ಕ್ರೀಡೆ/ಸಿನಿಮಾ

ಮಾರ್ಚ್ 31 ರಿಂದ ಐಪಿಎಲ್ ಮೆಗಾ ಫೈಟ್‌..ಕುತೂಹಲ ಕೆರಳಿಸಿದ ಕೂಟದಲ್ಲಿ ಏನೇನಿದೆ ವಿಶೇಷ?

ನ್ಯೂಸ್ ನಾಟೌಟ್ : ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್‌) 2023 ರ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ. ಮಾರ್ಚ್ 31 ರಂದು ಐಪಿಎಲ್‌ ಪ್ರಾರಂಭವಾಗಲಿದೆ. ಮೇ 28 ರ ವರೆಗೆ ಕೂಟ ನಡೆಯಲಿದೆ ಎಂದು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಪ್ರಕಟಿಸಿದೆ.

ಮಾರ್ಚ್ 31 ರಂದು ಮೊದಲ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ ಎಂದು ಘೋಷಿಸಲಾಗಿದೆ. ಒಟ್ಟು10 ತಂಡಗಳು ಭಾಗವಹಿಸಲಿದೆ. ಚೆನೈ , ಬೆಂಗಳೂರು, ಹೈದಾರಾಬಾದ್ , ಮುಂಬೈ , ಕೋಲ್ಕತ್ತ, ಲಕ್ನೋ, ಅಹಮದಾಬಾದ್ ,ಜೈಪುರ ,ಮೊಹಾಲಿ, ಗುವಾಹಟಿ ಮತ್ತು ಧರ್ಮಶಾಲಾ ಸೇರಿ 12 ನಗರಗಳಲ್ಲಿ ಕೂಟ ನೆಡಯಲಿದೆ. ಐಪಿಎಲ್ ಹಿಂದಿನ ಆವೃತ್ತಿಗೆ ಕರೋನಾ ಸೋಂಕಿನ ಬಿಸಿ ತಟ್ಟಿತ್ತು. ಕೂಟ ರದ್ದಾಗಿದ್ದವು ಕೆಲವು ಪಂದ್ಯಗಳು ವೀಕ್ಷಕರ ಗೈರು ಹಾಜರಾತಿಯಲ್ಲಿ ನಡೆದಿದ್ದವು. ಇದೀಗ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರು ಐಪಿಎಲ್ ಕೂಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

Related posts

ಕ್ರಿಕೆಟ್‌ ವಿಚಾರದಲ್ಲಿ ಭಾರತ ಹಠ ಬಿಡದಿದ್ದರೆ ನಾವೂ ಹಠ ಬಿಡಲ್ಲ,ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಜಾ ಹೀಗೆ ಹೇಳಿದ್ಯಾಕೆ?

ಆತ್ಮಹತ್ಯೆಗೆ ನಿರ್ಧರಿಸಿದ್ರಾ ಖ್ಯಾತ ನಿರೂಪಕ ಕಿರಿಕ್ ಕೀರ್ತಿ, ವೈರಲ್ ಪೋಸ್ಟ್ ನಲ್ಲೇನಿದೆ?

ಕೊಡಗಿನ ಬೆಡಗಿಯನ್ನು ಬಿಡದೆ ಕಾಡುತ್ತಿದೆ ಡೀಫ್ ಫೇಕ್..! ರಶ್ಮಿಕಾ ಮಂದಣ್ಣ ಮತ್ತೊಂದು ಡೀಪ್ ​ಫೇಕ್ ವಿಡಿಯೋ ವೈರಲ್..!