ನ್ಯೂಸ್ ನಾಟೌಟ್: ನಟಿ ರಶ್ಮಿಕಾ ಮಂದಣ್ಣ ಅವರಿಗೆ ಏ.5ರಂದು ಬರ್ತ್ ಡೇ ಸಂಭ್ರಮ. ಹೀಗಾಗಿ 29ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಕಡಲ ತೀರದಲ್ಲಿ ಬರ್ತಡೇ ಆಚರಿಸಿಕೊಂಡಿರೋ ರಶ್ಮಿಕಾ ಜೊತೆ ವಿಜಯ್ ಕೂಡ ಇದ್ದರು ಅನ್ನೊದಕ್ಕೆ ಫೋಟೋ ಸಾಕ್ಷಿ ಹೇಳಿದೆ. ಇದೀಗ ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎಂಬುದಕ್ಕೆ ನೆಟ್ಟಿಗರು ಸಾಕ್ಷಿ ತೋರಿಸಿದ್ದಾರೆ. ಸದ್ಯ ಇಬ್ಬರ ಬೀಚ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
‘ಪುಷ್ಪ 2’ ಪ್ರಯುಕ್ತ ನಟಿ ರಶ್ಮಿಕಾ ಒಮನ್ ಗೆ ತೆರಳಿದ್ದರು. ಆದರೆ ಯಾರೊಂದಿಗೆ ಹೋಗಿದ್ದಾರೆ ಎಂಬುದು ತಿಳಿದಿರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದೆ. ರಶ್ಮಿಕಾ ಹಾಗೂ ವಿಜಯ್ ತಮ್ಮ ಖಾಸಗಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಡಿದ ಪೋಸ್ಟ್‌ನಿಂದ ಇಬ್ಬರ ಗುಟ್ಟು ರಟ್ಟಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಬೀಚ್ ಬಳಿ ಕುಳಿತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಬ್ಯಾಕ್‌ಗ್ರೌಂಡ್ ನಲ್ಲಿ ರೆಡ್ ಕಲರ್ ಬಾವುಟವಿದೆ. ಅದರಂತೆ ವಿಜಯ್ ಶೇರ್ ಮಾಡಿರೋ ಪೋಸ್ಟ್‌ನಲ್ಲಿ ಕೂಡ ಇದೇ ರೀತಿಯ ಬಾವುಟ ಕಾಣಿಸಿದೆ. ಇದರಿಂದ ಇಬ್ಬರೂ ಜೊತೆಯಾಗಿ ಒಮನ್ ನಲ್ಲಿ ಕಾಲ ಕಳೆಯುತ್ತಿದ್ದಾರೆ ಎನ್ನುವ ವಿಚಾರ ಖಚಿತವಾಗಿದೆ. ಇಬ್ಬರ ಪೋಸ್ಟ್‌ನಿಂದ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಜೋಡಿ ಅದ್ಯಾವಾಗ ಅಧಿಕೃತವಾಗಿ ಗುಡ್ ನ್ಯೂಸ್ ನೀಡ್ತಾರೆ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ.