ಕರಾವಳಿಕೊಡಗುಜೀವನಶೈಲಿ

ಉರಿಬೇಸಿಗೆಯಲ್ಲಿ ಕರೆಂಟ್ ಬಿಲ್ ದುಬಾರಿಯಾಗುತ್ತಿದೆಯಾ? ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ ಉಚಿತ ವಿದ್ಯುತ್

314

ನ್ಯೂಸ್ ನಾಟೌಟ್ : ಉರಿಬಿಸಿಲು ತಡೆದುಕೊಳ್ಳಲು ಅಸಾಧ್ಯವಾಗುತ್ತಿದೆ.ಜತೆಗೆ ಕರೆಂಟ್ ಬಿಲ್ಲನ್ನೂ ಕೂಡ.ಸಾಮಾನ್ಯವಾಗಿ ಬೇರೆಲ್ಲ ಋತುಗಳಿಗಿಂತಲೂ ಬೇಸಿಗೆಯಲ್ಲಿ ಕರೆಂಟ್ ಬಿಲ್ ಹೆಚ್ಚು. ಏಕೆಂದರೆ ಫ್ಯಾನ್,ಎಸಿ,ಕೂಲರ್ ಅಂತೆಲ್ಲ ಉಪಕರಣಗಳಿಲ್ಲದೇ ಬುದುಕುವುದೇ ತುಂಬಾನೇ ಕಷ್ಟ.ದಿನೇ ದಿನೇ ವಿದ್ಯುತ್ ಬಿಲ್ ಹೆಚ್ಚಳ ಜನರ ಜೇಬಿಗೆ ಮತ್ತಷ್ಟು ಹೊರೆಯಾಗುತ್ತಿರುವುದಂತೂ ಸುಳ್ಳಲ್ಲ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸರ್ಕಾರದ ಒಂದು ಮಹತ್ತರ ಯೋಜನೆಯನ್ನು ಸದುಪಯೋಗಪಡಿಸಿಕೊಂಡರೆ ನೀವು ವಿದ್ಯುತ್ ಅನ್ನು ಸುಲಭವಾಗಿ ಉಚಿತವಾಗಿ ಪಡೆಯಬಹುದಾಗಿದೆ.

ವಿದ್ಯುತ್ ಬಿಲ್ ಉಳಿಸಿ

ಹೌದು, ನಿಮ್ಮ ಮನೆಯಲ್ಲಿ  ಸೋಲಾರ್ ಪ್ಯಾನಲ್ ಅಳವಡಿಕೆ ಮಾಡಿದ್ರೆ ನೀವು ವಿದ್ಯುತ್ ಬಿಲ್ ಅನ್ನು ಉಳಿಸಬಹುದು. ಮಾತ್ರವಲ್ಲ, ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸುಲಭವಾಗಿ ಅಳವಡಿಸಬಹುದಾದ ಸೌರಫಲಕದ ಸಹಾಯದಿಂದ ನೀವು  ಯಾವುದೇ ಒತ್ತಡವಿಲ್ಲದೆ ಎಸಿ, ಫ್ಯಾನ್ ಮತ್ತು ಕೂಲರ್ ಅನ್ನು ಕೂಡ ಚಲಾಯಿಸಬಹುದಾಗಿದೆ.

ಹೇಗೆ ಕೆಲಸ ಮಾಡುತ್ತೆ ?

ವಾಸ್ತವವಾಗಿ, ಸೌರ ಫಲಕ ಅಥವಾ ಸೋಲಾರ್ ಪ್ಯಾನಲ್ ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸುವ ಸಾಧನವಾಗಿದೆ. ಇದು ಪರಿಸರ ಸ್ನೇಹಿ ಶಕ್ತಿಯೂ ಹೌದು ಎಂಬುದು ಸಾಬೀತಾಗಿದೆ.ಮತ್ತೊಂದು ಗಮನಾರ್ಹ ವಿಷಯವೆಂದರೆ ನೀವು ನಿಮ್ಮ ಮನೆಯಲ್ಲಿ ಸೋಲಾರ್ ಪ್ಯಾನೆಲ್ ಹಾಕಿಸಲು ಸರ್ಕಾರದ ವತಿಯಿಂದ ಸಹಾಯಧನವೂ ಲಭ್ಯವಾಗಲಿದೆ ಎಂಬುದು ಗಮನಾರ್ಹ. ಹಾಗಾಗಿ ಯಾವುದೇ ಚಿಂತೆಯಿಲ್ಲದೇ ನಿಶ್ಚಿಂತರಾಗಿ ನೀವು ಸೋಲಾರ್ ಪ್ಯಾನಲ್ ಅಳವಡಿಸಬಹುದಾಗಿದೆ.

ಬೆಲೆ & ಸರ್ಕಾರದ ಸಬ್ಸಿಡಿ:

ಸಾಮಾನ್ಯವಾಗಿ ಒಂದು ದೊಡ್ಡ ಸೋಲಾರ್ ಪ್ಯಾನೆಲ್ ಅಳವಡಿಸಲು ಒಂದೂವರೆ ಲಕ್ಷ ರೂಪಾಯಿಯವರೆಗೆ ವೆಚ್ಚವಾಗುತ್ತದೆ. ಸರ್ಕಾರದ ಯೋಜನೆಯಡಿ ನೀವು ಈ ಸೋಲಾರ್ ಪ್ಯಾನೆಲ್ ಖರೀದಿಸುತ್ತಿದ್ದರೆ ಸರ್ಕಾರವು ಈ ಸೋಲಾರ್ ಪ್ಯಾನೆಲ್‌ಗಳಿಗೆ ಸಬ್ಸಿಡಿಯನ್ನು ನೀಡುತ್ತದೆ. ಈ ಸಬ್ಸಿಡಿ ಸಹಾಯದಿಂದ ನೀವು ಸುಮಾರು 75,000 ರೂ.ಗಳಿಂದ ಆರಂಭವಾಗುವ ಸೌರ ಫಲಕವನ್ನು ಅಳವಡಿಸಬಹುದಾಗಿದೆ.ಒಮ್ಮೆ ನೀವು ಇದಕ್ಕೆ ವೆಚ್ಚ ಮಾಡಿದರೆ ಕರೆಂಟ್ ಬಿಲ್ ಕಟ್ಟುವ ಪ್ರಮೇಯವೇ ಬರೋದಿಲ್ಲ.  

See also  ಅಯ್ಯೋ..ಬಿಸಿಲೇ..! ಬರಿದಾಗಿದೆ ನೇತ್ರಾವತಿಯ ಒಡಲು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget