ವೈರಲ್ ನ್ಯೂಸ್

ಇಂಡಿಗೋ ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡದ್ದೇಕೆ ಪ್ರಯಾಣಿಕ? ರಾತ್ರೋರಾತ್ರಿ ತುರ್ತು ಭೂಸ್ಪರ್ಶ ಮಾಡಿದ ವಿಮಾನ! ಮುಂದೇನಾಯ್ತು?

ನ್ಯೂಸ್ ನಾಟೌಟ್: ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ಇಂಡಿಗೋ ಏರ್‌ಲೈನ್ ವಿಮಾನವು ಪ್ರಯಾಣಿಕನ ಅನಾರೋಗ್ಯ ಪರಿಸ್ಥಿತಿಯಿಂದಾಗಿ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಆತನ ಜೀವ ಉಳಿಸಲು ಸಾಧ್ಯವಾಗಿಲ್ಲ.ಸೋಮವಾರ (ಆಗಸ್ಟ್ 21) ರಾತ್ರಿ 8 ಗಂಟೆ ಸುಮಾರಿಗೆ ಇಂಡಿಗೋ ವಿಮಾನದಲ್ಲಿದ್ದ (6E 5093) 62 ವರ್ಷದ ಡಿ ತಿವಾರಿ ಎಂಬ ಪ್ರಯಾಣಿಕ ರಕ್ತದ ವಾಂತಿ ಮಾಡಿಕೊಂಡಿದ್ದಾರೆ.

ಹೀಗಾಗಿ ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ವಿಮಾನವು ನಾಗ್ಪುರದ ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕನನ್ನು ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜು-ಆಸ್ಪತ್ರೆಗೆ ದಾಖಲಿಸಲಾಯಿತು.

ಪ್ರಯಾಣಿಕನು ಕಿಡ್ನಿ ಮತ್ತು ಕ್ಷಯರೋಗದಿಂದ ಬಳಲುತ್ತಿದ್ದು, ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡಿದ್ದಾರೆ ಎಂದು ನಾಗ್ಪುರದ ಕಿಮ್ಸ್ ಆಸ್ಪತ್ರೆಯ ಬ್ರ್ಯಾಂಡಿಂಗ್ ಮತ್ತು ಕಮ್ಯುನಿಕೇಷನ್ಸ್ ಡಿಜಿಎಂ ಏಜಾಜ್ ಶಮಿ ಹೇಳಿದ್ದಾರೆ. ಆಸ್ಪತ್ರೆಗೆ ತಲುಪುವಾಗ ತಿವಾರಿ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ ಎನ್ನಲಾಗಿದೆ.

ಕಳೆದ ವಾರವಷ್ಟೇ ನಾಗ್ಪುರದಲ್ಲಿ ಇಂಡಿಗೋ ಪೈಲಟ್ ಸಾವನ್ನಪ್ಪಿದ್ದರು. ವಿಮಾನ ಟೇಕ್​ ಆಫ್ ಆಗಲು 55 ನಿಮಿಷಗಳು ಬಾಕಿ ಇತ್ತು. ಅಷ್ಟರಲ್ಲಿ ಬೋರ್ಡಿಂಗ್​ ಗೇಟ್​ ಬಳಿ ಕ್ಯಾಪ್ಟನ್ ಮನೋಜ್ ಸುಬ್ರಹ್ಮಣ್ಯಂ (40) ಎಂದು ಗುರುತಿಸಲಾದ ಪೈಲಟ್ ಕುಸಿದು ಬಿದ್ದಿದ್ದರು. ಹಠಾತ್ ಹೃದಯ ಸ್ತಂಭನದಿಂದಾಗಿ ಅವರು ಸಾ* ವನ್ನಪ್ಪಿದ್ದರು.

Related posts

ಮಡಿಕೇರಿ:10 ನೇ ತರಗತಿ ಬಾಲಕಿ ಭೀಕರ ಹತ್ಯೆ ಪ್ರಕರಣ, ಕೊಡವ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ

ಬೈಯುತ್ತಿದ್ದ ಯಜಮಾನನಿಗೆ ಚಪಾತಿ ಹಿಟ್ಟಿಗೆ ಮೂತ್ರ ಬೆರೆಸಿ ಅಡುಗೆ ಮಾಡುತ್ತಿದ್ದ ಮನೆಕೆಲಸದಾಕೆ..! ಕುಟುಂಬಸ್ಥರಿಗೆ ಅನಾರೋಗ್ಯ ಕಾಡಿದಾಗಲೇ ನೀಚ ಕೃತ್ಯ ಬಯಲಿಗೆ..!

ಸುಧಾಮೂರ್ತಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ ರಾಷ್ಟ್ರಪತಿ, ಈ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು..?