ಕ್ರೈಂವೈರಲ್ ನ್ಯೂಸ್

ರನ್ ವೇ ಯಲ್ಲಿ ದಾರಿ ತಪ್ಪಿದ ವಿಮಾನ..? ಪಾರ್ಕಿಂಗ್ ಮಾಡುವ ಸ್ಥಳಕ್ಕೆ ವಿಮಾನವನ್ನು ಎಳೆತಂದದ್ದೇಗೆ..?

212

ನ್ಯೂಸ್ ನಾಟೌಟ್: ಅಮೃತಸರದಿಂದ ದಿಲ್ಲಿಗೆ ಬಂದ ಇಂಡಿಗೋ ವಿಮಾನವು ಭಾನುವಾರ(ಫೆ.11) ಬೆಳಿಗ್ಗೆ ಇಲ್ಲಿನ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ನಂತರ ಟ್ಯಾಕ್ಸಿವೇ ತಪ್ಪಿಸಿಕೊಂಡಿದ್ದು, ಸುಮಾರು 15 ನಿಮಿಷಗಳ ಕಾಲ ರನ್‌ವೇ ಒಂದನ್ನು ಬ್ಲಾಕ್ ಮಾಡಿತ್ತು ಎಂದು ವರದಿ ತಿಳಿಸಿದೆ.

ಇಂಡಿಗೋ A320 ಸಂಖ್ಯೆ 6E 2221 ವಿಮಾನವು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGIA) ಗೊತ್ತುಪಡಿಸಿದ ಟ್ಯಾಕ್ಸಿ ವೇ ತಪ್ಪಿ , ರನ್ ವೇ 28/10 ರ ಕೊನೆಯಲ್ಲಿ ಹೋಗಿ ನಿಂತಿದೆ.

ಈ ಘಟನೆಯಿಂದಾಗಿ ಸುಮಾರು 15 ನಿಮಿಷಗಳ ಕಾಲ ರನ್‌ವೇಯನ್ನು ನಿರ್ಬಂಧಿಸಲಾಯಿತು ಎಂದು ವರದಿ ತಿಳಿಸಿದೆ. ಇದರಿಂದಾಗಿ ಉಳಿದ ವಿಮಾನಗಳ ಸಮಯದಲ್ಲೂ ವ್ಯತ್ಯಯವಾಗಿದೆ ಎನ್ನಲಾಗಿದೆ.

ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ನಾಲ್ಕು ರನ್ ವೇ ಇರುವ ಈ ನಿಲ್ದಾಣದಲ್ಲಿ ಪ್ರತಿದಿನ ಸುಮಾರು 1,400 ವಿಮಾನಗಳು ಹಾರಾಟ ನಿರ್ವಹಿಸುತ್ತದೆ. ನಂತರ, ಇಂಡಿಗೋ ಟೋಯಿಂಗ್ ವ್ಯಾನ್ ವಿಮಾನವನ್ನು ರನ್‌ ವೇಯ ಕೊನೆಯಿಂದ ಪಾರ್ಕಿಂಗ್ ಮಾಡುವ ಸ್ಥಳಕ್ಕೆ ಎಳೆದುಕೊಂಡು ಬರಲಾಯಿತು ಎಂದು ಮೂಲಗಳು ತಿಳಿಸಿವೆ.

See also  ಕಾಸರಗೋಡು: ವಿವಾಹ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget