ನ್ಯೂಸ್ ನಾಟೌಟ್: ಭಾರತ- ಪಾಕ್ ನಡುವೆ ಏರ್ಪಟ್ಟ ಸಂಘರ್ಷಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ ಮಾತುಕತೆಯ ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇದರ ಮಧ್ಯೆ ಪಾಕ್ ಸೇನೆ ಜಮ್ಮು-ಕಾಶ್ಮೀರ, ರಾಜಸ್ಥಾನ ಸೇರಿದಂತೆ ಕೆಲವೆಡೆ ಡ್ರೋನ್ ದಾಳಿ ನಡೆಸಿ ತನ್ನ ನರಿಬುದ್ದಿಯನ್ನು ಪ್ರದರ್ಶಿಸಿದೆ. ಇದೆಲ್ಲದರ ನಡುವೆ ಸದ್ಯ ಪಾಕ್-ಭಾರತ ಗಡಿಗಳಲ್ಲಿ ಶಾಂತಿಯ ವಾತಾವರಣ ಮರಳುತ್ತಿದೆ.
ಪ್ರಸ್ತುತ ಮಧ್ಯಸ್ಥಿಕೆಯಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ 100 ಗಂಟೆಗಳ ಸಂಘರ್ಷ ಸದ್ಯ ಶಾಂತಿಯತ್ತ ಮರಳುತ್ತಿದೆ. ಕದನ ವಿರಾಮಕ್ಕೂ ಮುನ್ನ 100 ಗಂಟೆಗಳ ತೀವ್ರ ಸಂಘರ್ಷದ ಸಮಯದಲ್ಲಿ ತನ್ನ ದೇಶದ ಜನತೆ ಮತ್ತು ಇತರೆ ದೇಶಗಳ ದಿಕ್ಕನ್ನು ಸುಳ್ಳು ಸುದ್ದಿಗಳ ಮೂಲಕ ಬದಲಿಸಲು ಕುತಂತ್ರ ರೂಪಿಸಿದ ಪಾಕ್, ಮಾಹಿತಿ ಜಾಗವನ್ನು ಕೇವಲ ಸುಳ್ಳುಗಳ ಸುರಿಮಳೆಯಿಂದಲೇ ತುಂಬಿಸಿದ್ದು ವ್ಯಾಪಕ ಛೀಮಾರಿಗೆ ಕಾರಣವಾಯಿತು. ಭಾರತೀಯ ನಗರಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿಗಳನ್ನು ರೂಪಿಸಿದ ಪಾಕಿಸ್ತಾನ, ಭಾರತೀಯ ವಿಮಾನ, ವಾಯುನೆಲೆಯನ್ನು ಹೊಡೆದುರುಳಿಸಿದ್ದೇವೆ ಎಂಬ ಕಟ್ಟು ಕಥೆಗಳನ್ನು ಹಬ್ಬಿಸಿತ್ತು. ಅಂತಿಮವಾಗಿ ಈ ಸುಳ್ಳುಗಳನ್ನು ಬೇರು ಸಮೇತ ಕಿತ್ತು ಬಿಸಾಡಿದ ಭಾರತೀಯ ಸೇನೆ, ಇದಕ್ಕೆಲ್ಲ ತಕ್ಕ ಉತ್ತರ ಕೊಟ್ಟಿದೆ.
ಪಾಕ್ ಹೇಳಿದ ಸುಳ್ಳು ಕಥೆಗಳು
ಭಾರತದಲ್ಲಿ ಬ್ರಹ್ಮೋಸ್ ಸಂಗ್ರಹಣಾ ನೆಲೆ ನಾಶ, ಭಾರತದ S-400 ವ್ಯವಸ್ಥೆಗಳ ನಾಶ, ಭಾರತ ತನ್ನದೇ ನಗರಗಳ ಮೇಲೆ ಕ್ಷಿಪಣಿ ಹಾರಿಸಿದೆ, ಭಾರತ ಪಾಕಿಸ್ತಾನದ ಮಸೀದಿಗಳನ್ನು ಟಾರ್ಗೆಟ್ ಮಾಡಿದೆ. ಮೇ 7, 8 ಮತ್ತು 9ರಂದು ನಮ್ಮಿಂದ ಡ್ರೋನ್ ದಾಳಿ ನಡೆದಿಲ್ಲ, ಭಾರತೀಯ ವಾಯುನೆಲೆಗಳ ಧ್ವಂಸ, ಅಫ್ಘಾನಿಸ್ತಾನ ಟಾರ್ಗೆಟ್ ಮಾಡಿವೆ ಭಾರತೀಯ ಕ್ಷಿಪಣಿಗಳು ಮೊದಲಾದ ಸುಳ್ಳುಗಳನ್ನು ಹೇಳಿ ತನ್ನ ಮಾನ ಉಳಿಸಿಕೊಳ್ಳಲು ಯತ್ನಿಸಿದೆ. ಆದರೆ ಭಾರತೀಯ ಸೇನೆ ಇದಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸಿ ತಿರುಗೇಟು ನೀಡಿದೆ. ಎಷ್ಟಾದರೂ ಪಾಕ್ ತನ್ನ ಹುಟ್ಟುಗುಣವನ್ನು ಬಿಡಲು ಸಾಧ್ಯವೇ..?