ಡಿಕ್ಕಿ, ಸವಾರರಲ್ಲಿ ಓರ್ವನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget