Latestಬೆಂಗಳೂರುಬೆಂಗಳೂರುವೈರಲ್ ನ್ಯೂಸ್

ಐಪಿಎಲ್‌ ಫೈನಲ್‌ ಮ್ಯಾಚ್‌ ದಿನ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟ..! 30.66 ಕೋಟಿ ರೂ. ವಹಿವಾಟು..!

237

ನ್ಯೂಸ್‌ ನಾಟೌಟ್‌: ಐಪಿಎಲ್‌ 2025 ರ ಟ್ರೋಫಿಗಾಗಿ ನಡೆದ ಮಂಗಳವಾರ ನಡೆದ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಆರ್‌ ಸಿಬಿ ಗೆಲುವಿನ ನಶೆಯಲ್ಲಿ ಫ್ಯಾನ್ಸ್‌ ತೇಲಾಡಿದ್ದಾರೆ. ಫೈನಲ್‌ ಮ್ಯಾಚ್‌ ದಿನ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ.

ಜೂನ್ 3 ರಂದು, 1.48 ಲಕ್ಷ ಬಾಟಲ್ ಬಿಯರ್ ಬಾಕ್ಸ್‌ ಗಳು ಮಾರಾಟವಾಗಿದ್ದು, 30.66 ಕೋಟಿ ರೂ. ವಹಿವಾಟು ನಡೆದಿದೆ. ಕಳೆದ ವರ್ಷ ಇದೇ ದಿನಾಂಕದಂದು ಕೇವಲ 0.36 ಲಕ್ಷ ಬಾಕ್ಸ್‌ಗಳು ಮಾರಾಟವಾಗಿ, 6.29 ಕೋಟಿ ರೂ. ಆದಾಯ ಬಂದಿತ್ತು. ಈ ಬಾರಿ ಆರ್‌ಸಿಬಿ ಫೈನಲ್‌ಗೆ ತಲುಪಿದ ಖುಷಿಯಲ್ಲಿದ್ದ ಫ್ಯಾನ್ಸ್‌ ಎಣ್ಣೆ ಕಿಕ್‌ನಲ್ಲಿ ಮಿಂದೆದ್ದಿದ್ದಾರೆ.

ಬಿಯರ್‌ ಅಷ್ಟೇ ಅಲ್ಲ, ಇತರ ಆಲ್ಕೋಹಾಲ್‌ಯುಕ್ತ ಮದ್ಯಗಳು ಕೂಡ ಭರ್ಜರಿಯಾಗಿ ಸೇಲ್‌ ಆಗಿವೆ. 127.88 ಕೋಟಿ ರೂ. ಮೌಲ್ಯದ 1.28 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ದಿನ ಮದ್ಯ ಮಾರಾಟದಿಂದ ಕೇವಲ 19.41 ಕೋಟಿ ರೂ.ಬಂದಿತ್ತು.

ಒಟ್ಟಾರೆಯಾಗಿ, ಮಂಗಳವಾರ ಒಂದು ದಿನದಲ್ಲಿ ರಾಜ್ಯವು ಮದ್ಯ ಮಾರಾಟದಿಂದ 157.94 ಕೋಟಿ ರೂ. ಗಳಿಸಿದೆ. ಹಿಂದಿನ ವರ್ಷದ ಜೂನ್‌ 3 ರಂದು ಒಟ್ಟು 25 ಕೋಟಿ ರೂ. ಮಾತ್ರ ಬಂದಿತ್ತು. 132.24 ಕೋಟಿ ರೂ.ಗಳ ಹೆಚ್ಚಳವಾಗಿದೆ.

ಐಪಿಎಲ್‌ ಪ್ರಾರಂಭವಾದ 18 ವರ್ಷಗಳ ನಂತರ ಇದು ಆರ್‌ ಸಿಬಿಯ ಮೊದಲ ಐಪಿಎಲ್ ಗೆಲುವು. ಆರ್‌ ಸಿಬಿ ಅಂತಿಮವಾಗಿ ಐಪಿಎಲ್ 2025 ಅನ್ನು ಗೆದ್ದಂತೆ, ಬೆಂಗಳೂರು ರೆಡ್‌ ಕಾರ್ಪೆಟ್‌ನಲ್ಲಿ ಮಿಂಚಿತು. ಅಭಿಮಾನಿಗಳು ಬೀದಿಗಿಳಿದು ‘ಆರ್‌ಸಿಬಿ.. ಕೊಹ್ಲಿ’, ‘ಈ ಸಲ ಕಪ್ ನಮ್ದು’ ಎಂದು ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭಾರಿ ನೂಕುನುಗ್ಗಲಿಗೆ ನಾಲ್ವರ ಸಾವು..! ಹಲವರು ಅಸ್ವಸ್ಥ, ಕೆಲವರ ಸ್ಥಿತಿ ಗಂಭೀರ..!

See also  ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯನ ಕಿಡ್ನ್ಯಾಪ್..! ತಡರಾತ್ರಿ ಮೊಬೈಲ್‌ ನಲ್ಲಿ ಮಾತನಾಡುತ್ತ ನಿಂತಿದ್ದಾಗ ಅಪಹರಣ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget