ಕರಾವಳಿ

ರೀಲ್ಸ್ ನಿಂದಲೇ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ:554 ಮಿಲಿಯನ್ ವೀವ್ಸ್‌ ಹೊಂದಿರುವ ಆ ವಿಡಿಯೋದಲ್ಲಿ ಅಂಥದ್ದೇನಿದೆ?

217

ನ್ಯೂಸ್‌ ನಾಟೌಟ್‌ :ರೀಲ್ಸ್‌ ಮೂಲಕ ಫೇಮಸ್‌ ಆದವರು ಅದೆಷ್ಟೋ ಮಂದಿ ಇದ್ದಾರೆ. ಕೆಲವರಿಗೆ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಕೂಡ ಇರುತ್ತಾರೆ.ತಾವು ಶೇರ್ ಮಾಡಿದ ವಿಡಿಯೋಗೆ ಎಷ್ಟು ವೀವ್ಸ್ ಬಂದಿದೆ, ಎಷ್ಟು ಲೈಕ್ಸ್ ಬಂದಿದೆ ಎಂದು ನೋಡುತ್ತಿರುತ್ತಾರೆ.ಇದೀಗ ಕೇರಳದ ಯುವಕನೊಬ್ಬನು, ಶೇರ್ ಮಾಡಿರುವ ರೀಲ್ಸ್ ವೊಂದು 554 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈ ಮೂಲಕ ಮುಹಮ್ಮದ್ ರಿಜ್ವಾನ್ ಹೆಸರು ವರ್ಡ್‌ ರೆಕಾರ್ಡ್ ಬುಕ್‌ನಲ್ಲಿಯೂ ಸೇರಿಕೊಂಡಿದೆ.

ಮುಹಮ್ಮದ್ ರಿಜ್ವಾನ್ ಎಂಬಾತನ @riswan_ಫ್ರೀಸ್ಟೈಲ್ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಒಂದು ರೀಲ್ಸ್ ಇಡೀ ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡಿರುವ ರೀಲ್ಸ್ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದು, ಈ ಮೂಲಕ ವಿಶ್ವ ದಾಖಲೆ ಬರೆದಿದ್ದಾನೆ. 2023ರ ನವೆಂಬರ್‌ನಲ್ಲಿ ಮಲಪ್ಪುರಂ ಜಿಲ್ಲೆಯ ಕೇರಳಕುಂಡ್ ಜಲಪಾತದಿಂದ ಫುಟ್ಬಾಲ್ ಫ್ರೀ ಕಿಕ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದ.

ಮುಹಮ್ಮದ್ ರಿಜ್ವಾನ್ 1.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಆದರೆ ಈ ಒಂದು ರೀಲ್ಸ್ ನಿಂದಲೇ ವಿಶ್ವ ದಾಖಲೆ ಪುಟದಲ್ಲಿ ತನ್ನ ಹೆಸರು ಸೇರಿದೆ. ಯುವಕ ಜಲಪಾತದ ಮುಂದೆ ನಿಂತು ಫುಟ್‌ಬಾಲ್ ಅನ್ನು ಒದೆಯುತ್ತಾ ಇರೋ ದೃಶ್ಯ.ಜಲಪಾತದ ಒಳಗೆ ಬಿದ್ದು ಬಳಿಕ ನೀರಿನಿಂದ ಹೊರಬರುವುದನ್ನು ಕಾಣಬಹುದು. ಈ ವಿಡಿಯೋ 554 ಮಿಲಿಯನ್ ವೀಕ್ಷಣೆ ಪಡೆದಿದ್ದು, ವೀವ್ಸ್ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.

ಈ ಬಗ್ಗೆ ರಿಜ್ವಾನ್ ಪ್ರತಿಕ್ರಿಯಿಸಿದ್ದು, ತಮಾಷೆಗಾಗಿ ವಿಡಿಯೋ ಮಾಡಲಾಗಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಮೋಜಿಗಾಗಿ ಮಾಡಿದ ವೀಡಿಯೊ ಇದು. ಈ ವಿಡಿಯೋ ತೆಗೆದಾಗ ಅಪ್ಲೋಡ್ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಆ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಬಹುದು ಎಂದುಕೊಂಡೆ. ಹತ್ತು ನಿಮಿಷಗಳ ನಂತರ, 200,000 ಜನರು ವೀಕ್ಷಿಸಿದರು. ಮನೆ ತಲುಪುವಷ್ಟರಲ್ಲಿ ಒಂದು ಮಿಲಿಯನ್ ವೀವ್ಸ್ ಕಂಡಿತ್ತು ಎಂದಿದ್ದಾರೆ. ಈ ರೀಲ್ಸ್ ಜರ್ಮನಿ, ಸ್ಪೇನ್ ಮತ್ತು ಫ್ರಾನ್ಸ್‌ನ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ ಎಂದು ಆತ ಹೇಳಿದ್ದಾನೆ.

See also  ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಧರ್ಮಸ್ಥಳ ಭೇಟಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget