Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ವಿಶ್ವದ ಟಾಪ್ 20 ಅತ್ಯಂತ ಹೆಚ್ಚು ಮಾಲಿನ್ಯ ನಗರಗಳಲ್ಲಿ ಭಾರತದ 13 ನಗರಗಳು ಸೇರ್ಪಡೆ..! ಯಾವುವು ಆ ನಗರಗಳು..?

458
Spread the love

ನ್ಯೂಸ್ ನಾಟೌಟ್: ವಿಶ್ವದ ಟಾಪ್ 20 ಅತ್ಯಂತ ಹೆಚ್ಚು ಮಾಲಿನ್ಯ ನಗರಗಳಲ್ಲಿ ಭಾರತದ 13 ನಗರಗಳು ಭಾರತದಲ್ಲಿವೆ ಎಂದು ಮಂಗಳವಾರ ಪ್ರಕಟವಾದ ಹೊಸ ವರದಿ ತಿಳಿಸಿದ್ದು, ಅಸ್ಸಾಂನ ಬೈರ್ನಿಹತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಗಾಳಿಯಲ್ಲಿನ ಮಾಲಿನ್ಯಕರ ಅಂಶವನ್ನು ಮಾಪನ ಮಾಡುವ ಸ್ವಿಸ್ ವಾಯು ಗುಣಮಟ್ಟ ತಂತ್ರಜ್ಞಾನ ಕಂಪನಿ ಐಕ್ಯೂ ಏರ್‌ ನ ವಿಶ್ವ ವಾಯು ಗುಣಮಟ್ಟ ವರದಿ 2024ರಲ್ಲಿ ಬಿಡುಗಡೆ ಮಾಡಿತ್ತು. ಇದರಲ್ಲಿ ದೆಹಲಿ ಜಾಗತಿಕವಾಗಿ ಅತ್ಯಂತ ಮಲಿನ ರಾಜಧಾನಿಯಾಗಿತ್ತು. ಭಾರತವು 2024 ರಲ್ಲಿ ವಿಶ್ವದ ಐದನೇ ಅತ್ಯಂತ ಮಾಲಿನ್ಯಭರಿತ ದೇಶವಾಗಿದೆ. 2023 ರಲ್ಲಿ ಮೂರನೇ ಸ್ಥಾನದಲ್ಲಿ ಭಾರತ ಈ ಬಾರಿ ಐದನೇ ಸ್ಥಾನಕ್ಕೆ ಜಿಗಿದಿದೆ.

ಆದಾಗ್ಯೂ, ವಿಶ್ವದ 10 ಅತ್ಯಂತ ಮಾಲಿನ್ಯ ನಗರಗಳ ಪೈಕಿ ಆರು ನಗರಗಳು ಭಾರತದಲ್ಲಿವೆ ಎಂದು ವರದಿ ಹೇಳಿದೆ. ದೆಹಲಿಯು ನಿರಂತರವಾಗಿ ಹೆಚ್ಚಿನ ಮಾಲಿನ್ಯ ಮಟ್ಟವನ್ನು ದಾಖಲಿಸಿದ್ದು, ವಾರ್ಷಿಕ ಸರಾಸರಿ PM2.5 ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 91.6 ಮೈಕ್ರೋಗ್ರಾಂಗಳಷ್ಟಿದ್ದು, 2023 ರಲ್ಲಿ ಪ್ರತಿ ಘನ ಮೀಟರ್‌ಗೆ 92.7 ಮೈಕ್ರೋಗ್ರಾಂಗಳಿತ್ತು ಎನ್ನಲಾಗಿದೆ.
ವಿಶ್ವದ ಅಗ್ರ 20 ಅತ್ಯಂತ ಕಲುಷಿತ ನಗರಗಳಲ್ಲಿರುವ 13 ಭಾರತೀಯ ನಗರಗಳಾಗಿದ್ದು, ಬೈರ್ನಿಹತ್, ದೆಹಲಿ, ಮುಲ್ಲನ್‌ಪುರ(ಪಂಜಾಬ್), ಫರಿದಾಬಾದ್, ಲೋನಿ, ದೆಹಲಿ, ಗುರುಗ್ರಾಮ್, ಗಂಗಾನಗರ, ಗ್ರೇಟರ್ ನೋಯ್ಡಾ, ಭಿವಾಡಿ, ಮುಜಫರ್‌ನಗರ, ಹನುಮಾನ್‌ಗಢ ಮತ್ತು ನೋಯ್ಡಾ ಮಾಲಿನ್ಯಭರಿತ ನಗರಗಳಾಗಿವೆ.

ಇದನ್ನೂ ಓದಿಸುನಿತಾ ವಿಲಿಯಮ್ಸ್ ಭೂಮಿಗೆ ಮರಳಲು ದಿನಾಂಕ ನಿಗದಿ..! ಮಾರ್ಚ್ 12ರಂದು ಬಾಹ್ಯಾಕಾಶ ನೌಕೆ ಉಡಾವಣೆ, ಮರಳಿ ಬರುವುದು ಯಾವಾಗ..?

ವಾಯು ಮಾಲಿನ್ಯವು ಭಾರತದಲ್ಲಿ ಗಂಭೀರ ಆರೋಗ್ಯ ಅಪಾಯವಾಗಿದ್ದು, ಇದು ಅಂದಾಜು 5.2 ವರ್ಷಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಎಂದು ವರದಿ ತಿಳಿಸಿದೆ.

See also  ಅರಂತೋಡು: ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಕೃಷ್ಣಪ್ಪ ನಿಧನ
  Ad Widget   Ad Widget   Ad Widget