Latestಕ್ರೈಂದೇಶ-ವಿದೇಶ

ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಪಾಕಿಸ್ತಾನದ 11 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ ಪಾಕ್..! 78 ಮಂದಿಗೆ ಗಾಯ..!

371

ನ್ಯೂಸ್‌ ನಾಟೌಟ್‌: ಭಾರತದೊಂದಿಗಿನ ಇತ್ತೀಚಿನ ಮಿಲಿಟರಿ ಘರ್ಷಣೆಯಲ್ಲಿ 11 ಸೈನಿಕರು ಮೃತಪಟ್ಟು 78 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಮಂಗಳವಾರ ಘೋಷಿಸಿದೆ.

ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಶನಿವಾರ ಒಪ್ಪಂದಕ್ಕೆ ಬಂದವು.

ಮಾತೃಭೂಮಿಯನ್ನು ರಕ್ಷಿಸುವಾಗ, ಪಾಕಿಸ್ತಾನದ ಸಶಸ್ತ್ರ ಪಡೆಗಳ 11 ಸಿಬ್ಬಂದಿ ಮೃತಪಟ್ಟು 78 ಜನರು ಗಾಯಗೊಂಡರು ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಮೃತರಾದ ಪಾಕ್ ಸೇನೆಯ ಸಿಬ್ಬಂದಿಗಳಲ್ಲಿ ಪಾಕಿಸ್ತಾನ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್, ಮುಖ್ಯ ತಂತ್ರಜ್ಞ ಔರಂಗಜೇಬ್, ಹಿರಿಯ ತಂತ್ರಜ್ಞ ನಜೀಬ್, ಕಾರ್ಪೋರಲ್ ತಂತ್ರಜ್ಞ ಫಾರೂಕ್ ಮತ್ತು ಹಿರಿಯ ತಂತ್ರಜ್ಞ ಮುಬಾಶಿರ್ ಸೇರಿದ್ದಾರೆ.

ದಾಳಿಯಲ್ಲಿ ಮೃತಪಟ್ಟ ಸೇನಾ ಸಿಬ್ಬಂದಿಗಳಲ್ಲಿ ನಾಯಕ್ ಅಬ್ದುಲ್ ರೆಹಮಾನ್, ಲ್ಯಾನ್ಸ್ ನಾಯಕ್ ದಿಲಾವರ್ ಖಾನ್, ಲ್ಯಾನ್ಸ್ ನಾಯಕ್ ಇಕ್ರಮುಲ್ಲಾ, ನಾಯಕ್ ವಕಾರ್ ಖಾಲಿದ್, ಸಿಪಾಯಿ ಮುಹಮ್ಮದ್ ಅದೀಲ್ ಅಕ್ಬರ್ ಮತ್ತು ಸಿಪಾಯಿ ನಿಸಾರ್ ಸೇರಿದ್ದಾರೆ ಎಂದು ಪಾಕ್ ಹೇಳಿದೆ.

ಪಾಕಿಸ್ತಾನ ಸಶಸ್ತ್ರ ಪಡೆಗಳು ಮರ್ಕಾ-ಎ-ಹಕ್’ ಬ್ಯಾನರ್ ಅಡಿಯಲ್ಲಿ ಪ್ರತಿದಾಳಿ ನಡೆಸಿದ್ದಾರೆ, ಆಪರೇಷನ್ ಬನ್ಯಾನಮ್ ಮರ್ಸೂಸ್ ಮೂಲಕ ನಿಖರ ಮತ್ತು ತೀಕ್ಷ್ಣವಾದ ಪ್ರತೀಕಾರದ ದಾಳಿಗಳನ್ನು ನೀಡಿತು ಎಂದು ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದೆ.

9ನೇ ತರಗತಿಯ ಬಾಲಕನನ್ನು ಚಾಕು ಇರಿದು ಕೊಂದ 6ನೇ ತರಗತಿಯ ಅಪ್ರಾಪ್ತ..! ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಬಡ ಕುಟುಂಬ..!

ಪಾಕ್ ದಾಳಿಗೆ ಯತ್ನಿಸಿದ್ದ ಅದಂಪುರ ವಾಯುನೆಲೆಯಲ್ಲಿ ಸೈನಿಕರ ಜೊತೆ ಪ್ರಧಾನಿ ಮೋದಿ ಮಾತುಕತೆ..! ಇಲ್ಲಿದೆ ಸಂಪೂರ್ಣ ಮಾಹಿತಿ

See also  ನಟ ದರ್ಶನ್‌ ಗೆ ಜಾಮೀನು ನೀಡದಂತೆ ಸುಪ್ರೀಂ ಕೋರ್ಟ್‌ಗೆ ಪೊಲೀಸರಿಂದ ಮೇಲ್ಮನವಿ..! ಅಗತ್ಯ ದಾಖಲೆ, ಕಾಗದ ಪತ್ರಗಳನ್ನು ಸಿದ್ಧತೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget