ದೇಶ-ವಿದೇಶವೈರಲ್ ನ್ಯೂಸ್

ಭಾರತದ ಯುಪಿಐ ಪೇಮೆಂಟ್ ಮಾಲ್ಡೀವ್ಸ್ ನಲ್ಲೂ ಜಾರಿಗೆ ತರಲು ತಯಾರಿ..! ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞನಿಂದ ಭಾರತದ UPI ಪೇಮೆಂಟ್ ಬಗ್ಗೆ ಶ್ಲಾಘನೆ..!

193

ನ್ಯೂಸ್ ನಾಟೌಟ್: ಜಗತ್ತಿನ ಹಲವು ದೇಶಗಳ ಗಮನ ಸೆಳೆದಿರುವ, ಮತ್ತು ಕೆಲ ದೇಶಗಳಲ್ಲಿ ಈಗಾಗಲೇ ಅಳವಡಿಕೆ ಆಗಿರುವ ಭಾರತದ ಪೇಮೆಂಟ್ ಸಿಸ್ಟಂ ಅದ ಯುಪಿಐ ಅನ್ನು ಮಾಲ್ಡೀವ್ಸ್ ಕೂಡಜಾರಿಗೆ ತರಲು ಮುಂದಾಗಿದೆ. ಹಣಕಾಸು ವಹಿವಾಟು ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲು ಯೂನಿಫೈಡ್ ಪೇಮೆಂಟ್ ಇಂಟರ್​​ಫೇಸ್ ಅನ್ನು ಜಾರಿ ಮಾಡುತ್ತಿರುವುದಾಗಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಹೇಳಿದ್ದಾರೆ.

ಆ ದೇಶದ ಸಂಪುಟದಿಂದ ಈ ಹಿಂದೆ ಯುಪಿಐ ಅಳವಡಿಕೆಗೆ ಶಿಫಾರಸು ಮಾಡಲಾಗಿತ್ತು. ಈಗ ಅಧ್ಯಕ್ಷರು ಈ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಭಾರತದ ಯುಪಿಐ ಅಳವಡಿಕೆಯಿಂದ ಹಣಕಾಸು ಒಳಗೊಳ್ಳುವಿಕೆ, ವಹಿವಾಟು ಕ್ಷಮತೆ ಹೆಚ್ಚಿಸಬಹುದು, ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಅನ್ನು ಉನ್ನತೀಕರಿಸಬಹುದು. ಹೀಗಾಗಿ, ಯೂನಿಫೈಡ್ ಪೇಮೆಂಟ್ ಇಂಟರ್​ಫೇಸ್ ಸಿಸ್ಟಂ ಅನ್ನು ಅಳವಡಿಸುವುದು ಉತ್ತಮ ಎಂದು ಮಾಲ್ಡೀವ್ಸ್​ನ ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವರು ಪ್ರಸ್ತಾವನೆ ಮಾಡಿದ್ದರು. ಇತ್ತೀಚೆಗೆ ಅಲ್ಲಿನ ಕ್ಯಾಬಿನೆಟ್ ಈ ಪ್ರಸ್ತಾಪವನ್ನು ಪರಿಗಣಿಸಿ ಅಂಗೀಕಾರ ನೀಡಿತ್ತು. ಈಗ ಅಧ್ಯಕ್ಷರು ಅಧಿಕೃತವಾಗಿ ಯುಪಿಐ ವ್ಯವಸ್ಥೆ ಜಾರಿ ಮಾಡಲಾಗುತ್ತಿರುವುದನ್ನು ಘೋಷಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ, ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಪ್ರೊಫೆಸರ್ ಪೌಲ್ ಮೈಕೇಲ್ ರೋಮರ್ ಅವರು ಭಾರತದ ಹಣಕಾಸು ವಹಿವಾಟು ವ್ಯವಸ್ಥೆಯನ್ನು ಶ್ಲಾಘಿಸಿದ್ದರು. ಭಾರತದ ಆಧಾರ್, ಯುಪಿಐನಂತಹ ವ್ಯವಸ್ಥೆಯನ್ನು ಇತರ ಅಭಿವೃದ್ದಿಶೀಲ ದೇಶಗಳು ಅನುಕರಿಸಬೇಕು ಎಂದು ಸಲಹೆ ನೀಡಿದ್ದರು.

Click

https://newsnotout.com/2024/10/baby-attacked-by-cheethah-kannada-news/
https://newsnotout.com/2024/10/kannada-news-girl-frined-nomore-misbehaviour-k/
https://newsnotout.com/2024/10/couple-mother-poisoned-child-kananda-news-s/
https://newsnotout.com/2024/10/govt-bus-collision-to-pedestrain-kannada-news-h/
https://newsnotout.com/2024/10/bengaluru-cold-drinks-kannada-news-10-crore-leater/
See also  ಮಂಗಳೂರು: ಮಸೀದಿ ಮೇಲೆ ಕಲ್ಲು ತೂರಾಟ ಪ್ರಕರಣ: ಉಪ್ಪಿನಂಗಡಿ ಭಾಗಗಳಲ್ಲಿ ಕಟ್ಟೆಚ್ಚರ..! ಇಲ್ಲಿದೆ ಘರ್ಷಣೆಯ ವಿಡಿಯೋ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget