ಕರಾವಳಿ

ಮಡಿಕೇರಿ : ಭಾರತೀಯ ನೌಕಾ ದಳದ ಸಬ್‌ ಲೆಫ್ಟಿನೆಂಟ್ ಆಗಿ ಸ್ಪಂದನ ಆಯ್ಕೆ

ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸುಂಟಿಕೊಪ್ಪದ ಸ್ಪಂದನ ಸುರೇಶ್ ಭಾರತೀಯ ನೌಕಾ ದಳದ ಸಬ್‌ ಲೆಫ್ಟಿನೆಂಟ್ ಆಯ್ಕೆಯಾಗಿದ್ದಾರೆ.

ಎಮ್ಮೆಮಾಲ ನೇವಲ್ ಅಕಾಡೆಮಿಯಲ್ಲಿ ನಡೆದ ವಾರ್ಷಿಕ ಪದಗ್ರಹಣ ಸಮಾರಂಭದಲ್ಲಿ ಬ್ರೆವ್ ಹಾರ್ಟ್ ತಂಡದ ಕಮಾಂಡರ್ ಆಗಿ ತಂಡವನ್ನು ಸ್ಪಂದನ ಮುನ್ನಡೆಸಿದ್ದರು. ಇವರು ಸುಂಟಿಕೊಪ್ಪದ ಗುತ್ತಿಗೆದಾರ ಕೆ. ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿರುವ ಪುಷ್ಪಲತಾ ದಂಪತಿಯ ಪುತ್ರಿ. ಸ್ಪಂದನ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸುಂಟಿಕೊಪ್ಪದ ಸೇಂಟ್ ಆನ್ಸ್‌ನಲ್ಲಿ, ಇಂಜಿನಿಯರಿಂಗ್ ಪದವಿಯನ್ನು ಬೆಂಗಳೂರಿನ ನಿಟ್ಟೆ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದರು. ಇವರು ಪ್ರಸ್ತುತ ನೌಕಾಪಡೆಯ ವಿನ್ಯಾಸ ತಂತ್ರಜ್ಞಾನದಲ್ಲಿ ಉನ್ನತ ತರಬೇತಿಗಾಗಿ ವಿಶಾಖಪಟ್ಟಣದ ನೌಕಾ ಕೇಂದ್ರಕ್ಕೆ ನಿಯುಕ್ತಿಗೊಂಡಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

Related posts

ಪಶ್ಚಿಮ ಘಟ್ಟದ ಪರಿಸರ ಮತ್ತು ಪ್ರಕೃತಿ ಸಂರಕ್ಷಣೆ ಅಗತ್ಯ: ಯದುವೀರ ಒಡೆಯರ್‌

ಶಿರಾಡಿ ಘಾಟಿ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ

ಕಾಸರಗೋಡು : ಮನೆಯಿಂದ ಆಟವಾಡುತ್ತಾ ತೆರಳಿದ ನಾಲ್ವರು ಅಪ್ರಾಪ್ತ ಬಾಲಕರು ದಿಢೀರ್ ನಾಪತ್ತೆ..! ಮನೆಗೆ ಬಾರದೆ ಮಕ್ಕಳು ಹೋಗಿದ್ದೆಲ್ಲಿಗೆ..?