ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಇಂಡೋನ್ಯೇಷ್ಯಾದಲ್ಲಿ ಪ್ರವಾಸಿಗರ ಜೊತೆ ತಾತ್ಕಾಲಿಕ ಮದುವೆ..! ಏನಿದು ವಿಚಿತ್ರ ಪದ್ಧತಿ..!

ನ್ಯೂಸ್ ನಾಟೌಟ್: ಇಂಡೋನೇಷ್ಯಾದ ಕೆಲ ಭಾಗಗಳಲ್ಲಿ ತಾತ್ಕಾಲಿಕ ಮದುವೆಗಳ ಟ್ರೆಂಡ್‌ ವೊಂದು ಹುಟ್ಟಿಕೊಂಡಿದ್ದು ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಹಣಕ್ಕಾಗಿ ಪ್ರವಾಸಿಗರೊಂದಿಗೆ ತಾತ್ಕಾಲಿಕ ವಿವಾಹ ಬಂಧನಕ್ಕೆ ಒಳಗಾಗುವ ಉದ್ಯಮವೊಂದು ಇಂಡೋನೇಷ್ಯಾದ ಪನ್ಕಾಕ್ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇದನ್ನು “ಸಂತೋಷದ ಮದುವೆಗಳು” ಎಂದು ಕರೆಯಲಾಗುತ್ತಿದೆ.

ಈ ದೇಶದಲ್ಲಿ ಅತ್ಯಂತ ಕಡು ಬಡತನದ ಹಿನ್ನೆಲೆಯಿಂದ ಬಂದ ಯುವತಿಯರು ತಾತ್ಕಾಲಿಕ ಮದುವೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಂಡೋನೇಷಿಯಾ ಆತ್ಯಾಕರ್ಷಕ ಪ್ರವಾಸಿ ತಾಣವಾಗಿದ್ದು ಇಲ್ಲಿಗೆ ಲಕ್ಷಾಂತರ ಪ್ರವಾಸಿಗರು ಪ್ರೇಕ್ಷಣೀಯ ತಾಣಗಳನ್ನು ನೋಡಲೆಂದೇ ಬರುತ್ತಾರೆ. ಆದರೆ ಇಲ್ಲಿ ಬಡ ಯುವತಿಯರು ಪ್ರವಾಸಿಗರನ್ನು ಹಣಕ್ಕಾಗಿ ವಾರದ ಮಟ್ಟಿಗೆ ಮದುವೆಯಾಗುತ್ತಾರಂತೆ. ಇದನ್ನೇ ತಾತ್ಕಾಲಿಕ ಮದುವೆ ಎಂದು ಕರೆಯಲಾಗುತ್ತದೆ. ಇಂಡೋನೇಷ್ಯಾದ ಪುಂಕಾಕ್‌ ಎಂಬ ಹಳ್ಳಿಯಲ್ಲಿ ಇಂತಹದ್ದೊಂದು ಪದ್ಧತಿ ಇದೆ. ಅದಲ್ಲದೇ, ಸ್ಥಳೀಯ ಹೆಣ್ಣು ಮಕ್ಕಳೇ ದುಡ್ಡಿಗಾಗಿ ಯುವತಿಯರನ್ನು ಮದುವೆ ಮಾಡಿಕೊಳ್ಳುವ ಎಜೆನ್ಸಿಗಳನ್ನು ಪ್ರಾರಂಭಿಸಿದ್ದಾರೆ.

ಈ ಎಜೆನ್ಸಿಗಳು ಯುವತಿ ಹಾಗೂ ಇಲ್ಲಿಗೆ ಬಂದ ಪ್ರವಾಸಿಗರು ಒಪ್ಪಿಕೊಂಡರೆ ಮದುವೆ ಮಾಡಿ ಮುಗಿಸುತ್ತಾರೆ. ಇಲ್ಲಿಗೆ ಬಂದ ಪ್ರವಾಸಿಗರು ಮದುವೆಗಾಗಿ ವಧುದಕ್ಷಿಣೆ ಎಂದು ಲಕ್ಷಾಂತರ ರೂಪಾಯಿ ಹಣವನ್ನು ನೀಡಬೇಕು ಎಂದು ಬಳಿಕ ಬೇಡಿಕೆ ಇಡುವ ಘಟನೆಗಳು ನಡೆದಿವೆ. ಆದಾದ ಬಳಿಕ ತಮ್ಮ ತಮ್ಮ ದೇಶಕ್ಕೆ ಹೋರಾಟ ಪ್ರವಾಸಿಗರ ಜೊತೆಗಿನ ಈ ಮದುವೆಯು ರದ್ದಾಗುತ್ತದೆ. ಆ ಬಳಿಕ ಈ ಯುವತಿಯು ಬೇರೊಬ್ಬ ಪ್ರವಾಸಿಗನನ್ನು ಇದೇ ರೀತಿ ವರಿಸಿಕೊಳ್ಳುತ್ತಾಳೆ ಎನ್ನಲಾಗಿದೆ. ಇಲ್ಲಿನ ಮಹಿಳೆಯೊಬ್ಬಳು ತಾನು ಕನಿಷ್ಠ 20 ಬಾರಿ ಮದುವೆಯಾಗಿದ್ದೇನೆ. ಈಗ ಇಂಡೋನೇಷ್ಯಾದ ವ್ಯಕ್ತಿಯೊಬ್ಬನನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದಿದ್ದೇನೆ ಎಂದಿದ್ದಾಳೆ.

Click

https://newsnotout.com/2024/10/kiccha-sudeepa-bigboss-kananda-news-viral-news-kananda-news/
https://newsnotout.com/2024/10/darshan-bail-issue-to-verdict-kannada-news/
https://newsnotout.com/2024/10/siddaramayya-rti-kannada-news-snehamai-krishna/

Related posts

‘ಡ್ರೋನ್ ಪ್ರತಾಪ್ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡ್ತಾರೆ’ ಎಂದದ್ದೇಕೆ..? ವಿವಾದಾತ್ಮಕ ಹೇಳಿಕೆಯ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಪತ್ನಿಯ ಚಿತೆಗೆ ವೃದ್ಧ ಪತಿಯನ್ನು ತಳ್ಳಿ ಸಜೀವ ದಹನ..! ಓರ್ವ ಆರೋಪಿ ಅರೆಸ್ಟ್..!

ದಕ್ಷಿಣ ಕನ್ನಡ: ಆಟೊ ರಿಕ್ಷಾ ಚಾಲಕನಿಗೆ ಸಾರ್ವಜನಿಕರ ಎದುರಲ್ಲೇ ಚೂರಿ ಇರಿತ..! ಗಾಯಗೊಂಡ ಶರೀಫ್ ನನ್ನು ಆಸ್ಪತ್ರೆಗೆ ಸೇರಿಸಿದ ಸ್ಥಳೀಯರು..!