ನ್ಯೂಸ್ ನಾಟೌಟ್: ಪ್ರೀತಿಗೆ ವಯಸ್ಸು, ಜಾತಿ, ಧರ್ಮದ ಹಂಗಿಲ್ಲ ಎಂಬಂತೆ, ಆಂಧ್ರಪ್ರದೇಶದ ಚಂದನ್ ಎಂಬ ಯುವಕನನ್ನು ಮದುವೆಯಾಗಲು ಅಮೆರಿಕದ ಮಹಿಳೆಯೊಬ್ಬರು ಭಾರತಕ್ಕೆ ಬಂದಿದ್ದಾರೆ.
ಹೌದು ಮೂಲತಹ ಫೋಟೋಗ್ರಾಫರ್ ಜಾಕ್ಲಿನ್ ಫೊರೆರೊ ಹಾಗೂ ಚಂದನ್ ಇಬ್ಬರು ಇನ್ ಸ್ಟಾಗ್ರಾಮ್ ಪ್ರೊಫೈಲ್ ನೋಡಿ ಲವ್ ಮಾಡಲು ಶುರು ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಇಬ್ಬರ ಪ್ರೇಮಕಥೆಯು ತುಂಬಾ ಸರಳವಾಗಿದೆ. ಹಾಯ್ ಎಂಬ ಸಂದೇಶದಿಂದ ಶುರುವಾದ ಪ್ರೀತಿ ಈಗ ಮದುವೆ ಆಗುವ ತನಕ ಬಂದು ನಿಂತಿದೆ. ಈ ಬಗ್ಗೆ ಖುದ್ದು ಅಮೆರಿಕಾದ ಫೋಟೋಗ್ರಾಫರ್ ಜಾಕ್ಲಿನ್ ಫೊರೆರೊ ತಮ್ಮ ಇನ್ ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಫೊರೆರೊ 14 ತಿಂಗಳು ಒಟ್ಟಿಗೆ ಮತ್ತು ಹೊಸ ಅಧ್ಯಾಯಕ್ಕೆ ಸಿದ್ಧ ಅಂತ ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಕೇವಲ 45 ಸೆಕೆಂಡುಗಳ ಕ್ಲಿಪ್ ನಲ್ಲಿ ಈ ಇಬ್ಬರ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದು ಹೇಗೆ ಮರೆಯಲಾರದ ಸಂಬಂಧವಾಗಿ ಬದಲಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್ನೂ ಈ ಇಬ್ಬರು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶಬರಿಮಲೆಯ ಪಂಬ ಸನ್ನಿಧಿಯಲ್ಲಿ ಬಂಟ್ವಾಳದ ಶಿಕ್ಷಕ ಸಾವು..! ಕುಸಿದು ಬಿದ್ದು ಮೃತ..!