ವೈರಲ್ ನ್ಯೂಸ್

ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಫೋಸ್ ಕೊಟ್ಟ IPS ಡಿ.ರೂಪಾ, ಲಾಠಿ ಹಿಡಿದ ಕೈಯಲ್ಲಿ ಕತ್ತಿ ಹಿಡಿದು ಅಚ್ಚರಿ ಮೂಡಿಸಿದ ಐಪಿಎಸ್ ಅಧಿಕಾರಿಣಿ

ನ್ಯೂಸ್ ನಾಟೌಟ್ : ಐಪಿಎಸ್ ಅಧಿಕಾರಿ ಡಿ.ರೂಪಾ (IPS Officer Roopa) ಆಗಾಗ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿರುವ ರೂಪಾ ಅವರು ಒಂದು ಫೋಟೋಶೂಟ್ ಮೂಲಕ ಇದೀಗ ಭಾರೀ ಸುದ್ದಿಯಾಗಿದ್ದಾರೆ.

ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮದಲ್ಲಿರುವಾಗ, ಹಬ್ಬದ ಪ್ರಯುಕ್ತ ಕೆಲವರು ಫೋಟೋಶೂಟ್ (D Roopa Photoshoot) ಮಾಡಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಇಂದು ಖಡಕ್ ಅಧಿಕಾರಿ ಕೂಡ ಲಾಠಿ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಪೊಲೀಸ್ ಯೂನಿಫಾರ್ಮ್‍ನಲ್ಲಿ ಇರುತ್ತಿದ್ದ ರೂಪಾ ಇದೀಗ ಕೈಯಲ್ಲಿ ಖಡ್ಗ ಹಿಡಿದು, ಕೆಂಪು ಸೀರೆ, ಹಸಿರು ಬಣ್ಣ ಬ್ಲೌಸ್, ಮೈತುಂಬಾ ಆಭರಣ ತೊಟ್ಟು ಸಿಂಹಾಸನದಲ್ಲಿ ಥೇಟ್ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಹೆಣ್ಣು ನಾಲ್ಕು ಗೋಡೆಯೊಳಗೆ ಬಂಧಿಯಲ್ಲ, ಆಕೆಯೊಳಗೊಂದು ಶಕ್ತಿ ಇದೆ.

ಸಮಾಜದಲ್ಲಿ ಸವಾಲುಗಳನ್ನು ಎದುರಿಸಿ ನಿಲ್ಲುವುದರ ಜೊತೆಗೆ ಯಾವುದೇ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗುತ್ತಾಳೆ. ಎಂಬುದಕ್ಕೆ ಡಿ ರೂಪಾ ಉತ್ತಮ ನಿದರ್ಶನ ಎಂದು ಫೋಟೋ ಅಪ್ಲೋಡ್ ಮಾಡಿರುವ ಭಾರ್ಗವಿ ಕೆ. ಆರ್ ಎಂಬವರು ಬರೆದುಕೊಂಡಿದ್ದಾರೆ.

ರೂಪ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆಯೇ ಹಲವಾರು ಕಾಮೆಂಟ್‍ಗಳು ಬರತೊಡಗಿದವು. ಈ ಫೋಟೋ ಕೇವಲ ಫ್ಯಾಷನ್ ಮಾತ್ರ ಅಲ್ಲ, ಬದಲಾಗಿ ಮಹಿಳಾ ಶಕ್ತಿ ಹಾಗೂ ಸಬಲೀಕರಣದ ಪ್ರತೀಕ ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

Related posts

ಮನುಷ್ಯನಿಗಿಂತಲೂ ಫಾಸ್ಟಾಗಿ ಮೊಬೈಲ್ ಆಟ! ತಿನ್ನುತ್ತಾ ಇನ್ಸ್ಟಾಗ್ರಾಮ್ ವೀಕ್ಷಿಸುತ್ತಿರುವ ಕೋತಿ

ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಕೊಳಚೆ ನೀರು..! ದುರ್ವಾಸನೆಯ ಜೊತೆ ರಾತ್ರಿ ಕಳೆದ ರೋಗಿಗಳು..!

ಮಕ್ಕಳಿದ್ದ ಶಾಲಾ ಬಸ್ ಗೆ ಬೆಂಕಿ ಹಚ್ಚಲು ಮುಂದಾದ ಪ್ರತಿಭಟನಾಕಾರರು..! ಆರೋಪಿಗಳನ್ನು ಬಂಧಿಸಿದ ಪೊಲೀಸರು..! ಇಲ್ಲಿದೆ ವಿಡಿಯೋ