ಪುತ್ತೂರುವೈರಲ್ ನ್ಯೂಸ್

ಪಾನಕ, ಸೇಮಿಗೆ ನೀಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಭಕ್ತರ ಸೇವೆ..! ಸತತ 3 ವರ್ಷದಿಂದ IRCMD ಸಂಸ್ಥೆಯ ಶ್ಲಾಘನೀಯ ಕಾರ್ಯ

197

ನ್ಯೂಸ್ ನಾಟೌಟ್: ನಾವು ಮಾಡುವ ಯಾವುದೇ ಒಂದು ಕೆಲಸಕ್ಕೂ ಶ್ರದ್ಧೆ ಇರಬೇಕು. ಭಕ್ತಿಯಿಂದ ಮಾಡಿದ ಕೆಲಸಕ್ಕೆ ಶ್ರೀ ಮಹಾಲಿಂಗೇಶ್ವರ ತನ್ನಿಂದ ತಾನೆ ಒಲಿಯುತ್ತಾನೆ ಅನ್ನುವ ನಂಬಿಕೆ ಭಕ್ತರದ್ದು. ಅಂತಹ ಭಕ್ತರ ನಂಬಿಕೆಯನ್ನು ಪುತ್ತೂರಿನ ಆ ಮುತ್ತು ಎಂದಿಗೂ ಸುಳ್ಳು ಮಾಡಿಲ್ಲ. ಅದಕ್ಕೆ ಸಾಕ್ಷಿಯಾಗಿರುವುದೇ IRCMD ಸಂಸ್ಥೆ.

ಶೈಕ್ಷಣಿಕ ತರಬೇತಿ ಸಂಸ್ಥೆಯಾಗಿ ಬೆಳೆದು, ಸುಳ್ಯ – ಪುತ್ತೂರಿನಲ್ಲಿ ಜನರ ವಿಶ್ವಾಸಕ್ಕೆ ಪಾತ್ರರಾಗಿರುವ ಈ IRCMD ಸಂಸ್ಥೆ ಕಳೆದ ಮೂರು ವರ್ಷಗಳಿಂದ ಪುತ್ತೂರ ಒಡೆಯನ ಸೇವ ಮಾಡುತ್ತಾ ಬಂದಿದೆ. ವೀರಮಂಗಲ ಅವಭೃತ ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ಸೇಮಿಗೆ ಉಸಲಿ, ಪಾನಕ, ಜ್ಯೂಸ್ ವಿತರಿಸಿ ಭಕ್ತರ ದಾಹವನ್ನು ನೀಗಿಸುವ ಕೆಲಸವನ್ನು ಮಾಡುತ್ತಿದೆ. ಅಂತೆಯೇ ಈ ವರ್ಷ ಏ.18ರಂದು ದೇವರ ಉತ್ಸವ ಮೂರ್ತಿ ವೀರಮಂಗಲದ ಅವಭೃತ ಸ್ನಾನಕ್ಕೆ ತೆರಳಲಿದೆ. ಈ ವೇಳೆ IRCMD ನಿರ್ದೇಶಕಿ ಪ್ರಫುಲ್ಲ ಗಣೇಶ್ ಅವರ ಬೆದ್ರಾಳದ ಮನೆ ಎದುರು ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಸೇಮಿಗೆ ಉಸಲಿ, ಪುನಾರ್ ಪ್ಪುಳಿ ಪಾನಕ, ಜ್ಯೂಸ್ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಪ್ರತಿಕ್ರಿಯಿಸಿದ IRCMD ನಿರ್ದೇಶಕಿ ಪ್ರಫುಲ್ಲ ಗಣೇಶ್, ” ಕಳೆದ ಮೂರು ವರ್ಷಗಳಿಂದ ಇಂತಹ ಒಂದು ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದೇವೆ. ದೇವರ ಸ್ಮರಣೆ, ಭಕ್ತರ ಸೇವೆಯಲ್ಲಿ ನಮಗೆ ಖುಷಿ ಇದೆ. ನಮ್ಮ ಸಂಸ್ಥೆ ಹಾಗೂ ಮನೆಯವರು ಸೇರಿಕೊಂಡು ಈ ಸೇವೆಯನ್ನು ಮಾಡುತ್ತಿದ್ದೇವೆ. ಈ ಸಲ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಎದುರು ನೋಡುತ್ತಿದ್ದೇವೆ” ಎಂದು ತಿಳಿಸಿದರು.

See also  ಪುತ್ತೂರು ವ್ಯಕ್ತಿ ಹೃದಯಾಘಾತದಿಂದ ಸೌದಿ ಅರೇಬಿಯಾದಲ್ಲಿ ಮೃತ್ಯು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget