ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ವಿಮೆ ಹಣ ಪಡೆಯಲು ತನ್ನ ಎರಡೂ ಕಾಲುಗಳನ್ನೂ ಕತ್ತರಿಸಿಕೊಂಡದ್ದೇಗೆ ಆ ವ್ಯಕ್ತಿ..? ಏನಿದು ವಿಚಿತ್ರ ಪ್ರಕರಣ..?

ನ್ಯೂಸ್ ನಾಟೌಟ್: ವಿಮೆ ಹಣವನ್ನು ಪಡೆಯಲು ಸಣ್ಣಪುಟ್ಟ ವಂಚನೆಗಳನ್ನು ಮಾಡಿ ಕಟ್ಟು ಕಥೆ ಕಟ್ಟುವ ಬಗ್ಗೆ ಕೇಳಿರುತ್ತೇವೆ. ಆದರೆ ಅಮೆರಿಕದ ಮಿಸೌರಿಯಲ್ಲಿ ನೆಲೆಸಿರುವ 60ವರ್ಷದ ವ್ಯಕ್ತಿಯೊಬ್ಬರು ಯಾರೂ ಊಹಿಸದ ರೀತಿಯಲ್ಲಿ ವಿಮೆ ಹಣಕ್ಕಾಗಿ ಅಪರಾಧ ಎಸಗಿ ಸಿಕ್ಕಿಬಿದ್ದಿದ್ದಾರೆ. ಆರೋಗ್ಯ ವಿಮೆ ಹಣವನ್ನು ಪಡೆಯಲು ತನ್ನ ಎರಡೂ ಕಾಲುಗಳನ್ನು ಕತ್ತರಿಸಿಕೊಂಡಿದ್ದು ವಿಚಿತ್ರವಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಈತ ತನ್ನ ಎರಡೂ ಕಾಲುಗಳನ್ನು ಕತ್ತರಿಸಿಕೊಂಡಿದ್ದಾರೆ. ಇದಲ್ಲದೇ ವಿಮೆ ಹಣ ಪಡೆಯಲು ಟ್ರ್ಯಾಕ್ಟರ್‌ನ ಹಿಂಬದಿಯಲ್ಲಿ ಅಳವಡಿಸಿದ್ದ ಮೊವರ್‌ ನಿಂದ ಕಾಲು ತುಂಡಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ, ಈ ಅಪಘಾತದ ನಂತರ ಅವರ ಕಾಲು ಎಲ್ಲಿಯೂ ಪತ್ತೆಯಾಗಿರಲ್ಲಿಲ್ಲ. ಇದಲ್ಲದೇ ಕಾಲಿನ ಗಾಯ ಮೊವರ್‌ನಿಂದ ಕಾಲು ಕತ್ತರಿಸಿದಂತೆ ಕಾಣಿಸುತ್ತಿರಲಿಲ್ಲ.

ಇದರಿಂದ ಪೊಲೀಸರಲ್ಲಿ ಅನುಮಾನ ಹುಟ್ಟಿ ತನಿಖೆ ಆರಂಭಿಸಿದ್ದರು ಎನ್ನಲಾಗಿದೆ. ತನಿಖೆ ಪ್ರಾರಂಭಿಸಿದಾಗ ವ್ಯಕ್ತಿ ಪಾರ್ಶ್ವವಾಯುವಿನಿಂದ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿತ್ತು ಎಂದು ತಿಳಿದುಬಂದಿದೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವ್ಯಕ್ತಿ ಟ್ರ್ಯಾಕ್ಟರ್ ಹೇಗೆ ಚಲಾಯಿಸಿದ ಎಂಬ ಮತ್ತೊಂದು ಪ್ರಶ್ನೆ ಪೊಲೀಸರಲ್ಲಿ ಹುಟ್ಟಿಕೊಂಡಿದೆ. ಈ ವೇಳೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಸತ್ಯಾಂಶ ತಿಳಿದು ಗಾಬರಿಯಾಗಿದೆ. ವಿಮೆ ಹಣ ಪಡೆಯಲು ಈ ವ್ಯಕ್ತಿ ತನ್ನ ಎರಡೂ ಕಾಲುಗಳನ್ನು ಕತ್ತರಿಸಿ ಬಕೆಟ್ ಒಳಗೆ ಅಡಗಿಸಿಟ್ಟಿದ್ದ ಎನ್ನಲಾಗಿದೆ.

ಬಳಿಕ ಆಕ್ಸಿಡೆಂಟ್​​​​​ ಆಗಿದೆ ಸುಳ್ಳು ಕಥೆ ಹೇಳಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಪಾರ್ಶ್ವವಾಯುವಿಗೆ ಒಳಗಾದ ತನ್ನ ಕಾಲಿನಿಂದ ಯಾವುದೇ ಪ್ರಯೋಜನವಾಗದ ಕಾರಣ, ಅದನ್ನು ಕತ್ತರಿಸುವ ಮೂಲಕ ಹಣ ಪಡೆಯಲು ಬಯಸಿದ್ದರು. ಬಳಿಕ ಕತ್ತರಿಸಿದ ಕಾಲುಗಳನ್ನು ಸಂಬಂಧಿಕರೊಬ್ಬರ ಸಹಾಯದಿಂದ ಬಕೆಟ್‌ನಲ್ಲಿ ಇರಿಸಿ ಅದರ ಮೇಲೆ ಟೈಯರ್​​​ನಿಂದ ಮುಚ್ಚಿ ಅಡಗಿಸಿಟ್ಟಿದ್ದರು ಎನ್ನಲಾಗಿದೆ.

Related posts

ಪ್ರಿಯಕರನ ಹುಡುಕಿಕೊಂಡು ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಮಹಿಳೆಗೆ ಸಿನಿಮಾದಲ್ಲಿ ಆಫರ್ ..!,ಗೂಢಚಾರಿಣಿ ಆರೋಪ ಹೊತ್ತಿರುವ ಸೀಮಾ ಹೈದರ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ?

ಪೊಲೀಸ್‌ ಠಾಣೆಯಲ್ಲಿಯೇ ಅನ್ಯಧರ್ಮದ ಜೋಡಿಯ ಮದುವೆ ಮಾಡಿಸಿದ್ರಾ ಬಜರಂಗದಳದವರು..? ಯುವತಿ ತನ್ನ ಮನೆಯವರ ವಿರುದ್ಧವೇ ಬೆದರಿಕೆ ಕೇಸ್ ದಾಖಲಿಸಿದ್ದೇಕೆ?

ಬೆಳ್ತಂಗಡಿ: ರಿಕ್ಷಾ, ಕಾರು, ಪಿಕಪ್ ಮಧ್ಯೆ ಸರಣಿ ಅಪಘಾತ, ರಿಕ್ಷಾ ಚಾಲಕನಿಗೆ ಗಾಯ