Latestಕ್ರೈಂದೇಶ-ವಿದೇಶರಾಜಕೀಯರಾಜ್ಯ

ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಭಾರತದ ಸಂಸದರ ನಿಯೋಗ ಏರ್ ​ಪೋರ್ಟ್​ನಲ್ಲಿ ಇಳಿಯುವ ವೇಳೆ ಡ್ರೋನ್ ದಾಳಿ..! ರಷ್ಯಾದಲ್ಲಿ ಭದ್ರತಾ ವೈಫಲ್ಯ..!

1.3k

ನ್ಯೂಸ್‌ ನಾಟೌಟ್: ಸಂಸದೆ ಕನ್ನಿಮೋಳಿ ನೇತೃತ್ವದ ಭಾರತದ ಸಂಸದರ ನಿಯೋಗ ಏರ್​ಪೋರ್ಟ್​ನಲ್ಲಿ ಇಳಿಯುವಾಗ ಡ್ರೋನ್ ದಾಳಿ ಸಂಭವಿಸಿದೆ. ಆಪರೇಷಬ್ ಸಿಂಧೂರ್ ಬಗ್ಗೆ ಇಡೀ ಜಗತ್ತಿಗೆ ಮಾಹಿತಿ ನೀಡಲು ಹಾಗೂ ಪಾಕ್​ ಬಣ್ಣ ಬಯಲು ಮಾಡಲು ಸಂಸದರ ನಿಯೋಗ ಹೊರಟಿದೆ. ಅದರಲ್ಲಿ ಒಂದು ನಿಯೋಗ ರಷ್ಯಾಗೆ ತೆರಳುತ್ತಿತ್ತು.

ಭಾರತೀಯ ಸಂಸದರ ನಿಯೋಗವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಈ ವಿಮಾನದಲ್ಲಿ ಡಿಎಂಕೆ ಸಂಸದೆ ಕನಿಮೋಳಿ ಇದ್ದರು. ಡ್ರೋನ್ ದಾಳಿಯಿಂದಾಗಿ, ಈ ವಿಮಾನವು ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಹಲವಾರು ಗಂಟೆಗಳ ಕಾಲ ಸುತ್ತುತ್ತಲೇ ಇತ್ತು.

ಹಲವಾರು ಗಂಟೆಗಳ ವಿಳಂಬ ಮತ್ತು ಭದ್ರತಾ ಪರಿಸ್ಥಿತಿಗಳ ಮೌಲ್ಯಮಾಪನದ ನಂತರ, ವಿಮಾನವು ಅಂತಿಮವಾಗಿ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಆಪರೇಷನ್ ಸಿಂಧೂರ್ ಬಗ್ಗೆ ಭಾರತದ ನಿಲುವನ್ನು ತಿಳಿಸಲು ಭಾರತದಿಂದ ಆರು ನಿಯೋಗಗಳು ವಿವಿಧ ದೇಶಗಳಿಗೆ ಹೋಗಿವೆ. ಭಾರತದಿಂದ ರಷ್ಯಾಕ್ಕೆ ತೆರಳಿರುವ ನಿಯೋಗದಲ್ಲಿ ಡಿಎಂಕೆ ಸಂಸದೆ ಕನ್ನಿಮೋಳಿ, ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಆರ್‌ಜೆಡಿ ಸಂಸದ ಪ್ರೇಮಚಂದ್ ಗುಪ್ತಾ, ಕ್ಯಾಪ್ಟನ್ ಬ್ರಿಜೇಶ್, ಅಶೋಕ್ ಕುಮಾರ್ ಮಿತ್ತಲ್ ಮತ್ತು ರಾಯಭಾರಿ ಮಂಜೀವ್ ಸಿಂಗ್ ಪುರಿ ಸೇರಿದ್ದಾರೆ.

ಸಂಸದೆ ಕನ್ನಿಮೋಳಿ ನೇತೃತ್ವದ ಸಂಸದರ ನಿಯೋಗ ಮೇ 22 ರಂದು ರಷ್ಯಾಕ್ಕೆ ತೆರಳಿತ್ತು. ಕನ್ನಿಮೋಳಿ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ತೊಂದರೆ ಅನುಭವಿಸಿದೆ ಎಂಬುದು ಈಗ ಬೆಳಕಿಗೆ ಬಂದಿದೆ. ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.
ಇದಾದ ನಂತರ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಯಿತು. ಮತ್ತು ಇಳಿಯಲು ಕಾಯುತ್ತಿದ್ದ ವಿಮಾನಗಳನ್ನು ತಾತ್ಕಾಲಿಕವಾಗಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿಸಲಾಗಿಲ್ಲ. ಮಾಸ್ಕೋ ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಹಲವಾರು ಗಂಟೆಗಳ ಕಾಲ ಸ್ಥಗಿತಗೊಳಿಸಿತು. ಕೊನೆಗೂ, ಬಹಳ ವಿಳಂಬದ ನಂತರ, ವಿಮಾನವು ಸುರಕ್ಷಿತವಾಗಿ ಇಳಿಯಿತು.

ವಿಟ್ಲ:ಪತ್ನಿಯ ಸೀಮಂತದ ದಿನವೇ ಪತಿ ಕುಸಿದು ಬಿದ್ದು ಸಾವು ! ಏನಿದು ಹೃದಯವಿದ್ರಾವಕ ಘಟನೆ?

ನಟ ಸಲ್ಮಾನ್​ ಖಾನ್​ ಮನೆಗೆ ಪ್ರವೇಶಿಸಲು ಯತ್ನಿಸಿದ ಮಹಿಳೆ ಅರೆಸ್ಟ್..! ಕಾರು ಬಳಸಿ ನಟನ ಮನೆಗೆ ನುಗ್ಗಿಸಲು ಯತ್ನಿಸಿದ ಮತ್ತೊಬ್ಬ ಪೊಲೀಸ್ ವಶಕ್ಕೆ..!

See also  ನಿಗೂಢವಾಗಿ ಕಾಣೆಯಾಗಿದ್ದ ಮಹಿಳೆ ಬಾವಿಯೊಳಗೆ ಜೀವಂತವಾಗಿ ಪತ್ತೆ..! 3 ದಿನಗಳ ಬಳಿಕ ಸಿಕ್ಕ ಆಕೆ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget