Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಇರಾನ್ ಗೆ ದಾಳಿ ಮಾಡಲು ಭಾರತದ ವಾಯುಸೀಮೆಯನ್ನು ಬಳಸಿತ್ತಾ ಅಮೆರಿಕ..? ಇಲ್ಲಿದೆ ಸಂಪೂರ್ಣ ಮಾಹಿತಿ

506

ನ್ಯೂಸ್ ನಾಟೌಟ್: ಇರಾನ್‌ ನಲ್ಲಿ ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಗೆ ಅಮೆರಿಕ ಭಾರತದ ವಾಯುಸೀಮೆಯನ್ನು ಬಳಸಿಲ್ಲ ಎಂದು ಪಿಐಬಿ ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರತದ ವಾಯುಸೀಮೆಯನ್ನು ಬಳಸಿ ಇರಾನ್‌ ದಾಳಿ ನಡೆಸಿದೆ ಎಂದು ಸುದ್ದಿಗಳು ಹರಿದಾಡುತ್ತಿದ್ದಂತೆ ಪಿಐಬಿ ಈ ಸ್ಟಷ್ಟನೆ ನೀಡಿದೆ. ಕೆಲ ಇರಾನ್ ಮಾಧ್ಯಮಗಳು ಕೂಡ ಭಾರತದ ವಾಯುಸೀಮೆ ಬಳಸಿದೆ ಎನ್ನುತ್ತಿವೆ.

ಬಿ2 ಯುದ್ಧ ವಿಮಾನ ಅಟ್ಲಾಂಟಿಕ್‌ ಸಮುದ್ರ ನಂತರ ಮೆಡಿಟೆರಿಯನ್‌ ಸಮುದ್ರ ಬಳಸಿ ಇರಾನಿನ ಮೂರು ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕ ಸೇನೆ ಸುದ್ದಿಗೋಷ್ಠಿ ನಡೆಸಿದ ಲಿಂಕ್‌ ಹಾಕಿ ಈ ಸುದ್ದಿ ಸುಳ್ಳು ಎಂದು ತಿಳಿಸಿದೆ.

ಅಮೆರಿಕ ಬಹಳ ಎಚ್ಚರಿಕೆಯಿಂದ ಈ ದಾಳಿಯನ್ನು ನಡೆಸಿತ್ತು. ಜೂನ್‌ 21 ರಂದು ಎರಡು ಬಿ2 ಯುದ್ಧ ವಿಮಾನಗಳು ಮೊನೊ, ವೈಟ್‌ ಮನ್ ಏರ್ ಫೋರ್ಸ್ ಬೇಸ್‌ ನಿಂದ ಪಶ್ಚಿಮಕ್ಕೆ ಟೇಕಾಫ್‌ ಆಗಿ ಗುವಾಮ್‌ ಗೆ ಬಂದಿತ್ತು. ಈ ವಿಮಾನಗಳು ಹಾರಿದ್ದರಿಂದ ಗುವಾಮ್‌ನಿಂದ ಅಮರಿಕ ಇರಾನ್‌ ಮೇಲೆ ದಾಳಿ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಉದ್ದೇಶಪೂರ್ವಕವಾಗಿ ತಮ್ಮ ಕಾರ್ಯಾಚರಣಾ ತಂತ್ರ ಸೋರಿಕೆ ಆಗದೇ ಇರಲು ಮಾಧ್ಯಮಗಳು ಮತ್ತು ಜನರ ದಿಕ್ಕು ತಪ್ಪಿಸಲು ಎರಡು ಯುದ್ಧವಿಮಾನಗಳನ್ನು ಗುವಾಮ್‌ ಗೆ ಅಮೆರಿಕ ಕಳುಹಿಸಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಸರ್ಕಾರಿ ಶಾಲಾ ಮೇಲ್ಛಾವಣಿ ಪದರ ಕುಸಿದು ಶಿಕ್ಷಕ ಮತ್ತು 5 ವಿದ್ಯಾರ್ಥಿಗಳಿಗೆ ಗಾಯ..! ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು..!

ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳನ್ನು ಪ್ರಾಣ ಲೆಕ್ಕಿಸದೆ ರೈಲ್ವೆ ಹಳಿಯಲ್ಲೇ ಮಲಗಿ ರಕ್ಷಿಸಿದ ತಂದೆ..! ವಿಡಿಯೋ ವೈರಲ್

See also  ನಟ್ಟು, ಬೋಲ್ಟು, ಕ್ಲಿಪ್‌ ,ಇಯರ್ ಫೋನ್ ನೋಡಿ ಗ್ಯಾರೇಜ್ ಎಂದು ಕನ್ಫ್ಯೂಸ್ ಆಗ್ಬೇಡಿ ಮರ್ರೆ;ಇವಿಷ್ಟು ಸಿಕ್ಕಿದ್ದು ವ್ಯಕ್ತಿಯ ಹೊಟ್ಟೆಯಲ್ಲಿ..!ಅರೆ..!ಇಷ್ಟು ದಿನ ಆ ವ್ಯಕ್ತಿ ಬದುಕಿದ್ದಾದರೂ ಹೇಗೆ?ಇಲ್ಲಿದೆ ಡಿಟೇಲ್ಸ್..
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget