ಕ್ರೈಂರಾಜ್ಯವೈರಲ್ ನ್ಯೂಸ್

ಇನ್‍ ಸ್ಟಾಗ್ರಾಂ ಪ್ರೇಯಸಿ ಕೈಕೊಟ್ಟಿದ್ದಕ್ಕೆ ನೇಣಿಗೆ ಶರಣಾದ ಯುವಕ..! 5 ವರ್ಷಗಳ ಪ್ರೀತಿ ಮರೆತ ಆಕೆ ಮಾಡಿದ್ದೇನು..?

ನ್ಯೂಸ್ ನಾಟೌಟ್: ಇನ್‍ಸ್ಟಾಗ್ರಾಂನಲ್ಲಿ ಸಿಕ್ಕಿದ್ದ ಪ್ರೇಯಸಿ ಕೈ ಕೊಟ್ಟಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ ಮಾನ್ವಿ ಪಟ್ಟಣದ ಜನತಾ ಹೌಸ್‌ ನಲ್ಲಿ ನಡೆದಿದೆ.

ಮಾನ್ವಿ ನಿವಾಸಿ ವರುಣ್(26) ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗಿದೆ. ಮಾವನ ಜತೆ ಪ್ರೇಯಸಿಯ ಮದುವೆ ನಿಶ್ಚಯವಾಗಿದ್ದಕ್ಕೆ ಖಿನ್ನತೆಗೊಳಗಾಗಿದ್ದ ಯುವಕ, ಮನೆಯಲ್ಲಿ ಸೀರೆಯಿಂದ ನೇಣುಬಿಗಿದುಕೊಂಡಿದ್ದಾನೆ ಎನ್ನಲಾಗಿದೆ.

ಇನ್‌ಸ್ಟಾಗ್ರಾಂ ಮೂಲಕ ವರುಣ್‌ ಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ದೇವಿಕಾ ಎಂಬ ಯುವತಿಯ ಪರಿಚಯವಾಗಿತ್ತು. 5 ವರ್ಷಗಳ ಹಿಂದೆಯೇ ಇನ್‌ಸ್ಟಾಗ್ರಾಂನಲ್ಲಿ ಪ್ರೀತಿ ಅರಳಿತ್ತು. ರಾಯಚೂರಿನಲ್ಲಿ 3 ವರ್ಷಗಳ ಕಾಲ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ದೇವಿಕಾಗೆ, ನಾಲ್ಕೈದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ವರುಣ್‌ ನನ್ನು ಯುವತಿ ದೂರ ಮಾಡಿದ್ದಳು.
ಪ್ರೇಯಸಿ ದೂರವಾಗಿದ್ದರಿಂದ ಮನನೊಂದು ಕೊನೆಯ ಬಾರಿ ವಿಡಿಯೋ ಕಾಲ್ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/bangla-desh-news-head-appointed-by-army-kannada-news/
https://newsnotout.com/2024/08/hindu-cricketer-shek-hassina-suppoerter-kannada-news/
https://newsnotout.com/2024/08/vinish-pagat-news-disqualified-from-final-kannada-news-hospitalised/
https://newsnotout.com/2024/08/wayana-landslide-prabhas-donation-for-cm-fund-kananda-news/

Related posts

11 ವರ್ಷದ ಬಾಲಕಿ ಮೇಲೆ ಶಾಲಾ ಮಾಲೀಕನಿಂದ ಅತ್ಯಾಚಾರ! ಇಲ್ಲಿದೆ ಅಕ್ರಮ ವಸತಿ ಶಾಲೆಯ ಕರಾಳ ಸ್ಟೋರಿ!

ವಯನಾಡ್ ಭೂಕುಸಿತದ ಬಗ್ಗೆ ಮೊದಲು ತುರ್ತು ಕರೆ ಮಾಡಿ ಮಾಹಿತಿ ನೀಡಿದ್ದ ಮಹಿಳೆ ಸಾವು..! ಆಕೆಯ ತಾಯಿ ಮತ್ತು ಮಕ್ಕಳು ಬಚಾವ್, ನದಿಯಲ್ಲಿ 166 ಅಂಗಾಂಗಗಳು ಪತ್ತೆ..!

25ನೇ ಕಾರ್ಗಿಲ್ ವಿಜಯ ದಿನ: ಯೋಧರ ಸ್ಮಾರಕಕ್ಕೆ ಪ್ರಧಾನಿ ಮೋದಿಯಿಂದ ಗೌರವ, ಅಂದು ಬಳಸಿದ್ದ ಯುದ್ಧೋಪಕರಣಗಳನ್ನು ವೀಕ್ಷಿಸಿದ ಮೋದಿ, ಇಲ್ಲಿದೆ ವಿಡಿಯೋ