Latestಕ್ರೈಂದೇಶ-ವಿದೇಶ

ಇರಾನ್, ಇಸ್ರೇಲ್ ಯುದ್ಧ ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ರಷ್ಯಾ..! ಅಮೆರಿಕಕ್ಕೆ ವ್ಲಾಡಿಮಿರ್‌‌ ಪುಟಿನ್ ವಾರ್ನಿಂಗ್..!

529

ನ್ಯೂಸ್ ನಾಟೌಟ್: ಇರಾನ್, ಇಸ್ರೇಲ್ ನಡುವೆ ಉದ್ಭವಿಸಿರುವ ಬಿಕ್ಕಟಿನ ಮಧ್ಯಸ್ಥಿಕೆ ವಹಿಸಲು ರಷ್ಯಾ ಸಿದ್ಧ ಎಂದು ವ್ಲಾಡಿಮಿರ್‌‌ ಪುಟಿನ್ ಹೇಳಿದ್ದಾರೆ ಎಂದು ರಷ್ಯಾ ಉಪ ವಿದೇಶಾಂಗ ಸಚಿವ ಮಿಖಾಯಿಲ್ ಬೊಗ್ದನೋವ್ ತಿಳಿಸಿದ್ದಾರೆ.

“ಪ್ರತಿಯೊಬ್ಬರೂ ಮಸ್ಕತ್‌ ನಲ್ಲಿ ಇರಾನ್ ಹಾಗೂ ಅಮೆರಿಕದೊಂದಿಗೆ ಸಂಧಾನ ನಡೆಯುವುದನ್ನು ನಿರೀಕ್ಷಿಸುತ್ತಿದ್ದರು.‌ ನಾವೂ ಕೂಡಾ ಈ ಸಂಧಾನಗಳು ಮುಂದುವರಿಯಬೇಕು ಎಂದು ಬಯಸಿದ್ದೆವು ಹಾಗೂ ನಾವು ಈ ಬಗ್ಗೆ ಭಾರಿ ಭರವಸೆ ಹೊಂದಿದ್ದೆವು. ಆದರೆ, ದುರದೃಷ್ಟವಶಾತ್, ಜೂನ್ 13ರಂದು ನಡೆದ ಇಸ್ರೇಲ್ ದಾಳಿಯಿಂದಾಗಿ ಈ ಪ್ರಕ್ರಿಯೆಗೆ ಅಡ್ಡಿಯುಂಟಾಯಿತು” ಎಂದು ಸೇಂಟ್ ಪೀಟರ್ಸ್‌ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯಲ್ಲಿ ರಷ್ಯಾ ಸಚಿವ ಹೇಳಿದ್ದಾರೆ.

“ಹೀಗಿದ್ದೂ, ಇದು ನಮ್ಮೆಲ್ಲ ಭರವಸೆಗಳ ಅಂತ್ಯವಲ್ಲ ಎಂದು ನಾವು ಭಾವಿಸಿದ್ದೇವೆ ಹಾಗೂ ನಮ್ಮ ಬಾಂಧವ್ಯಗಳು ಸುಧಾರಿತವಾಗಿರುವುದರಿಂದ, ಈ ಬಿಕ್ಕಟನಲ್ಲಿ ಭಾಗಿಯಾಗಿರುವವರೆಲ್ಲರೂ ಉಪಯುಕ್ತವೆಂದು ಭಾವಿಸಿದರೆ, ಮಧ್ಯಸ್ಥಿಕೆ ಸೇವೆ ಒದಗಿಸಲು ಸಿದ್ಧರಿದ್ದೇವೆ” ಎಂದು ರಷ್ಯಾ ಘೋಷಿಸಿದೆ.

ಇರಾನ್ ಶರಣಾಗಬೇಕು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆ ಮತ್ತು ಪಶ್ಚಿಮ ಏಷ್ಯಾದ ಕಡೆಗೆ ಅಮೆರಿಕದ ಯುದ್ಧ ವಿಮಾನಗಳ ಚಲನೆ ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ತಾಳ್ಮೆಯನ್ನು ಪರೀಕ್ಷಿಸಿದೆ. ಈ ಹಿನ್ನಲೆ ಸೂಪರ್ ಪವರ್ ಅಮೆರಿಕಕ್ಕೆ ರಷ್ಯಾ ಬಲವಾದ ಎಚ್ಚರಿಕೆ ಕೊಟ್ಟಿದೆ. ಇರಾನ್-ಇಸ್ರೇಲ್ ಯುದ್ಧದಲ್ಲಿ ಯುಎಸ್​ ಮಿಲಿಟರಿ ಮಧ್ಯಪ್ರವೇಶಿಸಿದರೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ ಎಂದು ರಷ್ಯಾ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.

ಇರಾನ್, ಇಸ್ರೇಲ್ ಯುದ್ಧ ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ರಷ್ಯಾ..! ಅಮೆರಿಕಕ್ಕೆ ವ್ಲಾಡಿಮಿರ್‌‌ ಪುಟಿನ್ ವಾರ್ನಿಂಗ್..!

ಏರ್ ಇಂಡಿಯಾ ವಿಮಾನ ದುರಂತದ 215 ಮಂದಿಯ ಡಿಎನ್‌ ಎ ಮ್ಯಾಚ್‌, 198 ಮೃತದೇಹ ಹಸ್ತಾಂತರ

See also  ಬಿಯರ್‌ ಗಾಗಿ 3 ತಿಂಗಳ ಮಗುವನ್ನೇ ಮಾರಿದ ತಂದೆ-ತಾಯಿ..! ಮಗುವನ್ನು ರಕ್ಷಿಸಿದ ಪೊಲೀಸರು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget