ಬೆಂಗಳೂರು

ಕೋರಮಂಗಲ ಭೀಕರ ಅಪಘಾತಕ್ಕೆ ಇಂದ್ರಜಿತ್ ಲಂಕೇಶ್ ಕೊಟ್ರು ಕಾರಣ

ಬೆಂಗಳೂರು: ಕೋರಮಂಗಲದಲ್ಲಿ ಸಂಭವಿಸಿದ ಭೀಕರ ಆಡಿ ಕಾರು ಅಪಘಾತಕ್ಕೆ ಸಂಬಂಧಪಟ್ಟಂತೆ ನಿರ್ದೇಶಕ ಇಂದ್ರಜಿತ್‌ ಲಂಕೇಶ್ ಸ್ಫೋಟಕ ಮಾಹಿತಿಯನ್ನು ತಿಳಿಸಿದ್ದಾರೆ. ಡ್ರಗ್ಸ್ ಸೇವಿಸಿ ಚಾಲನೆ ನಡೆಸಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಮದ್ಯ ಸೇವನೆ ಮಾಡಿದಾಗ ಇಷ್ಟೊಂದು ಭೀಕರವಾಗಿ ಅಪಘಾತವಾಗುವುದಕ್ಕೆ ಸಾಧ್ಯವಾಗುವುದಿಲ್ಲ. ಯಾವಾಗ ತಮ್ಮ ಮೇಲೆ ತಮಗೆ ನಿಯಂತ್ರಣವೇ ಇರುವುದಿಲ್ಲವೋ ಅಂತಹ ಸಮಯದಲ್ಲಿ ಇಷ್ಟು ಭೀಕರವಾಗಿ ಅಪಘಾತವಾಗುತ್ತದೆ. ಅಪಘಾತ ನಡೆದ ಸ್ಥಳ ನನ್ನ ಮನೆಯ ಪಕ್ಕದ ರೋಡ್. ಅಲ್ಲಿ ಆರಾಮವಾಗಿ ವಾಹನ ಚಲಾಯಿಸಬಹುದು. ಆದರೆ ಇವರು ಬಂದು ಗುದ್ದಿರುವ ರಭಸ ನೋಡಿದರೆ ಸಾಕಷ್ಟು ಅನುಮಾನಗಳಿದೆ ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಹೊಸೂರು ಶಾಸಕನ ಪುತ್ರ ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದರು.

Related posts

7 ತಿಂಗಳ ಬಳಿಕ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡ ನಟ ದರ್ಶನ್..! ನಾಡಿನ ಜನತೆಗೆ ಈ ಮೂಲಕ ದಾಸ ಹೇಳಿದ್ದೇನು..?

ಡೆಂಗ್ಯೂ ಬಗ್ಗೆ ರೀಲ್ಸ್ ಮಾಡಿದ್ರೆ 1 ಲಕ್ಷ ರೂಪಾಯಿ ಬಹುಮಾನ..! ಏನಿದು ಹೊಸ ಅಭಿಯಾನ..? ನೀವು ಭಾಗವಹಿಸ್ಬಹುದಾ..?

ರೌಡಿಶೀಟರ್‌ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಪೇಜ್‌..! 60 ಅಕೌಂಟ್‌ ನಿಂದ 500ಕ್ಕೂ ಹೆಚ್ಚು ವಿಡಿಯೋ ಗಳನ್ನು ಡಿಲೀಟ್‌ ಮಾಡಿಸಿದ ಸಿಸಿಬಿ..! ಅಡ್ಮಿನ್‌ ಮೇಲೆ ಕೇಸ್ ದಾಖಲು..!