ಕ್ರೈಂರಾಜ್ಯವೈರಲ್ ನ್ಯೂಸ್

ಅಂತರ್ಜಾತಿ ವಿವಾಹಕ್ಕೆ ಮನೆಯವರ ವಿರೋಧ..! ತಡರಾತ್ರಿ ಮನೆ ಬಿಟ್ಟು ಹೋದವರು ಜಮೀನೊಂದರಲ್ಲಿ ಹೆಣವಾಗಿ ಪತ್ತೆ..!

ನ್ಯೂಸ್ ನಾಟೌಟ್: ಅಂತರ್ಜಾತಿ ಮದುವೆಗೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದಲ್ಲಿ ನಡೆದಿದೆ.

ರಾಜ (23) ಹಾಗೂ ಪವಿತ್ರ (20) ಮೃತರು ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಸಿರಗುಪ್ಪ ಪಟ್ಟಣದ ನಿವಾಸಿಗಳು. ಸಿರಗುಪ್ಪದ ಆದೋನಿ ರಸ್ತೆಯ ಜಮೀನೊಂದರಲ್ಲಿ ರಾಜ ಹಾಗೂ ಪವಿತ್ರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರಿಬ್ಬರೂ ಅನ್ಯ ಜಾತಿಯವರಾಗಿದ್ದಕ್ಕೆ ಎರಡೂ ಮನೆಯಲ್ಲಿ ಮದುವೆಗೆ ವಿರೋಧ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ತಡರಾತ್ರಿ ಮನೆ ಬಿಟ್ಟು ಬಂದಿದ್ದರು. ಪೋಷಕರ ವಿರೋಧಕ್ಕೆ ಮನನೊಂದು ಬೆಳಗಿನ ಜಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಿರಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Click

https://newsnotout.com/2024/08/dog-bite-to-the-old-lady-kannada-news-viral-news-son-complaint/
https://newsnotout.com/2024/08/25-lakh-salary-kannada-news-upsc-exam-viral-news-nomore/
https://newsnotout.com/2024/08/rahul-gandhi-kannada-news-sulthanpurcobbler-viral-news/
https://newsnotout.com/2024/08/prajwal-revanna-case-fsl-report-handover-to-the-sit-and-confirmed/
https://newsnotout.com/2024/08/wayanadu-army-dddbuild-bridge-kannada-news-kannada-landslide/
https://newsnotout.com/2024/08/mother-nomore-doubter-and-son-are-dipression-kannada-news/

Related posts

ಕೊಡಗು: ಕಾಲು ಜಾರಿ ಬಿದ್ದು ಎನ್.ಸಿ.ಸಿ ಅಧಿಕಾರಿ ಸಾವು!

ಗೆಳತಿಯನ್ನ ಕೊಂದು ಇಡೀ ಮನೆಗೆ ಬೆಂಕಿ ಇಟ್ಟು ನಾಟಕವಾಡಿದ್ದ ಉದ್ಯಮಿ ಅರೆಸ್ಟ್..! 6 ವರ್ಷಗಳಿಂದ ‘ಲಿವ್‌-ಇನ್‌ ರಿಲೇಷನ್‌ ಶಿಪ್‌’ ನಲ್ಲಿ ಇದ್ದ ಆಕೆಯ ದುರಂತ ಅಂತ್ಯ..!

ರಾಕೇಶ್‌ ಸಿದ್ದರಾಮಯ್ಯ ಸಾವಿನ ರಹಸ್ಯವೂ ಬಯಲಾಗಲಿದೆ ಎಂದ ಹೆಚ್.ಡಿ.ಕೆ..! ದಾಖಲೆಗಳಿವೆ ಎಂದ ಹೆಚ್.ಡಿ.ಕುಮಾರಸ್ವಾಮಿ