ಕರಾವಳಿಸುಳ್ಯ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ನೈರ್ಮಲ್ಯ ವಾರಾಚರಣೆ, ವೈಯಕ್ತಿಕ ಸ್ವಚ್ಛತೆ, ಪೋಷಕಾಂಶಯುಕ್ತ ಆಹಾರದ ಕುರಿತು ಪ್ರಾತ್ಯಕ್ಷಿಕೆ

237

ನ್ಯೂಸ್ ನಾಟೌಟ್: ವಿಶ್ವ ಮಹಿಳಾ ನೈರ್ಮಲ್ಯ ದಿನದ ( ಜೂ.1) ಅಂಗವಾಗಿ ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ನೈರ್ಮಲ್ಯ ವಾರವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಸೂತಿ ತಂತ್ರ ಹಾಗೂ ಸ್ತ್ರೀ ರೋಗ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ರಶ್ಮಿ ಕೆ.ಎಸ್. ಮಾತನಾಡಿ, ಋತುಸ್ರಾವ, ವಿವಿಧ ಸ್ಯಾನಿಟರಿ ಉತ್ಪನ್ನಗಳು, ಮುಟ್ಟಿನ ಸಮಯದಲ್ಲಿ ಮಹಿಳೆಯರ ವೈಯಕ್ತಿಕ ನೈರ್ಮಲ್ಯ ಹಾಗೂ ಈ ಸಮಯದಲ್ಲಿ ಸೇವಿಸಬೇಕಾದಂತಹ ಪೋಷಕಾಂಶಯುಕ್ತ ಆಹಾರದ ಕುರಿತು ಮಾಹಿತಿ ನೀಡಿದರು.

ಚಿನ್ಮಯಿ, ಕಾವ್ಯ ಗೌಡ, ಲಕ್ಷ್ಮಿ ಹಾಗೂ ಮೀನಾಕ್ಷಿ ಪ್ರಾರ್ಥಿಸಿದರು. ಸ್ನೇಹ ಕೆ.ಸಿ. ಸ್ವಾಗತಿಸಿ, ಸ್ವಾತಿ ಆರ್. ಎನ್. ವಂದಿಸಿದರು. ಸಂಪತ್ ಎಸ್.ಎಚ್. ಹಾಗೂ ದೀಕ್ಷಿತ ಎಂ.ಎಸ್. ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ., ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಎಂ., ಸಂಸ್ಥೆಯ ಎನ್.ಎಸ್. ಎಸ್. ಘಟಕದ ಯೋಜನಾಧಿಕಾರಿ ಡಾ. ಪ್ರಮೋದ್ ಪಿ.ಎ. ಹಾಗೂ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು ಹಾಗೂ ಕಲಿಕಾ ವೈದ್ಯರು ಉಪಸ್ಥಿತರಿದ್ದರು.

See also  ಸುಳ್ಯ: ನಿಲ್ಲಿಸಿದ್ದ ವ್ಯಾನ್ ಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ, ರಸ್ತೆಗೆ ಎಸೆಯಲ್ಪಟ್ಟ ಇಬ್ಬರು ಸವಾರರಿಗೆ ಗಾಯ, ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget