ನ್ಯೂಸ್ ನಾಟೌಟ್ : ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸ್ವಸ್ಥವೃತ್ತ ವಿಭಾಗ, ಎನ್ಎಸ್ಎಸ್ ವಿಭಾಗ ಹಾಗೂ ಆಯುಷ್ ಇಲಾಖೆ ಮಂಗಳೂರು ಇದರ ಸಹಯೋಗದೊಂದಿಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಶನಿವಾರ (ಜೂ. 21 ) ಕಾಲೇಜಿನಲ್ಲಿ ಆಚರಿಸಲಾಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ ಡಾ. ಕೆ ವಿ ಚಿದಾನಂದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ. ವಿ., ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತ ಎಂ, ಕೆವಿಜಿ ಆಯುರ್ವೇದ ಫಾರ್ಮ ಮತ್ತು ರಿಸರ್ಚ್ ಸೆಂಟರ್ ನ ಸಿ.ಇ.ಒ ಡಾ. ಪುರುಷೋತ್ತಮ ಕೆ.ಜಿ. ಸಂಸ್ಥೆಯ ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕಿ ಡಾ. ಕವಿತಾ ಬಿ. ಎಂ., ಮೆಡಿಕಲ್ ಆಫೀಸರ್ ಡಾ. ಸನತ್ ಕುಮಾರ್ ಡಿ. ಜಿ., ಕಾಲೇಜಿನ ಸ್ವಸ್ಥ ವೃತ್ತ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಶಭೀನಾ ಟಿ. ಟಿ., ಡಾ. ಕೃತಿ ಅಮೈ, ಡಾ. ಐಶ್ವರ್ಯ ಬಾಲಗೋಪಾಲ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ. ವಿ., ಎನ್.ಎಸ್ ಎಸ್ ಯೋಜನಾಧಿಕಾರಿ ಡಾ. ಪ್ರಮೋದ್ ಪಿ. ಎ. ಹಾಗೂ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿಂದ ತೆರೆದ ಮೈದಾನದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಶಬೀನಾ ಟಿ. ಟಿ., ಡಾ.ಕೃತಿ ಅಮೈ, ಡಾ.ಐಶ್ವರ್ಯ ಬಾಲ ಗೋಪಾಲ್ ಇವರ ಮಾರ್ಗದರ್ಶನದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಕೆವಿಜಿ ಸಮೂಹ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನವನ್ನು ಈ ಸಂದರ್ಭ ವಿತರಿಸಲಾಯಿತು. ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಯೋಗ ಪೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ನೆಹರು ಮೆಮೋರಿಯಲ್ ಪಿಯು ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಶ್ರೇಯಾ ಎಂ.ಜಿ., ದ್ವಿತೀಯ ಬಹುಮಾನವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ವಿತೀಯ ಬಿ.ಎ.ಎಮ್.ಎಸ್ ಅನ್ನು ಯತೀಶ್ ಗೌಡ ಹೆಚ್ ಆರ್ ಪಡೆದುಕೊಂಡರು.
ಇ- ಪೋಸ್ಟರ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ವಿತೀಯ ಬಿ.ಎ.ಎಂ.ಎಸ್ ನ ಗದಗಯ್ಯ ಈರಣ್ಣ ಹಿರೇಮಠ್, ದ್ವಿತೀಯ ಬಹುಮಾನವನ್ನು ಮೆಹ್ ವೀಶ್ , ತೃತೀಯ ಬಹುಮಾನವನ್ನು ಚಿತ್ರ ಕೆ. ಎಚ್ ಪಡೆದುಕೊಂಡರು. ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಐಶ್ವರ್ಯ ಸುಭಾಶ್ ರಾಯ್ಕಾರ್ ಮತ್ತು ಬಳಗ, ದ್ವಿತೀಯ ಬಹುಮಾನ ವನ್ನು ಶಾಂಭವಿ ಮತ್ತು ಬಳಗ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಚಿಂತನ ಎನ್.ಎಸ್,. ದ್ವಿತೀಯ ಬಹುಮಾನವನ್ನು ದೀಪ್ತಿ ಧರ್ಮರಾಜ್ ಹಾಗೂ ತೃತೀಯ ಬಹುಮಾನವನ್ನು ಐಶ್ವರ್ಯ ಸುಭಾಶ್ ರಾಯ್ಕಾರ್, ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬಿ.ಎಸ್. ಪ್ರಸನ್ನ , ದ್ವಿತೀಯ ಬಹುಮಾನವನ್ನು ರಾಹುಲ್ ರಾಜನ್, ತೃತೀಯ ಬಹುಮಾನವನ್ನು ಗಾನವಿ ಎಮ್ ಹಾಗೂ ದರ್ಶನ್ ಹೆಚ್ ಎಸ್ ಪಡೆದುಕೊಂಡರು.
ಬಹುಮಾನ ವಿತರಣಾ ಕಾರ್ಯಕ್ರಮವನ್ನು ಡಾ. ಕೆ.ವಿ. ಚಿದಾನಂದ ಅವರು ನೆರವೇರಿಸಿದರು. ಕಾಲೇಜಿನ ಎಲ್ಲ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿ ವರ್ಗವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೈಶಾಲಿ ಪಿ. ಜೆ ಮತ್ತು ಬಳಗ ಪ್ರಾರ್ಥಿಸಿ, ವಂಶಿಕಾ ಸ್ವಾಗತಿಸಿ, ವೈಷ್ಣವಿ ಎಚ್ ಡಿ. ವಂದಿಸಿದರು. ರೋಹನ್ ಗೌಡ ಹಾಗೂ ರಕ್ಷಿತಾ ನಿರೂಪಿಸಿದರು.