ಕರಾವಳಿಕಾಸರಗೋಡು

ಭಾರತ ಜೂನಿಯರ್ ಏಷ್ಯಾಕಪ್ ಹಾಕಿ ತಂಡದಲ್ಲಿ ಕೊಡಗಿನ ಆಟಗಾರನಿಗೆ ಸ್ಥಾನ

218

ನ್ಯೂಸ್ ನಾಟೌಟ್: ಮೇ23 ರಿಂದ ಜೂನ್ 1ರ ತನಕ ನಡೆಯಲಿರುವ ಪುರುಷರ ಜೂನಿಯರ್ ಏಷ್ಯಾಕಪ್ ಹಾಕಿ 2023 ಕೂಟಕ್ಕೆ ಭಾರತ ತಂಡಕ್ಕೆ ಕೊಡಗಿನ ಚಂದುರ ಬಿ ಪೂವಣ್ಣ ಆಯ್ಕೆಯಾಗಿದ್ದಾರೆ.

ಮುಂಬರುವ ಕಿರಿಯರ ವಿಶ್ವಕಪ್ ಹಾಕಿ ಕೂಟಕ್ಕೆ ಆಯ್ಕೆಯಾಗುವ ನಿಟ್ಟಿನಲ್ಲಿ ಭಾರತಕ್ಕೆ ಮಹತ್ವದ ಅಗ್ನಿ ಪರೀಕ್ಷೆಯಾಗಿದ್ದು ಹಾಕಿ ಇಂಡಿಯಾ ಪ್ರಬಲ ಹದಿನೆಂಟು ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಕೊಡಗಿನ ಪೂವಣ್ಣ ಕೂಡ ಒಬ್ಬರು ಅನ್ನುವುದು ವಿಶೇಷ. ಕರ್ನಾಟಕದಿಂದ ಮೋಹಿತ್ ತಂಡದಲ್ಲಿ ಸ್ಥಾನ ಪಡೆದ ಮತ್ತೋರ್ವ ಆಟಗಾರರಾಗಿದ್ದಾರೆ. ಈ ಹಿಂದೆ ಚಂದುರ ಬಿ ಪೂವಣ್ಣಸುಲ್ತಾನ್ ಜೋಹರ್ ಕಪ್ ವಿಜೇತ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇವರು ಮೂಲತಃ ಕಂಡಂಗಾಲದ ಚಂದುರ ಎಸ್ ಬಾಬಿ ಹಾಗೂ ಅನಿಲ ದಂಪತಿಯ ಪುತ್ರರಾಗಿದ್ದಾರೆ.

See also  ಡಾ.ಅನುರಾಧಾ ಕುರುಂಜಿಯವರಿಗೆ ಎನ್ಎಸ್ಎಸ್ ಸೇವಾ ಸಂಗಮದಿಂದ ಸನ್ಮಾನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget