ನ್ಯೂಸ್ ನಾಟೌಟ್ : ಭಾರತೀಯ ಅಂಚೆ ಇಲಾಖೆಯ ಪೋಸ್ಟ್ ಗ್ರಾಮೀಣ ಡಾಕ ಸೇವಕ (ಜೆಡಿಎಸ್)ದಲ್ಲಿ ಒಟ್ಟು 40,889 ಹುದ್ದೆಗಳು ಖಾಲಿ ಇದೆ. ಉದ್ಯೋಗಾಸಕ್ತರು ಈ ಕೂಡಲೇ ಫೆ.16 ಒಳಗಾಗಿ ಅರ್ಜಿ ಸಲ್ಲಿಸಲು ಕೊನೆಯ ಅವಕಾಶವಾಗಿದೆ.
ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಹಾಗೂ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಡಾಕ ಸೇವಕ ಹುದ್ದೆಗಳು.
ಯಾವುದೇ ಮಾನ್ಯತೆ ಪಡೆದ ಭಾರತ ಸರ್ಕಾರ /ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶಗಳು ನಡೆಸುವ ಗಣಿತ ಮತ್ತು ಇಂಗ್ಲಿಷ್ (ಕಡ್ಡಾಯ ಅಥಾವ ಐಚ್ಛಿಕ ವಿಷಯವಾಗಿರಬೇಕು) ೧೦ನೇ ತರಗತಿಯ ಪಾಸ್ ಮಾಧ್ಯಮಿಕ ಶಾಲಾ ಪರೀಕ್ಷೆಯ ಪಾಸ್ ಪ್ರಮಾಣ ಪತ್ರ ಅಗತ್ಯವಿದೆ.
ಸಿಸ್ಟಮ್ ರಚಿಸಿದ ಮೆರಿಟ್ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅನುಮೋದಿತ ಬೋರ್ಡ್‌ಗಳ ೧೦ನೇ ತರಗತಿಯ ಮಾಧ್ಯಮಿಕ ಶಾಲಾ ಪರೀಕ್ಷೆಯಲ್ಲಿ ಪಡೆದ ಅಂಕಗಳು /ಶ್ರೇಣಿಗಳು/ಇದರ ಅಂಕಗಳನ್ನು ಒಟ್ಟು ಶೇಕಡಾವಾರು ೪ ದಶಮಾಂಶಗಳ ನಿಖರತೆಗೆ ಪರಿವರ್ತಿಸುವ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. ಸಂಬಂಧಪಟ್ಟ ಅನುಮೋದಿತ ಮಂಡಳಿಯ ಮಾನದಂಡಗಳ ಪ್ರಕಾರ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.