ನ್ಯೂಸ್ ನಾಟೌಟ್: ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್ ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. 11 ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುಮನ್ ಈಗ ಧಾರಾವಾಹಿವೊಂದರಲ್ಲಿ ಪವರ್ ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಮೂಲತಃ ಮಂಗಳೂರಿನವರಾಗಿರುವ ಸುಮನ್ ತಲ್ವಾರ್ ದಕ್ಷಿಣದಲ್ಲಿ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡಿರುವವರು. ಈಗ ‘ಸ್ನೇಹದ ಕಡಲಲ್ಲಿ’ ಸೀರಿಯಲ್ ನಲ್ಲಿ ನಾಯಕ ಚಂದು ಗೌಡ ತಂದೆಯ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಮಾದವ್ ಅರಸ್ ಎಂಬ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೇ 12ರಿಂದ ರಾತ್ರಿ 8:30ಕ್ಕೆ ಪ್ರಸಾರವಾಗಲಿದೆ.
ರಮ್ಯಾ ಕೃಷ್ಣ ಜೊತೆ ನೀಲಾಂಬರಿ, ಬಿಂದಾಸ್, ಅರ್ಜುನ್, ಅಂಜದ ಗಂಡು, ವಜ್ರಕಾಯ, ಭರಾಟೆ ಸೇರಿದಂತೆ ಹಲವು ಕನ್ನಡದ ಸಿನಿಮಾಗಳಲ್ಲಿ ಸುಮನ್ ತಲ್ವಾರ್ ನಟಿಸಿದ್ದಾರೆ.