ಕ್ರೈಂವೈರಲ್ ನ್ಯೂಸ್

15 ದಿನಗಳಲ್ಲಿ 20 ಜನಕ್ಕೆ ಕಚ್ಚಿದ್ದ ಮೋಸ್ಟ್ ವಾಂಟೆಡ್ ಕೋತಿ ಸೆರೆ..! ಕೋತಿ ಹಿಡಿದು ಕೊಟ್ಟವರಿಗೆ ಘೋಷಣೆಯಾಗಿದ್ದ ಬಹುಮಾನದ ಮೊತ್ತವೆಷ್ಟು ಗೊತ್ತಾ?

309

ನ್ಯೂಸ್ ನಾಟೌಟ್ : ಕೋತಿಗಳು ಜನರ ಮೇಲೆ ದಾಳಿ ಮಾಡುವುದು, ಕಿರಿಕಿರಿ ಉಂಟು ಮಾಡುವುದನ್ನು ನೋಡಿದ್ದೇವೆ. ಇಲ್ಲೊಂದು ಕೋತಿ ಕಳೆದ 15 ದಿನಗಳಿಂದ 8 ಮಕ್ಕಳು ಸೇರಿದಂತೆ 20 ಜನಕ್ಕೆ ಕಚ್ಚಿ ಗಾಯಗೊಳಿಸಿದೆ. ಇದೀಗ ಮೋಸ್ಟ್ ವಾಂಟೆಡ್ ಕೋತಿಯನ್ನು ಸೆರೆ ಹಿಡಿಯಲಾಗಿದೆ.

ಮಧ್ಯಪ್ರದೇಶದ ರಾಜ್‌ಗಢ ಪಟ್ಟಣದಲ್ಲಿ ಕಳೆದ 15 ದಿನಗಳಿಂದ ಈ ಕೋತಿ ಜನರಿಗೆ ವಿಪರೀತ ಕಿರುಕುಳ ನೀಡಿತ್ತು. ಕೆಲವು ಮನೆಗಳ ಛಾವಣಿ ಹೆಂಚುಗಳು ಹಾಗೂ ಕಿಟಕಿಯ ಗಾಜುಗಳನ್ನು ಹೊಡೆದು ಹಾಕಿತ್ತು.ಈ ಕೋತಿಯನ್ನು ಹಿಡಿದುಕೊಟ್ಟವರಿಗೆ ₹ 21,000 ಬಹುಮಾನ ನೀಡುವುದಾಗಿ ವಿನೋದ್ ಸಾಹು ಘೋಷಣೆ ಮಾಡಿದ್ದರು.

ಕಳದೊಂದು ವಾರದಿಂದ ಸ್ಥಳೀಯರು ಸೇರಿದಂತೆ ನಾಲ್ಕು ತಂಡಗಳು ಕೋತಿಯನ್ನು ಹಿಡಿಯಲು ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಭೋಪಾಲ್‌ ಜಿಲ್ಲಾಧಿಕಾರಿಗಳ ಸೂಚನೆಯಂತೆ ಉಜ್ಜಯಿನಿಯಿಂದ ಕರೆಸಲ್ಪಟ್ಟ ಪ್ರಾಣಿ ರಕ್ಷಣಾ ತಂಡ ಕೋತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು. ಕೋತಿ ಹಿಡಿಯುವ ಪ್ರಯ್ನತ್ನಕ್ಕೆ ಸ್ಥಳೀಯರು ಸಹಕಾರ ನೀಡಿದರು. ಡ್ರೋನ್‌ ಕ್ಯಾಮೆರಾ ಬಳಕೆ ಮಾಡಿ ಹಾಗೂ ಅರವಳಿಕೆ ಮದ್ದು ನೀಡಿ ಕೋತಿಯನ್ನು ಹಿಡಿಯಲಾಯಿತು. ಈ ಕೋತಿಯನ್ನು ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕೋತಿಯನ್ನು ಸೆರೆ ಹಿಡಿದ ಉಜ್ಜಯಿಯ ಪ್ರಾಣಿ ರಕ್ಷಣಾ ತಂಡಕ್ಕೆ ₹ 21,000 ನಗದು ಬಹುಮಾನ ನೀಡಲಾಗುವುದು ಎಂದು ವಿನೋದ್ ಸಾಹು ಹೇಳಿದ್ದಾರೆ.

See also  ನೆಲ್ಯಾಡಿ: ಬಾಲಕಿಯನ್ನು ಬ್ಲ್ಯಾಕ್‌ಮೈಲ್‌ ಮಾಡಿ ಹಲವು ಸಲ ಅತ್ಯಾಚಾರ ನಡೆಸಿದ ರಿಕ್ಷಾ ಚಾಲಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget