Latestರಾಜ್ಯಸಿನಿಮಾ

ನಟ ಡಾಲಿ ಧನಂಜಯ್ ಮದುವೆಗೆ ಅಂಚೆ ಪತ್ರದ ಮಾದರಿಯ ಆಹ್ವಾನ ಪತ್ರಿಕೆ..! ಮೆಚ್ಚುಗೆ ಸೂಚಿಸಿ ಉಡುಗೊರೆ ನೀಡಿದ ಅಂಚೆ ಇಲಾಖೆ

766

ನ್ಯೂಸ್‌ ನಾಟೌಟ್: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಧನಂಜಯ್ ಮದುವೆ ಆಮಂತ್ರಣ ಪತ್ರಿಕೆ ಮೆಚ್ಚಿ ಧನಂಜಯ್-ಧನ್ಯತಾ ದಂಪತಿಗೆ ಅಂಚೆ ಇಲಾಖೆ ವಿಶೇಷ ಉಡುಗೊರೆ ನೀಡಿದೆ.

ನಟ ಡಾಲಿ ಧನಂಜಯ್ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಡಾಲಿ ಧನಂಜಯ ಅಂಚೆ ಪತ್ರದ ಮಾದರಿಯ ಆಹ್ವಾನ ಪತ್ರಿಕೆ ವ್ಯಾಪಕ ವೈರಲ್ ಆಗಿತ್ತು.
ಅಲ್ಲದೆ ಎಲ್ಲೆಡೆ ಪ್ರಶಂಸೆ ಮತ್ತು ಮೆಚ್ಚುಗೆ ಗಳಿಸಿತ್ತು. ಡಾಲಿ ಧನಂಜಯ ಸ್ವತಃ ತಮ್ಮ ಕೈ ಬರವಣಿಗೆಯಲ್ಲಿ ಆಹ್ವಾನ ಪತ್ರಿಕೆ ಬರೆದು ಅದನ್ನು ಮುದ್ರಿಸಿ ಹಂಚಿದ್ದರು. ಇದೀಗ ಧನಂಜಯ್ ಮದುವೆ ಆಮಂತ್ರಣ ಪತ್ರಿಕೆ ಮೆಚ್ಚಿ ಧನಂಜಯ್-ಧನ್ಯತಾಗೆ ಅಂಚೆ ಇಲಾಖೆ ಸ್ಪೆಷಲ್ ಉಡುಗೊರೆ ನೀಡಿದ್ದಾರೆ.

ಧನಂಜಯ್-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದೆ. ಶುಭ ವಿವಾಹ ಎಂಬ ಮುದ್ರಣದೊಂದಿಗೆ ವಿಶೇಷವಾಗಿರುವ 12 ಸ್ಟ್ಯಾಂಪ್ ಗಳನ್ನ ಉಡುಗೊರೆಯಾಗಿ ನೀಡಿದೆ. ಮೈಸೂರು ಅಂಚೆ ವಿಭಾಗದ ಅಧಿಕಾರಿಗಳು ಧನಂಜಯ್ ಅವರನ್ನು ಭೇಟಿಯಾಗಿ ಗಿಫ್ಟ್ ನೀಡಿದ್ದಾರೆ.

ವಿಶೇಷ ಸ್ಟ್ಯಾಂಪ್ ನಲ್ಲಿ ಧನಂಜಯ್ ಹಾಗೂ ಧನ್ಯತಾ ಅವರ ಫೋಟೋಗಳನ್ನು ಬಳಸಲಾಗಿದೆ. ಇನ್ ಲ್ಯಾಂಡ್ ಲೆಟರ್ ಮಾದರಿಯ ಆಮಂತ್ರಣದ ಪತ್ರಿಕೆ ಹಲವರಿಗೆ ಮಾದರಿಯಾಗಿದೆ. ನಿಮ್ಮ ನಡೆಯಿಂದ ಮತ್ತೆ ಇನ್ ಲ್ಯಾಂಡ್ ಲೆಟರ್ ಗಳಿಗೆ ಬೇಡಿಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

See also  Darshan Thoogudeepa Case: ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಪಟ್ಟಣಗೆರೆ ಶೆಡ್ ಗೆ ಕರೆದೊಯ್ದ ಪೊಲೀಸರು..! ಸ್ಥಳ ಮಹಜರು ವೇಳೆ ದರ್ಶನ್ ಬಳಿ ಬಂದು ಕಣ್ಣೀರಿಟ್ಟ ಪವಿತ್ರ ಗೌಡ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget