Latestಕ್ರೈಂವೈರಲ್ ನ್ಯೂಸ್

ಐಪಿಎಸ್‌ ಅಧಿಕಾರಿ‌ ರೂಪಾ ವಿರುದ್ಧ ದಾಖಲೆ ಕಳವು ಆರೋಪ..! ರೂಪಾ ವಿರುದ್ಧ ಡಿಐಜಿ ವರ್ತಿಕಾ ಕಟಿಯಾರ್ ದೂರು..!

533

ನ್ಯೂಸ್‌ ನಾಟೌಟ್ : ಐಪಿಎಸ್‌ ಅಧಿಕಾರಿ‌ ರೂಪಾ ವಿರುದ್ಧ ಮತ್ತೋರ್ವ ಮಹಿಳಾ ಅಧಿಕಾರಿ ದೂರು ನೀಡಿದ್ದಾರೆ. ಈ ಹಿಂದೆ ಹಿರಿಯ ಅಧಿಕಾರಿಗಳ ಮುಂದೆಯೇ ಸಭೆ ಕೊಠಡಿಯಲ್ಲಿ ಗಲಾಟೆ ಮಾಡಿಕೊಂಡಿದ್ದ ಐಎಸ್‌ ಡಿ ಐಜಿಪಿ ರೂಪಾ ಮೌದ್ಗಿಲ್‌ ಮತ್ತು ಡಿಐಜಿ ವರ್ತಿಕಾ ಕಟಿಯಾರ್ ಸುದ್ದಿ ಆಗಿದ್ರು. ಈಗ ಒಂದು ಹಂತ ಮುಂದೆ ಹೋಗಿದ್ದು ಐಜಿಪಿ ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಗೆ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ.

ರೂಪಾ ನನ್ನ ಕೊಠಡಿಯಲ್ಲಿ ಕೆಳಹಂತದ ಸಿಬ್ಬಂದಿ ಬಳಸಿಕೊಂಡು ದಾಖಲೆ ಕಳವು ಮಾಡಿಸಿದ್ದಾರೆ. ಆ ದಾಖಲೆಗಳನ್ನು ನಕಲಿ ಮಾಡಿ ನನ್ನ ವಿರುದ್ಧ ಷಡ್ಯಂತ್ರ ಹೇರುವ ಸಾಧ್ಯತೆ ಇದೆ ಎಂದು ವರ್ತಿಕಾ ಕಟಿಯಾರ್ ದೂರಿದ್ದಾರೆ.

ಸದ್ಯ ರೂಪಾ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ. ಕೆಳಹಂತದ ಮೂವರು ಅಧಿಕಾರಿಗಳನ್ನ (ಮಲ್ಲಿಕಾರ್ಜುನ್, ಮಂಜುನಾಥ್ ಮತ್ತು ಕಿರಣ್) ಬಳಸಿ ದಾಖಲೆಗಳನ್ನ ಕಳವು ಮಾಡಿಸಿದ್ದಾರೆ. ವಾಟ್ಸಪ್‌ ಮೂಲಕ ಫೋಟೋ ತೆಗೆಸಿದ್ದಾರೆ, ಕಂಟ್ರೋಲ್‌ ರೂಮ್‌ ನಿಂದ ಕೀ ತಂದು ಕೊಠಡಿ ತೆರೆಯಲಾಗಿದೆ. ದುರುದ್ದೇಶದಿಂದ ಫೋಟೋ ತೆಗೆಸಲಾಗಿದ್ದು, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ವರ್ತಿಕಾ ಕಟಿಯಾರ್‌ ಆರೋಪಿಸಿದ್ದಾರೆ. ಈ ಹಿಂದೆ ಐಪಿಎಸ್ ಡಿ.ರೂಪಾ ಮತ್ತು ಐಎ ಎಸ್ ರೋಹಿಣಿ ಸಿಂಧೂರಿ ನಡುವೆ ಕಚ್ಚಾಟ ನಡೆದಿತ್ತು.

See also  ಸುಳ್ಯ:ಎನ್ ಎಮ್ ಸಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ :ಪ್ರೊ. ಡಾ. ರವಿಕಾಂತ್ ಜಿ.ಒ. ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget