ಕ್ರೈಂವೈರಲ್ ನ್ಯೂಸ್

ನಿಮ್ಮ ಐಫೋನ್‌ ಹ್ಯಾಕ್ ಆಗಬಹುದು ಎಚ್ಚರ..! ಭಾರತದ ವಿಪಕ್ಷ ನಾಯಕರಿಗೆ ‘ಆ್ಯಪಲ್‌’ ಕಳುಹಿಸಿದ ಸಂದೇಶವೇನು?

ನ್ಯೂಸ್ ನಾಟೌಟ್ : ಆ್ಯಪಲ್‌ ಕಂಪನಿ ಮಂಗಳವಾರ ಭಾರತದ ಕನಿಷ್ಠ ಐದು ಮಂದಿ ವಿಪಕ್ಷ ನಾಯಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿ ಅವರ ಐಫೋನ್‌ಗಳು “ಸರ್ಕಾರ ಪ್ರಾಯೋಜಿತ ದಾಳಿಕೋರರಿಂದ” ಗುರಿಯಾಗಿರಬಹುದೆಂದು ಮಾಹಿತಿ ನೀಡಿದೆ.

ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ, ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯ ಪವನ್‌ ಖೇರಾ ಮತ್ತು ಶಿವಸೇನೆಯ (ಉದ್ಧವ್‌ ಬಣ) ರಾಜ್ಯಸಭಾ ಸಂಸದೆ ಪ್ರಿಯಾಂಕ ಚತುರ್ವೇದಿ ಈ ಎಚ್ಚರಿಕೆ ಸಂದೇಶಗಳನ್ನು ಬಂದಿದೆ ಎನ್ನಲಾಗಿದೆ.

ಸ್ಥಾಪಕ ಸಂಪಾದಕ ಸಿದ್ದಾರ್ಥ ವರದರಾಜನ್‌ ಹಾಗೂ ಆಪ್‌ ನಾಯಕ ರಾಘವ್‌ ಛಡ್ಡಾ ಅವರ ಫೋನ್‌ಗಳಿಗೂ ಈ ಸಂದೇಶ ಬಂದಿದೆ ಎನ್ನಲಾಗಿದೆ.

“ಸರ್ಕಾರ ಪ್ರವರ್ತಿತ ದಾಳಿಕೋರರಿಂದ ನಿಮ್ಮ ಸಾಧನ ದುರ್ಬಳಕೆಯಾದರೆ ಅವರು ನಿಮ್ಮ ಸೂಕ್ಷ್ಮ ಡೇಟಾ, ಸಂವಹನಗಳು, ಅಥವಾ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗೆ ಕೂಡ ಪ್ರವೇಶ ಪಡೆಯುವ ಸಾಧ್ಯತೆ ಇದೆ,” ಎಂದು ಸಂದೇಶದಲ್ಲಿ ಎಚ್ಚರಿಸಲಾಗಿದೆ. ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

Related posts

ಗಂಟಲಲ್ಲಿ ಮಾಂಸದ ಚೂರು ಸಿಲುಕಿ ಎಂಎಸ್ಸಿ ವಿದ್ಯಾರ್ಥಿನಿ ಸಾವು..!

ವರ್ತೂರು ಸಂತೋಷ್ ‘ಕಿತ್ತೋದ್ ನನ್ ಮಗ’ ಎಂದ ನಟ ಜಗ್ಗೇಶ್ ವಿರುದ್ಧ ಜನಾಕ್ರೋಶ..! ಕ್ಷಮೆ ಕೇಳದಿದ್ರೆ ಜಗ್ಗೇಶ್​ ಮನೆಗೆ ಮುತ್ತಿಗೆ..?

ಮೂವರು ಯುವತಿಯರಿಗೆ ಆ್ಯಸಿಡ್ ಎರಚಿದ ಪ್ರಕರಣ: ಪೊಲೀಸರ ಮಿಂಚಿನ ಕಾರ್ಯಾಚರಣೆ, 23 ವರ್ಷದ ಯುವಕ ವಶಕ್ಕೆ, ಯಾರೀತ ಹುಡುಗ..?