Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪ್ರವಾಸಕ್ಕೆ ಕರೆದೊಯ್ದು 11 ವರ್ಷದ ಮಗನ ಕತ್ತು ಸೀಳಿದ ತಾಯಿ..! ಮಗನನ್ನು ಕೊಂದ ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿದ ಮಹಿಳೆ..!

702

ನ್ಯೂಸ್‌ ನಾಟೌಟ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತ ಮೂಲದ ಮಹಿಳೆಯೊಬ್ಬರು ತಮ್ಮ 11 ವರ್ಷದ ಮಗನನ್ನು ನಿರ್ದಯವಾಗಿ ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ.

48 ವರ್ಷದ ಸರಿತಾ ರಾಮರಾಜು ಎಂಬವರು ತಮ್ಮ ಮಗನನ್ನು ಡಿಸ್ನಿಲ್ಯಾಂಡ್‌ ಗೆ ಮೂರು ದಿನಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲಿಯೇ ಹೋಟೆಲ್‌ ನಲ್ಲಿ ಮಗನ ಕತ್ತು ಸೀಳಿ ಕೊಲೆ ಮಾಡಿರುವುದು ಪೋಲಿಸರಿಗೆ ತಿಳಿದುಬಂದಿದೆ. ಮಗನನ್ನು ಕೊಂದ ನಂತರ, ಆಕೆಯೂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಮಗನನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ಸರಿತಾ ರಾಮರಾಜು 2018ರಲ್ಲಿ ತಮ್ಮ ಪತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಮಗು ತಂದೆಯ ಕಸ್ಟಡಿಯಲ್ಲಿ ಇತ್ತು. ಕೆಲ ದಿನಗಳ ಹಿಂದೆ ಮಗನನ್ನು ಭೇಟಿಯಾಗಿ ಕೆಲವು ದಿನಗಳ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ತಾಯಿ ಮಗನೊಂದಿಗೆ ಹೊರಟಿದ್ದರು.

ಡಿಸ್ನಿಲ್ಯಾಂಡ್‌ ಗೆ ಮೂರು ದಿನಗಳ ಪಾಸ್ ಖರೀದಿಸಿದ್ದಾಗಿ ಪತ್ತೆಯಾಗಿದೆ. ಮಗು ಕೂಡ ತಾಯಿಯ ಜತೆ ಖುಷಿಯಿಂದ ಪ್ರವಾಸಕ್ಕೆ ತೆರಳಿದ್ದ. ಸ್ಯಾಂಟಾ ಅನಾ ಎಂಬ ಸ್ಥಳದ ಹೋಟೆಲ್‌ ನಲ್ಲಿ ತಂಗಿದ್ದರು. ಮಾರ್ಚ್ 19ರಂದು ಹಿಂದಿರುಗಬೇಕಾಗಿತ್ತು.ಮಗನನ್ನು ತಂದೆ ಕಸ್ಟಡಿಗೆ ನೀಡಬೇಕಾಗಿತ್ತು. ಆದರೆ, ಅದಕ್ಕೂ ಮುನ್ನ ಈ ದುರ್ಘಟನೆ ನಡೆದಿದೆ.

ಅತ್ಯಂತ ವಿಚಿತ್ರವೆಂದರೆ, ಮಗನನ್ನು ಕೊಂದ ನಂತರ ತಾನೇ ಪೊಲೀಸರಿಗೆ ಕರೆಮಾಡಿ ವಿಷಯವನ್ನು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಗನನ್ನು ಕೊಲ್ಲಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ತನಿಖೆ ಮುಂದುವರಿದಿದೆ.

ಭಾರತದ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದೇನೆ ಎಂದು ಪ್ರಕಾಶ್ ರಾಜು ಹೇಳಿದ್ದರು. ದಂಪತಿಗಳು ಜನವರಿ 2018 ರಲ್ಲಿ ವಿಚ್ಛೇದನ ಪಡೆದಿದ್ದಾರೆ, ಈ ವೇಳೆ ತಂದೆ ರಾಜು ಕಸ್ಟಡಿಗೆ ಮಗನನ್ನು ನೀಡಲಾಯಿತು. ನ್ಯಾಯಾಲಯದ ದಾಖಲೆಗಳ ಪ್ರಕಾರ ಸರಿತಾ ರಾಮರಾಜು ಭೇಟಿ ಮಾಡುವ ಹಕ್ಕುಗಳನ್ನು ಮಾತ್ರ ಪಡೆದ್ದರು. ಈ ನೋವು, ಅಸಮಾಧಾನಗಳು ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿಗೋಲಿ ಸೋಡಾಗೆ ಅಮೆರಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ..! ಕೇಂದ್ರ ವಾಣಿಜ್ಯ ಸಚಿವಾಲಯ ಈ ಬಗ್ಗೆ ಹೇಳಿದ್ದೇನು..?

 

See also  ಕೋರ್ಟ್​ ಹಾಲ್ ​ನಲ್ಲಿ ದರ್ಶನ್ ಕೈ ಹಿಡಿದ ಪವಿತ್ರಾ..! ದರ್ಶನ್ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಿಕೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget