ಕರಾವಳಿಪುತ್ತೂರು

28 ವರ್ಷಗಳಿಂದ ಪುತ್ತೂರಿನ ಜಾತ್ರೆಯಲ್ಲಿ ಉಚಿತ ಪಾನಕ ಹಂಚುತ್ತಿರುವ ರವೀಂದ್ರ! ಈ ಶ್ರಮಜೀವಿಯ ಜೀವನವೇ ಒಂದು ಪವಾಡ!

304

ನ್ಯೂಸ್ ನಾಟೌಟ್: ಗುರುವಿನ ಗುಲಾಮ ನಾಗುವ ತನಕ ದೊರೆಯದೇನ್ನಾ ಮುಕುತಿ ಅಂತ ಒಂದು ಮಾತಿದೆ. ಅದಕ್ಕೆ ಒಪ್ಪುವಂತ ವ್ಯಕ್ತಿಯೊಬ್ಬರು ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಯ ಸಮಯ ನಿನ್ನೆ ನಮ್ಮ ನ್ಯೂಸ್ ನಾಟ್ ಔಟ್ ಕಣ್ಣಿಗೆ ಬಿದ್ದಿದ್ದಾರೆ. ಅವರನ್ನು ಮಾತಾಡಿಸಿದಾಗ ತಿಳಿದ ವಿಚಾರ ಸಾತ್ವಿಕ ಸೇವಾ ಭಕ್ತಿಗೆ ಕೈಕನ್ನಡಿ ಹಿಡಿದಂತಿದೆ.

ದೇವಾಲಯದ ಅವರಣದ ಹೊರಗೆ ಭಗವಾನ್ ನಿತ್ಯಾನಂದ ಸ್ವಾಮಿಗಳ ಫೋಟೋ ಇಟ್ಟು ರವೀಂದ್ರ ಎಂಬ ವೃದ್ದ ವ್ಯಕ್ತಿ ಜಾತ್ರೆಗೆ ಬಂದ ಎಲ್ಲಾ ಭಕ್ತರಿಗೆ ವರ್ಷದಲ್ಲಿ ಮಹಾಲಿಂಗೇಶ್ವರ ಜಾತ್ರೆಯ ಒಂದು ದಿನ ಉಚಿತವಾಗಿ ಸಾವಿರಾರು ಜನರಿಗೆ ಕಾಳು ಮೆಣಸಿನ ಪಾನಕ ಹಂಚುವ ಕಾಯಕವನ್ನು 28ವರ್ಷಗಳಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೇ ನಡೆಸಿಕೊಂಡು ಬರುತ್ತಿದ್ದಾರೆ.

ರಿಕ್ಷಾ ಚಾಲಕರಾದ ರವೀಂದ್ರ ತಮ್ಮ 5ನೇ ವಯಸ್ಸಿನಲ್ಲಿರುವಾಗ ಪುತ್ತೂರಿನ ಬೋಳುವಾರಿನ ಆಂಜನೇಯ ಮಂತ್ರಾಲಯ ಬಳಿಯ ನಿತ್ಯಾನಂದ ನಿಲಯ ಎಂಬ ಹೋಟೆಲ್ನಲ್ಲಿ ಅನಂತ ಎನ್ನುವ ವ್ಯಕ್ತಿ ಪರಿಚಯವಾಗಿ ಕೇರಳದ ಮಹಾನ ಅವಧೂತ ಭಗವಾನ್ ನಿತ್ಯಾನಂದ ಸ್ವಾಮಿಗಳ ಪವಾಡ ವ್ಯಕ್ತಿತ್ವದ ಬಗ್ಗೆ ರವೀಂದ್ರರಿಗೆ ತಿಳಿಸಿದ್ದರು.

ಇದರಿಂದ ಪ್ರಭಾವಿತರಾದ ರವಿಂದ್ರ ಅವರಿಂದ ನಿತ್ಯಾನಂದ ಸ್ವಾಮಿಗಳ ಫೋಟೋ ತೆಗೆದುಕೊಳ್ಳುತ್ತಾರೆ, ಅಂದಿನಿಂದ ಮನೆಯಲ್ಲಿ ನಿತ್ಯಾನಂದ ಸ್ವಾಮಿಗಳ ಆರಾಧನೆ ಮಾಡುತ್ತಾ ಬಂದ ರವೀಂದ್ರರದ್ದು ಬಡತನದ ಕುಟುಂಬ, ಆದರೆ ನಿತ್ಯಾನಂದ ಸ್ವಾಮಿಗಳ ಮೇಲಿನ ಅನನ್ಯ ಭಕ್ತಿ ತಮ್ಮ ಬದುಕಿನ ಎಲ್ಲಾ ಕಷ್ಟಗಳ ಸಂದರ್ಭದಲ್ಲಿ ದಾರಿ ತೋರಿಸಿದೆ ಎಂದು ರವೀಂದ್ರ ಭಾವುಕರಾಗಿ ನೆನೆಯುತ್ತಾರೆ.

ಇದಾದ ಬಳಿಕ ಇವರು ಈ ಹಿಂದೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಅಂಗಡಿಯೊಂದರಲ್ಲಿ ನಿತ್ಯಾನಂದ ಸ್ವಾಮಿಗಳ ಮತ್ತೊಂದು ಫೋಟೋ ಖರೀದಿಸುತ್ತಾರೆ ಆಗ ಇವರ ಮನಸ್ಸಿಗೆ ಒಂದು ಆಲೋಚನೆ ಬರುತ್ತದೆ. ಆ ಚಿಂತನೆಯಂತೆ ಅಂದಿನಿಂದ ನಿತ್ಯಾನಂದ ಸ್ವಾಮಿಗಳ ಹೆಸರಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏನಾದರು ಸೇವೆ ಮಾಡಬೇಕೆಂದು ನಿರ್ಧರಿಸುತ್ತಾರೆ. ಅದುವೇ ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ಪಾನಕ ಸೇವೆಯನ್ನು ಮಾಡಲು ಅವರನ್ನು ಪ್ರೇರೇಪಿಸುತ್ತದೆ ಎನ್ನುತ್ತಾರೆ ರವೀಂದ್ರ.

ಕಷ್ಟದ ಕಾಲದಲ್ಲಿ ಯಾರು ಇಲ್ಲ ಅಂದಾಗ ಆ ಸಮಯದಲ್ಲಿ ಯಾರನ್ನಾದರೂ ಒಬರನ್ನು ನಿತ್ಯಾನಂದ ಗುರುಗಳು ಸಹಾಯಕ್ಕೆ ಕಳುಹಿಸುತ್ತಾರೆ ಎನ್ನುವುದು ರವೀಂದ್ರ ಅವರ ಬಲವಾದ ನಂಬಿಕೆ. ಸಾಲ ಮಾಡಿ ರಿಕ್ಷಾ ಖರೀದಿಸಿದ ಇವರು ತಮ್ಮ ಮಗಳ ಮದುವೆಯನ್ನು ಆ ರಿಕ್ಷಾದಲ್ಲಿ ದುಡಿದ ಹಣದಿಂದಲೇ ಮಾಡಿದ್ದು, ಇದಕ್ಕೆ ಆ ನಿತ್ಯಾನಂದ ಸ್ವಾಮಿಗಳ ಅನುಗ್ರಹವೇ ಕಾರಣ ಎನ್ನುತ್ತಾರೆ ರವೀಂದ್ರ.

ಎಂತಹದೆ ಪರಿಸ್ಥಿತಿ ಬಂದರು ಮರ್ಯಾದೆ ಹೋಗಲು ಬಿಡಲಿಲ್ಲ ನನ್ನ ಗುರುಗಳು, ಹಣಕ್ಕೆ ಕಷ್ಟ ಆದಾಗ ಯಾರಾದರೂ ಸಹಾಯಕ್ಕೆ ಪವಾಡ ರೀತಿಯಲ್ಲಿ ಒದಗಿ ಬರತ್ತಾದಂತೆ ಇದು ನಿತ್ಯಾನಂದರ ಮಹಿಮೆ ಎನ್ನತ್ತಾರೆ ರವೀಂದ್ರ. ಇದರಿಂದ ಪ್ರಭಾವಿತರಾದ ಮಗಳು ರಮ್ಯಾ ಕೂಡ ನಿತ್ಯಾನಂದ ಸ್ವಾಮಿಗಳ ಭಕ್ತೆಯಾಗಿದ್ದು, ಈ ಸೇವೆಗೆ ಮಗಳ ಪ್ರೋತ್ಸಾಹವೂ ಕಾರಣ ಎನ್ನುವುದು ರವೀಂದ್ರ ಅವರ ಮಾತು.

See also  ಮಾಧ್ಯಮಗಳ ಮೇಲೆ ಪೊಲೀಸರು ಹಾಕಿದ್ದ FIRಗೆ ಹೈಕೋರ್ಟ್ ತಡೆ, ಸುಳ್ಯ ಪೊಲೀಸರು ಹಾಕಿದ್ದ ಆ ಕೇಸ್ ಯಾವುದು..?

1980ರ ಸುಮಾರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದ ವೇಳೆ ಅನ್ಯ ಧರ್ಮದ ವ್ಯಕ್ತಿ ಕತ್ತಿಯಿಂದ ಹೊಟ್ಟೆಗೆ ತಿವಿಯುತ್ತಾರೆ ಆ ಅಪಾಯದ ಸಮಯದಲ್ಲೂ ದಾರಿಯಲ್ಲಿ ಹೋಗುವವರ ರೂಪದಲ್ಲಿ ಬಂದು ನನಗೆ ಸಹಾಯ ಮಾಡಿದವರು ನಿತ್ಯಾನಂದ ಸ್ವಾಮಿಗಳು ಎನ್ನುವುದು ಇವರ ಬಲವಾದ ನಂಬಿಕೆ.

ಮುಂದೆ ಇವರ ನಂತರವೂ ಈ ಸೇವೆ ನಡೆಯಬೇಕು ಎನ್ನುವುದು ಇವರ ಆಶಯ, ಅದಕ್ಕೆ ಹೆಗಲುಕೊಟ್ಟು ನಿಂತವಳು ಮಗಳು ರಮ್ಯಾ. ಕಳೆದ ವರ್ಷ ಮುಂಬೈನಿಂದ ಬಂದ ವ್ಯಕ್ತಿಯೊಬ್ಬರು ಈ ಪಾನಕ ಸೇವೆಗೆ ದಾನ ನೀಡಿದ್ದನ್ನು ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತಾರೆ ರವೀಂದ್ರ. ಇನ್ನೊಬ್ಬರ ಆಸ್ತಿ, ಸಂಪತ್ತಿಗೆ ಅಸೆ ಪಡಬಾರದು ಏನಿದ್ದರೂ ದುಡಿದೆ ಪಡೆಯುವುದೇ ಶಾಶ್ವತ, ಅತಿಯಾಗಿ ಯಾರ ಮೇಲೂ ನಿರೀಕ್ಷೆಗಳನ್ನು ಇಡಬಾರದು ಎನ್ನುವ ಮಾದರಿ ವ್ಯಕ್ತಿತ್ವ ರವೀಂದ್ರರದ್ದು.

  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget