Latest

ಈ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಿಗೆ ‘ಸಿಂಧೂರಿ’ ಹೆಸರು ನಾಮಕರಣ;ಭಾರತೀಯ ಸೇನೆಗೆ ಪೋಷಕರಿಂದ ಗೌರವ

659

ನ್ಯೂಸ್‌ ನಾಟೌಟ್: ಆಪರೇಷನ್ ಸಿಂಧೂರ.. ಪಹಲ್ಗಾಮ್ ನಲ್ಲಿ ಸಿಂಧೂರ ಅಳಿಸಿದ ಉಗ್ರರ ಕೃತ್ಯಕ್ಕೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಪಾಕ್ ಉಗ್ರರ ಮೇಲೆ ಆಪರೇಷನ್ ಸಿಂಧೂರದ ಮೂಲಕ ಭಾರತ ಉತ್ತರ ನೀಡಿದೆ. ಇದೀಗ ಆಪರೇಷನ್ ಸಿಂಧೂರ

ಆರಂಭವಾದ ಗಳಿಗೆಯಲ್ಲಿ ಹುಟ್ಟಿದ ಮಗುವೊಂದಕ್ಕೆ ಸಿಂಧೂರಿ ಅನ್ನೋ ಹೆಸರಿಡಲಾಗಿದೆ. ಇದು ದೇಶ ಪ್ರೇಮಕ್ಕೆ ಸಾಕ್ಷಿಯೆಂಬಂತಿದೆ.ಹುಟ್ಟಿದ ಹೆಣ್ಣು ಮಕ್ಕಳಿಗೆ ಸಿಂಧೂರಿ ಹಾಗೂ ಗಂಡು ಮಕ್ಕಳಿಗೆ ಸಿಂಧೂರ್ ಹೆಸರಿಡುವುದರ ಮೂಲಕ ಭಾರತೀಯ ಸೇನೆಗೆ ಗೌರವ ನೀಡಲಾಗುತ್ತಿದೆ.

ಮೇ 7ರಂದು ಬಿಹಾರದ ಕತಿಹಾರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ. ಅಪ್ಪಟ ದೇಶಭಕ್ತ ಕುಂದನ್ ಕುಮಾರ್ ತನ್ನ ಮಗಳಿಗೆ ಸಿಂಧೂರಿ ಅನ್ನೋ ಹೆಸರಿಟ್ಟಿದ್ದಾರೆ. ನಮಗೆ ಭಾರತೀಯ ಸೇನೆಯ ಬಗ್ಗೆ ಅಪಾರ ಗೌರವ ಇದೆ. ಯೋಧರು ಅಮಾಯಕರನ್ನು ಸಾಯಿಸಿದ ಉಗ್ರರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಹೀಗಾಗಿ ತಮ್ಮ ಮಗಳಿಗೆ ಸಿಂಧೂರಿ ಅನ್ನೋ ಹೆಸರಿಟ್ಟು ಅವಳು ದೊಡ್ಡವಳಾದ ಮೇಲೆ ಇದರ ಅರ್ಥವನ್ನು ತಿಳಿಸುತ್ತೇವೆ ಎಂದಿದ್ದಾರೆ. ಬಿಹಾರದ ಆಸ್ಪತ್ರೆಯಲ್ಲಿ ಜನಿಸಿದ ಒಟ್ಟು 12 ಮಕ್ಕಳಿಗೂ ಹೆತ್ತವರು ಇದೇ ಹೆಸರನ್ನು ನಾಮಕರಣ ಮಾಡುತ್ತಿದ್ದಾರೆ. ಗಂಡು ಮಕ್ಕಳಿಗೆ ಸಿಂಧೂರ್ ಎಂದು ಹಾಗೂ ಹೆಣ್ಣು ಮಗು ಜನಿಸಿದರೆ ಸಿಂಧೂರಿ ಎಂದು ಕರೆಯುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ, ವೈದ್ಯರಿಂದಲೂ ಪೋಷಕರ ಈ ಕಾರ್ಯಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಹಲ್ಗಾಮ್ ಪ್ರತೀಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ಸಿಂಧೂರ ಅನ್ನೋ ಹೆಸರಿಟ್ಟಿದ್ದರು. ಉಗ್ರರಿಂದ ಗಂಡನನ್ನು ಕಳೆದುಕೊಂಡ ವಿಧವೆಯರಿಗೆ ಆಪರೇಷನ್ ಸಿಂಧೂರ ಮೂಲಕ ನ್ಯಾಯ ಕೊಡಿಸಲಾಗಿದೆ.

See also  ಚಲಿಸುತ್ತಿರುವ ರೈಲನ್ನು ಹತ್ತುವ ಭರದಲ್ಲಿ ಬಾಗಿಲಲ್ಲಿ ನಿಂತಿದ್ದ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ..! ಸ್ವಲ್ಪದರಲ್ಲಿ ಪಾರಾದ ವ್ಯಕ್ತಿಯ ವಿಡಿಯೋ ವೈರಲ್
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget