ನ್ಯೂಸ್ ನಾಟೌಟ್: ಭಾರತ- ಪಾಕಿಸ್ತಾನ ಮಧ್ಯೆ ಕದನ ವಿರಾಮಕ್ಕೆ ನಾನು ನೇರವಾಗಿ ಮಧ್ಯಸ್ಥಿಕೆ ವಹಿಸಿದ್ದೆ ಎಂದು ಬಿಲ್ಡಪ್ ಕೊಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಯೂಟರ್ನ್ ಹೊಡೆದಿದ್ದಾರೆ.
ನಾನೇ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಹೇಳಲ್ಲ. ಆದರೆ ಭಾರತ-ಪಾಕ್ ಮಧ್ಯೆ ಸಂಘರ್ಷದ ಸಮಸ್ಯೆ ಬಗೆಹರಿಸಲು ಸಹಾಯ ಮಾಡಿದ್ದೆ ಅಷ್ಟೇ ಎಂದಿದ್ದಾರೆ.
ಕತಾರ್ ನಲ್ಲಿರುವ ಅಲ್-ಉದೈದ್ ವಾಯುನೆಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಹಾಗೆ ಮಾಡಿದೆ ಎಂದು ಹೇಳಲು ಬಯಸುವುದಿಲ್ಲ, ಆದರೆ ನಾನು ಖಂಡಿತವಾಗಿಯೂ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿದೆ ಎಂದು ತಿಳಿಸಿದರು.
ನಾನೇ ಭಾರತ- ಪಾಕ್ ಮಧ್ಯೆ ಮಧ್ಯಸ್ಥಿಕೆ ವಹಿಸಿ ಯುದ್ಧ ನಿಲ್ಲುವಂತೆ ಮಾಡಿದ್ದೆ ಎಂದು ಟ್ರಂಪ್ ಹೇಳುವ ಮೂಲಕ ಈ ಹಿಂದೆ ತನ್ನ ಬೆನ್ನನ್ನು ತಾನೇ ತಟ್ಟಿದ್ದರು.
ಕದನ ವಿರಾಮ ಸಂಬಂಧ ಭಾರತ ಅಧಿಕೃತವಾಗಿ ಪ್ರಕಟಿಸುವ ಮೊದಲೇ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದರು. ಮೇ 12 ರಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಮೊದಲು ಟ್ರಂಪ್ ಮತ್ತೆ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷವನ್ನು ನಾವು ನಿಲ್ಲಿಸಿದ್ದೇವೆ. ಒಂದು ವೇಳೆ ಸಂಘರ್ಷ ಮುಂದುವರಿಸಿದರೆ ಎಲ್ಲಾ ವ್ಯವಹಾರಗಳನ್ನು ನಿಲ್ಲಿಸುವುದಾಗಿ ಉದ್ದಟತನದ ಹೇಳಿಕೆ ನೀಡಿದ್ದರು. ಈ ಸಂಪೂರ್ಣ ಉಲ್ಟಾ ಹೊಡೆದಿದ್ದಾರೆ.
While addressing a crowd of U.S. military personnel in Qatar, US President Donald Trump reiterated his mediation efforts between India and Pakistan. He said:
“I don’t wanna say I did but I sure as hell helped settle the problem between Pakistan and India last week, which was… pic.twitter.com/DcwwZtDHRO
— Press Trust of India (@PTI_News) May 15, 2025
ಪ್ರಧಾನಿ ನರೇಂದ್ರ ಮೋದಿ ಎಲ್ಲಿಯೂ ತಮ್ಮ ಭಾಷಣದಲ್ಲಿ ಡೊನಾಲ್ಡ್ ಟ್ರಂಪ್ ಬಗ್ಗೆ ಮಾತನಾಡಿರಲಿಲ್ಲ. ಅಷ್ಟೇ ಅಲ್ಲದೇ ಭಾರತ ಪಾಕಿಸ್ತಾನದ ವಿಚಾರದಲ್ಲಿ ಮೂರನೇಯವರ ಅಗತ್ಯವಿಲ್ಲ. ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದರು.
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.ಇದರಲ್ಲಿ ಯಾರು ಮಧ್ಯಸ್ಥಿಕೆ ವಹಿಸಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆಯೂ ಹೇಳಿತ್ತು.
ಲೈವ್ ನಲ್ಲಿರುವಾಗಲೇ ಯುವತಿಯನ್ನು ಗುಂಡಿಕ್ಕಿ ಹತ್ಯೆ..! ವಿಡಿಯೋ ವೈರಲ್