ಸುಳ್ಯ

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಾದಕ ವ್ಯಸನ & ಅಕ್ರಮ ಸಾಗಾಣಿಕೆ ವಿರುದ್ಧ ದಿನಾಚರಣೆ

ನ್ಯೂಸ್ ನಾಟೌಟ್ : ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ದಿನಾಚರಣೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡೆಮಿ ಆಫ್‌ ಲಿಬರಲ್‌ ಎಜ್ಯುಕೇಶನ್‌ (ರಿ) ಸುಳ್ಯ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಯೇನೆಪೋಯ ಮೆಡಿಕಲ್ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಕಾಕುಂಜೆ ಆಗಮಿಸಿದ್ದರು. ಮಾದಕ ವ್ಯಸನಕ್ಕೆ ತುತ್ತಾಗುವುದರಿಂದ ಯುವಜನತೆ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಮನೋವೈದ್ಯಶಾಸ್ತ್ರ ವಿಭಾಗದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಪೂನಂ ಸ್ವಾಗತಿಸಿದರು. ಪ್ರಥಮ ವರ್ಷದ GNM ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಭರತ್ ಹಾಗೂ ಡಾ. ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಅರಿವು ಮೂಡಿಸುವ ನಾಟಕ ಪ್ರದರ್ಶಿಸಲಾಯಿತು.

Related posts

ಸುಳ್ಯ:ಈಚರ್ ಲಾರಿ ಅಪಘಾತಗೊಂಡು ಅರ್ಧ ಗಂಟೆ ಲಾರಿಯಲ್ಲೇ ಬಾಕಿಯಾದ ಚಾಲಕ..!,ಸ್ಥಳೀಯರ ಸಹಕಾರದಿಂದ ಚಾಲಕ ಅಪಾಯದಿಂದ ಪಾರು..!

ಸುಳ್ಯಕ್ಕೆ ಬರ್ತಿದ್ದಾರೆ ಯುವಕರ ಸ್ಫೂರ್ತಿ ‘ಸಿಂಗಂ’ ಅಣ್ಣಾಮಲೈ..!

ಸುಳ್ಯದ ಹೆಸರಾಂತ ವಸ್ತ್ರಮಳಿಗೆ ಕುಂ..ಕುಂ.. ಫ್ಯಾಶನ್ ನಲ್ಲಿ ಬಿಗ್ ಸೇಲ್ ಆಫರ್ ..! ಸ್ಕ್ರಾಚ್ ಕಾರ್ಡ್ ನಲ್ಲಿ ಗೆದ್ದವರಿಗೆ ಬಹುಮಾನ ಹಸ್ತಾಂತರ;ಗ್ರಾಹಕರಿಗೆ ಸುವರ್ಣಾವಕಾಶ..!ಮುಂದಿನ ವರ್ಷ ನಡೆಯುವ ಸುಳ್ಯ ಜಾತ್ರೆಯವರೆಗೂ ಆಫರ್ ಮುಂದುವರಿಕೆ